ಮಂಗಳೂರು: ಮಳಲಿ ಮಸೀದಿಗೆ ಸಂಬಂಧಿಸಿದ ವ್ಯಾಜ್ಯವನ್ನು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡಬಹುದೆಂದು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಬುಧವಾರ ( ನ.9 ರಂದು) ನ್ಯಾಯಾಲಯ ತೀರ್ಪು ನೀಡಿದೆ.
ಮಸೀದಿ ವಿಚಾರ ವಕ್ಫ್ ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆ ಮಾಡಬಹುದೆಂಬ ಮಸೀದಿ ಪರ ವಕೀಲರ ವಾದವನ್ನು ವಾದಿಸಿದ್ದರು. ಈ ವಾದವನ್ನು ಆಲಿಸಿದ ಬಳಿಕ ಕೋರ್ಟ್ ಮಸೀದಿ ಆಡಳಿತದ ಅರ್ಜಿಯನ್ನು ತಿರಸ್ಕರಿಸಿ ಮಳಲಿ ಮಸೀದಿ ಸಂಬಂಧಿಸಿದ ವ್ಯಾಜ್ಯವನ್ನು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡಬಹುದೆಂದು ತೀರ್ಪು ನೀಡಿದೆ.
ದೇವಾಲಯ ಶೈಲಿ ಪತ್ತೆಯಾಗಿದ್ದರಿಂದ ಜ್ಞಾನವಾಪಿ ಮಾದರಿಯಲ್ಲಿ ಮಳಲಿ ಮಸೀದಿಯಲ್ಲಿಯೂ ಕೋರ್ಟ್ ಕಮಿಷನರ್ ಮೂಲಕ ಸರ್ವೆ ಮಾಡುವಂತೆ ವಿಎ ಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಎಚ್ ಪಿಯ ಅರ್ಜಿಯನ್ನು ಕೋರ್ಟ್ ಸ್ವೀಕರಿಸಿ,ಮುಂದಿನ ವಿಚಾರಣೆ ಜ.8 (2023) ರಂದು ನಿಗದಿಯಾಗಿದೆ.