Advertisement

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ತೀರಾ ಅಪರೂಪದ ಮೀನು ಪತ್ತೆ

01:48 AM Jan 30, 2020 | Sriram |

ಮಲ್ಪೆ: ರಾಜ್ಯದ ಕರಾವಳಿ ತೀರದಲ್ಲಿ ತೀರಾ ಅಪರೂಪವಾಗಿ ಕಾಣಸಿಗುವ ಎರಡು ಜಾತಿಯ ಮೀನುಗಳು ಮಂಗಳವಾರ ಮಲ್ಪೆ ಬಂದರಿನಲ್ಲಿ ಬೋಟಿನಿಂದ ಮೀನು ಇಳಿಸುವ ವೇಳೆ ಕಾಣಸಿಕ್ಕಿದೆ. ವಿಭಿನ್ನ ಜಾತಿಯ ಎರಡು ಮೀನುಗಳು ಮಲ್ಪೆ ಹನುಮಾನ್‌ನಗರದ ಪ್ರಶಾಂತ್‌ ಕೋಟ್ಯಾನ್‌ ಅವರ ಹನುಮಶಾರದೆ ಆಳಸಮುದ್ರ ಬೋಟಿನ ಬಲೆಗೆ ಬಿದ್ದಿದೆ.

Advertisement

ವೈಜ್ಞಾನಿಕವಾಗಿ ವೆರಿಯೋಲಾ ಲೌಟಿ ಎಂದು ಹೆಸರು. ಇದಕ್ಕೆ ಹಳದಿ ಬಾಲದ ಗೊಬ್ಬರೆ ಮೀನು, ಕೊಳಾಜಿ ಮೀನು ಎಂದು ಕರೆಯುತ್ತಾರೆ. ಹವಳ ಬಂಡೆಗಳ ಕಲ್ಲುಗಳಲ್ಲಿ ವಾಸವಾಗಿರುವ ಈ ಮೀನು 15ಮೀ. ನಿಂದ 300 ಮೀ. ಆಳದಲ್ಲಿ ವಾಸವಾಗಿರುತ್ತದೆ. ಹಿಂದೂ ಮಹಾಸಾಗರ, ಅರಬ್ಬೀಸಮುದ್ರ. ಕೆಂಪು ಸಮುದ್ರದಲ್ಲಿ ಕಂಡು ಬರುತ್ತದೆ.

ಪೆಸಿಫಿಕ್‌ ಸಾಗರದ ಹವಳ ಬಂಡೆಯಲ್ಲಿ ದೊರಕುತ್ತದೆ. ಗರಿಷ್ಟ 12 ಕೆ.ಜಿ. ತೂಕ ಮತ್ತು 80 ಸೆ.ಮೀ. ಉದ್ದ ಇರುತ್ತದೆ. ಏಡಿ, ಅಕ್ಟೋಪಸ್‌, ಸಿಗಡಿ ಇವುಗಳ ಆಹಾರ. ಇನ್ನೊಂದು ಎಪಿನೆಪಲಸ್‌ ಪ್ಲಾವೊಸಿರುಲಸ್‌. ಇದು ಕೂಡ ಅರಬ್ಬೀಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ 10ಮೀ. ನಿಂದ 150 ಮೀ. ಆಳದಲ್ಲಿ ವಾಸವಾಗಿರುತ್ತದೆ. ಮೀನುಗಳ ರೆಕ್ಕೆ ಮತ್ತು ಬಾಲ ಹಳದಿ ಬಣ್ಣ ಹೊಂದಿದ್ದು, ಮರಿ ಮೀನುಗಳು ನೀಲಿ ಬಣ್ಣದಾಗಿರುತ್ತವೆ. ಸಣ್ಣ ಮೀನು, ಏಡಿ, ಸಿಗಡಿ, ಬೊಂಡಾಸ ಮತ್ತು ಅಕ್ಟೋಪಸ್‌ ಇವುಗಳ ಆಹಾರ. ಇವೆರಡು ತಿನ್ನಲು ಅತೀ ರುಚಿಕರವಾಗಿದ್ದು, ಹೆಚ್ಚು ಬೇಡಿಕೆಯುಳ್ಳ ಮೀನುಗಳು ಎಂದು ಸಂಶೋಧಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next