Advertisement

ವೀನಸ್‌, ಮುಗುರುಜಾ ಸೆಮೀಸ್‌ಗೆ; ಜೊಕೋವಿಕ್‌ ಕ್ವಾರ್ಟರ್‌ ಫೈನಲಿಗೆ

02:50 AM Jul 12, 2017 | Team Udayavani |

ಲಂಡನ್‌: ವೀನಸ್‌ ವಿಲಿಯಮ್ಸ್‌, ಗಾರ್ಬಿನ್‌ ಮುಗುರುಜಾ ವಿಂಬಲ್ಡನ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ವಿಭಾಗದಲ್ಲಿ ನೊವಾಕ್‌ ಜೊಕೋವಿಕ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ವೀನಸ್‌ ವಿಲಿಯಮ್ಸ್‌ 6-3, 6-5 ರಿಂದ ಲಾಟ್ವಿಯಾದ ಒಸ್ಟಾಪೆಂಕೊ ವಿರುದ್ಧ ಗೆಲುವು ಸಾಧಿಸಿದರು. ಸ್ಪೇನ್‌ನ ತಾರಾ ಆಟಗಾರ್ತಿ ಗಾರ್ಬಿನ್‌ ಮುಗುರುಜಾ 6-3, 6-4ರಿಂದ ರಶ್ಯದ ಸ್ವೆತ್ಲಾನಾ ಕುಜ್ನೆತೊÕವಾ ವಿರುದ್ಧ ಗೆಲುವು ಸಾಧಿಸಿದರು. ಮುಗುರುಜಾಗೆ ಇದು 2ನೇ ವಿಂಬಲ್ಡನ್‌ ಸೆಮಿಫೈನಲ್‌ ಆಗಿದೆ. ಇದಕ್ಕೂ ಮುನ್ನ 2015ರಲ್ಲಿ ಫೈನಲ್‌ ತಲುಪಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು.

ಮಂಗಳವಾರಕ್ಕೆ ಮುಂದೂಡಲ್ಪಟ್ಟ ಪ್ರೀ-ಕ್ವಾಟರ್‌ ಫೈನಲ್‌ ಪಂದ್ಯದಲ್ಲಿ ನೊವಾಕ್‌ ಜೊಕೊವಿಚ್‌ 6 -2, 7-6 (7-5), 6-4ರಿಂದ ಫ್ರಾನ್ಸ್‌ನ ಆ್ಯಂಡ್ರಿಯನ್‌ ಮನಾರಿನೊ ವಿರುದ್ಧ ಗೆಲುವು ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next