Advertisement

ಕಾಪು ಪುರಸಭೆ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ವಿಚಾರದಲ್ಲಿ ಗೊಂದಲ: ಸದಸ್ಯರ ನಡುವೆ ವಾಗ್ವಾದ

12:30 PM Nov 07, 2020 | keerthan |

ಕಾಪು: ಕಾಪು ಪುರಸಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಬಳಿಕದ ಪ್ರಥಮ‌ ಸಾಮಾನ್ಯ ಸಭೆಯು ಪುರಸಭಾಧ್ಯಕ್ಷ ಅನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಆದರೆ ಸಭೆಯ ಆರಂಭದಲ್ಲೇ ಸ್ಥಾಯಿ ಸಮಿತಿ ರಚನೆಯ ಬಗ್ಗೆ ಚರ್ಚೆ ನಡೆದಿದ್ದು, ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಭಾರೀ ಚರ್ಚೆ ಮತ್ತು ವಾಗ್ವಾದ ನಡೆಯಿತು.

Advertisement

11 ಮಂದಿ ಸದಸ್ಯರನ್ನೊಳಗೊಂಡ ಸ್ಥಾಯಿ ಸಮಿತಿ ರಚನೆಗೆ ಬಿಜೆಪಿ 7 ಮತ್ತು ಕಾಂಗ್ರೆಸ್ ನಿಂದ 5 ಮಂದಿ ಸದಸ್ಯರ ಹೆಸರು ಸೂಚಿಸಿದರು. ಆದರೆ ಎರಡೂ ಪಕ್ಷಗಳಲ್ಲಿ ಒಮ್ಮತ ಮೂಡದೇ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡುವ ಬೆದರಿಕೆಯೊಡ್ಡಿದರು. ಈ ವೇಳೆ ಮನವೊಲಿಕೆಯ ಪ್ರಯತ್ನ ನಡೆದರೂ, ಮತ್ತೆ ಅದೇ ರೀತಿಯ ಚರ್ಚೆ ನಡೆಯಿತು. ವಿಪಕ್ಷ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡುವ ಬೆದರಿಕೆಯೊಡ್ಡಿದರೆ, ಆಡಳಿತ ಪಕ್ಷ ಬಿಜೆಪಿ ಸದಸ್ಯರು ಚುನಾವಣೆಗೆ ಪಟ್ಟು ಹಿಡಿದರು.

ಇದನ್ನೂ ಓದಿ:ಅಕ್ರಮ ಆಸ್ತಿ ಗಳಿಕೆ: ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಮನೆ ಸೇರಿದಂತೆ ಆರು ಕಡೆ ಎಸಿಬಿ ದಾಳಿ

ಈ ಘಟನಾವಳಿಯಿಂದ ಮನನೊಂದ ಕಾಂಗ್ರೆಸ್ ನ ಹಿರಿಯ ಸದಸ್ಯೆ ಸುಲೋಚನಾ ಬಂಗೇರ ಅವರು ತನ್ನ ಹೆಸರನ್ನು ಕೈ ಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಗೊಂಡಿತು. ಬಿಜೆಪಿಯ 7 ಮಂದಿ ಮತ್ತು ಕಾಂಗ್ರೆಸ್ ನಿಂದ 4 ಮಂದಿ ಸದಸ್ಯರನ್ನು ಸ್ಥಾಯಿ ಸಮಿತಿಗೆ ಆಯ್ಕೆ ಮಾಡಲಾಯಿತು.

Advertisement

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷೆ ಮಾಲಿನಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next