Advertisement

ಮಹಿಳೆಯರಿಗೆ ರಕ್ಷಣೆ ನೀಡುವುದು ಮಾತ್ರ ಕೆಲಸ,ವಯಸ್ಸು ನೋಡುವುದಿಲ್ಲ 

06:24 AM Jan 02, 2019 | |

ತಿರುವನಂತಪುರಂ: ಕಾನೂನು ವ್ಯಾಪ್ತಿಯಲ್ಲಿ  ಮಹಿಳೆಯರಿಗೆ ರಕ್ಷಣೆ ನೀಡುವುದು ಮಾತ್ರ ಪೊಲೀಸರ ಕೆಲಸ. ನಾವು ವಯಸ್ಸು ಮತ್ತು ಇತರ ವಿವರಗಳು ನಮಖೆ ಮುಖ್ಯವಾಗುವುದಿಲ್ಲ ಎಂದು ಕೇರಳ ಡಿಜಿಪಿ ಲೋಕನಾಥ್‌ ಬೆಹ್ರಾ ಅವರು ಹೇಳಿಕೆ ನೀಡಿದ್ದಾರೆ. 

Advertisement

ಶಬರಿಮಲೆಗೆ ಬುಧವಾರ ಇಬ್ಬರು ಮಹಿಳೆಯರು ಪ್ರವೇಶಿಸಿದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಯಾರು ಶಬರಿಮಲೆಗೆ ಬರುತ್ತಾರೋ ಅವರಿಗೆ ರಕ್ಷಣೆ ನೀಡಬೇಕಾದುದ್ದು ನಮ್ಮ ಕೆಲಸ. ಪೊಲೀಸರು ಅದನ್ನು ಮಾಡಿದ್ದಾರೆ ಎಂದರು.

ಸುಪ್ರೀಂ ಕೋರ್ಟ್‌ 10 ರಿಂದ 50 ವರ್ಷದ ಒಳಗಿನ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂದು ತೀರ್ಪು ನೀಡಿದ ಬೆನ್ನಲ್ಲೇ ಶಬರಿ ಮಲೆಯಲ್ಲಿ  ವ್ಯಾಪಕ ಪೊಲೀಸ್‌ ಕಟ್ಟೆಚ್ಚರ ವಹಿಸಲಾಗಿತ್ತು. ಪೊಲೀಸರ ರಕ್ಷಣಾ ಕೋಟೆಗಳಿದ್ದರೂ ಮಹಿಳೆಯರಿಗೆ ದೇಗುಲ ಪ್ರವೇಶಿಸುವುದು ಸಾಧ್ಯವಾಗಿರಲ್ಲಿಲ್ಲ , ಆದರೆ ಬುಧವಾರ ನಸುಕಿನ 4 ಗಂಟೆಯ ಒಳಗೆ 40 ವರ್ಷದೊಳಗಿನ ಮಹಿಳೆಯರಾದ ಬಿಂದು ಮತ್ತು ಕನಕದುರ್ಗಾ ಅವರು ದೇಗುಲ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕೇರಳದಲ್ಲಿ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next