Advertisement

ಈ ವಾರ ತೆರೆಗೆ; ಕಾವಿ ಕಪಟಕ್ಕೆ ಕಣ್ಣಾಗಲಿದ್ದಾನಾ “ವೇಷಧಾರಿ”

09:45 AM Jan 01, 2020 | Nagendra Trasi |

ಬೆಂಗಳೂರು: ಸಿನಿಮಾ ಎಂಬುದು ಅನಕ್ಷರಸ್ಥರನ್ನೂ ತಲುಪಿಕೊಳ್ಳುವಂತ ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮ ಎಂಬ ಹೆಗ್ಗಳಿಕೆ ಇದೆ. ಈ ಕಾರಣದಿಂದಲೇ ಸಿನಿಮಾಗಳಲ್ಲಿ ವಾಸ್ತವಕ್ಕೆ ಹತ್ತಿರವಾದ ಅಂಶಗಳೊಂದಿಗೆ ಸಮಾಜಮುಖಿ ವಿಚಾರಧಾರೆಗಳನ್ನೂ ಕೂಡಾ ಜನ ನಿರೀಕ್ಷಿಸುತ್ತಾರೆ.

Advertisement

ಆದರೆ ಹಾಗೆ ಸಮಾಜದ ಅವಗುಣಗಳಿಗೆ ಕಣ್ಣಾಗುವಂಥಾ ಕಥಾ ಹಂದರವನ್ನು ಚಿತ್ರೀಕರಿಸುವ ರಿಸ್ಕು ತೆಗೆದುಕೊಳ್ಳುವವರು ಕಡಿಮೆ. ಈ ವಾರ ಬಿಡುಗಡೆಗೊಳ್ಳಲಿರುವ ವೇಷಧಾರಿ ಚಿತ್ರದ ಮೂಲಕ ನಿರ್ದೇಶಕ ಶಿವಾನಂದ ಭೂಶಿ ಅಂಥಾದ್ದೊಂದು ಸಾಹಸಕ್ಕೆ ಕೈ ಹಾಕಿರುವಂತಿದೆ!

ಶ್ರೀ ಸಾಯಿ ಭಗವಾನ್ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅನಿಲ್ ಎಚ್ ಅಂಬಿ ನಿರ್ಮಾಣ ಮಾಡಿರುವ ಚಿತ್ರ ವೇಷಧಾರಿ. ಈ ಹಿಂದೆ ಟಿವಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಾ ಪತ್ರಕರ್ತರಾಗಿಯೂ ಅನುಭವ ತುಂಬಿಕೊಂಡಿದ್ದ ಶಿವಾನಂದ ಭೂಶಿ ಆ ಕಾರಣದಿಂದಲೇ ಈ ಸಮಾಜದ ಆಗುಹೋಗುಗಳನ್ನೂ ಕೂಡಾ ಚಿಕಿತ್ಸಕ ದೃಷ್ಟಿಯಿಂದ ದಿಟ್ಟಿಸುತ್ತಾ ಬಂದಿದ್ದಾರೆ.

Advertisement

ಅದಿಲ್ಲದೇ ಹೋಗಿದ್ದರೆ ಅವರ ಕಾವಿ ಕಳ್ಳಾಟದ ಕಥಾನಕವನ್ನೊಳಗೊಂಡಿರುವ ಕಾದಂಬರಿಯನ್ನು ಬರೆಯೋದಾಗಲಿ, ಅದನ್ನು ಸಿನಿಮಾ ಮಾಡೋದಾಗಲಿ ಖಂಡಿತಾ ಸಾಧ್ಯವಾಗುತ್ತಿರಲಿಲ್ಲ. ಅಂಥಾದ್ದೊಂದು ಸೂಕ್ಷ್ಮವಾದ ಕಥೆಯನ್ನು ಪಕ್ಕಾ ಮನೋರಂಜನಾತ್ಮಕ ಸ್ವರೂಪದಲ್ಲಿ ನಿರ್ದೇಶಕ ಶಿವಾನಂದ ಭೂಶಿ ನಿರ್ದೇಶನ ಮಾಡಿದ್ದಾರೆ.

ಸನ್ಯಾಸವೆಂದರೆ ಸುಲಭಕ್ಕೆ ದಕ್ಕುವ ಸಂಗತಿಯಲ್ಲ. ಆದರೆ ನಿಜಕ್ಕೂ ಅರಿಷಡ್ವರ್ಗಗಳನ್ನು ನಿಗ್ರಹಿಸಿಕೊಂಡು ಬದುಕಲು ಸಾಧ್ಯವಾ? ಕಾಡುವ ವಾಂಛೆಗಳಿಂದ, ಲೌಕಿಕ ಬದುಕಿನ ಝಗಮಗದಿಂದ ತಪ್ಪಿಸಿಕೊಂಡು ಬದುಕಲು ಸಾಧ್ಯವಾಗುತ್ತದಾ?  ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಡೋ ಪಾತ್ರದಲ್ಲಿ ನಾಯಕ ಆರ್ಯನ್ ನಟಿಸಿದ್ದಾರೆ. ಅವರ ಪಾತ್ರಕ್ಕಿಲ್ಲಿ ಹಲವಾರು ಶೇಡುಗಳಿದ್ದಾವಂತೆ. ಅದರಲ್ಲೊಂದಷ್ಟು ವಿಚಾರಗಳು ಟ್ರೇಲರ್ ಮೂಲಕವೇ ಜಾಹೀರಾಗಿವೆ. ಭರ್ಜರಿ ಕಾಮಿಡಿ ಕಚಗುಳಿಯೊಂದಿಗೆ ಗಹನವಾದ ವಿಚಾರವನ್ನು ಹೇಳ ಹೊರಟಿರುವ ವೇಷಧಾರಿ ಈ ವಾರವೇ ನಿಮ್ಮೆಲ್ಲರ ಮುಂದೆ ಪ್ರತ್ಯಕ್ಷವಾಗಲಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next