ಮುಂಬೈ: ಹಿಂದಿ ಚಿತ್ರರಂಗದ ಹಿರಿಯ ಗೀತೆ ರಚನೆಕಾರ ದೇವ್ ಕೊಹ್ಲಿ ಅವರು ಶನಿವಾರ ಮುಂಬೈನಲ್ಲಿ ನಿಧನರಾದರು, ಅವರಿಗೆ 80 ವರ್ಷ ವಯಸ್ಸಾಗಿತ್ತು.
ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹತ್ತು ದಿನದ ಹಿಂದೆ ಅವರನ್ನು ಮನೆಗೆ ಕರೆತರಲಾಗಿತ್ತು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ ಎಂದು ವಕ್ತಾರ ಪ್ರೀತಮ್ ಶರ್ಮಾ ತಿಳಿಸಿದ್ದಾರೆ.
ಮುಂಬೈನ ಲೋಖಂಡವಾಲಾ ಕಾಂಪ್ಲೆಕ್ಸ್ನಲ್ಲಿರುವ ಜುಪಿಟರ್ ಅಪಾರ್ಟ್ಮೆಂಟ್ನ 4ನೇ ಕ್ರಾಸ್ನಲ್ಲಿರುವ ದೇವ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಬಳಿಕ ಸಂಜೆ 6 ಗಂಟೆಗೆ ಮುಂಬೈನ ಓಶಿವಾರಾ ಸ್ಮಶಾನದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ದೇವ್ ಕೊಹ್ಲಿ ಮೈನೆ ಪ್ಯಾರ್ ಕಿಯಾ, ಬಾಜಿಗರ್, ಜುಡ್ವಾ 2, ಮುಸಾಫಿರ್, ಶೂಟ್ ಔಟ್ ಅಟ್ ಲೋಖಂಡ್ವಾಲಾ ಮತ್ತು ಟ್ಯಾಕ್ಸಿ ನಂ. 9211 ಸೇರಿದಂತೆ 100 ಕ್ಕೂ ಹೆಚ್ಚು ಚಿತ್ರಗಳಲ್ಲಿನ ಹಾಡುಗಳಿಗೆ ಪ್ರಸಿದ್ಧರಾಗಿದ್ದರು.
ಅನು ಮಲಿಕ್, ರಾಮ್ ಲಕ್ಷ್ಮಣ್, ಆನಂದ್ ರಾಜ್ ಆನಂದ್, ಆನಂದ್ ಮಿಲಿಂದ್ ಮುಂತಾದ ಸಂಗೀತ ನಿರ್ದೇಶಕರೊಂದಿಗೆ ಅವರು ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Kurugodu:ವಿದ್ಯುತ್ ಕೊರತೆ ನೀಗಿಸುವಂತೆ ಆಗ್ರಹಿಸಿ ರೈತರಿಂದ ಜೆಸ್ಕಾಂ ಸಿಬ್ಬಂದಿಗೆ ದಿಗ್ಭಂಧನ