Advertisement

Udupi: ವಿಕಾರ್‌ ಜನರಲ್‌ ಮೊನ್ಸಿಂಜರ್‌ ಬ್ಯಾಪ್ಟಿಸ್ಟ್‌ ಮಿನೇಜಸ್‌ ನಿಧನ

04:41 PM Aug 23, 2023 | Team Udayavani |

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ವಿಕಾರ್‌ ಜನರಲ್‌ ಮೊನ್ಸಿಂಜರ್‌ ಬ್ಯಾಪ್ಟಿಸ್ಟ್‌ ಮಿನೇಜಸ್‌(75) ಆ.23ರಂದು ನಿಧನ ಹೊಂದಿದರು.

Advertisement

1974 ರಲ್ಲಿ ಇವರಿಗೆ ಯಾಜಕಿ ದೀಕ್ಷೆ ಲಭಿಸಿತು. ಇವರು ರೋಮ್‌ನ ಲ್ಯಾಟರನ್‌ ವಿ.ವಿ.ಯಿಂದ ನೈತಿಕ ದೇವತಾಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದಿದ್ದಾರೆ.

ಅಗ್ರಾನರ್‌ ಮೋಸ್ಟ್‌ ಹೋಲಿ ರಿಡೀಮರ್‌ ಚರ್ಚ್‌ನಲ್ಲಿ ಸಹಾಯಕ ಧರ್ಮಗುರು ಮತ್ತು ಜೆಪ್ಪುವಿನ ಸೈಂಟ್‌ ಆ್ಯಂಟೋನಿ ಚಾರಿಟೆಬಲ್‌ ಸಂಸ್ಥೆಗಳಲ್ಲಿ ಸಹಾಯಕ ನಿರ್ದೇಶಕರಾದ ಅನಂತರ, ಅವರನ್ನು 1977 ರಲ್ಲಿ ರೋಮ್‌ಗೆ ನೈತಿಕ ದೇವತಾಶಾಸ್ತ್ರದಲ್ಲಿ ಉನ್ನತ ಅಧ್ಯಯನಕ್ಕಾಗಿ ನಿಯೋಜಿಸಲಾಯಿತು.

1982 ರಲ್ಲಿ ಅವರ ಡಾಕ್ಟರೇಟ್‌ ಅಧ್ಯಯನವನ್ನು ಪೂರ್ಣಗೊಳಿಸಿ ಬಳಿಕ ಬೆಂಗಳೂರಿನ ಸೈಂಟ್‌ ಪೀಟರ್ಸ್‌ ಪೊಂಟಿಫಿಕಲ್‌ ಸೆಮಿನರಿಗೆ ಸೇರಿ ಅಲ್ಲಿ 1994 ರವರೆಗೆ ಸೇವೆ ಸಲ್ಲಿಸಿದರು. 1995ರಲ್ಲಿ ಮಂಗಳೂರಿನ ಜೆಪ್ಪುವಿನಲ್ಲಿರುವ ಸೈಂಟ್‌ ಜೋಸೆಫ್ ಇಂಟರ್‌-ಡಯಾಸಿಸ್‌ ಸೆಮಿನರಿಯ ಆಡಳಿತಾಧಿಕಾರಿಯಾಗಿ ನೇಮಕಗೊಂಡರು.

1997ರಲ್ಲಿ ಫಾದರ್‌ ಮುಲ್ಲರ್‌ ಚಾರಿಟೆಬಲ್‌ ಸಂಸ್ಥೆಗಳ ನಿರ್ದೇಶಕರಾಗಿ 2007ರ ವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು. 2012 ರಲ್ಲಿ ಉಡುಪಿಯ ಹೊಸ ಧರ್ಮಪ್ರಾಂತ್ಯದ ಮೊದಲ ವಿಕಾರ್‌ ಜನರಲ್‌ ಆಗಿ ನೇಮಕಗೊಂಡರು. ಅದಕ್ಕೂ ಮುನ್ನ ಅವರು ಉಡುಪಿ ಜಿಲ್ಲೆಯ ಎಪಿಸ್ಕೊಪಲ್‌ ವಿಕಾರ್‌ ಆಗಿ ಸೇವೆ ಸಲ್ಲಿಸಿದ್ದರು.

Advertisement

ಕಳೆದ ಹತ್ತೂವರೆ ವರ್ಷಗಳಿಂದ ಧರ್ಮಪ್ರಾಂತ್ಯದ ಒಳಿತಿಗಾಗಿ ಬಿಷಪ್‌ ಅವರ ವಿನಮ್ರ ಸೇವಕ ಮತ್ತು ನಿಷ್ಠಾವಂತ ಸಹಯೋಗಿಯಾಗಿ ಕೆಲಸ ಮಾಡಿದರು. ಇವರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೊ, ಪ್ರಸ್ತುತ ಶ್ರೇಷ್ಠ ಗುರು ಮೊನ್ಸಿಂಜರ್‌ ಫ‌ರ್ಡಿನಂಡ್‌ ಗೊನ್ಸಾಲ್ವಿಸ್‌, ಕುಲಪತಿ ರೆ| ಡಾ| ರೋಶನ್‌ ಡಿ’ಸೋಜಾ, ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಸಂತಾಪ ಸೂಚಿಸಿದರು.

ಇದನ್ನೂ ಓದಿ: 15th BRICS Summit ; ಭವಿಷ್ಯದ-ಸಿದ್ಧ ಸಂಸ್ಥೆಯನ್ನಾಗಿಸಬೇಕು : ಪ್ರಧಾನಿ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next