Advertisement

ವೇಣೂರು: ಫಲ್ಗುಣಿ ನದಿಯಲ್ಲಿ ತೇಲಿ ಬಂತು ಅಪರಿಚಿತ ಮೃತದೇಹ 

04:34 PM Jul 09, 2022 | Team Udayavani |

ವೇಣೂರು: ತುಂಬಿ ಹರಿಯುತ್ತಿರುವ ಇಲ್ಲಿಯ ಫಲ್ಗುಣಿ ನದಿಯಲ್ಲಿ ಮೃತದೇಹವೊಂದು ನೀರಿನಲ್ಲಿ ಕೊಚ್ಚಿಹೋಗುತ್ತಿರುವ ದೃಶ್ಯ ಕಂಡು ಬಂದಿದೆ.

Advertisement

ರಿಕ್ಷಾದಲ್ಲಿ ತೆರಲುತ್ತಿದ್ದವರಿಗೆ ನೀರಿನಲ್ಲಿ ಮೃತದೇಹ ತೇಲುತ್ತಿರುವ ದೃಶ್ಯ ಕಂಡು ಬಂದಿದ್ದು, ವಾಹನ ಚಾಲಕರು ಹಾಗೂ ಸ್ಥಳೀಯರು ಸೇತುವೆ ಮೇಲಿಂದ ದೋಂಟಿಯ ಸಹಾಯದಿಂದ ಮೃತದೇಹವನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ.

ಸಾಧ್ಯವಾಗದೇ ಇದ್ದಾಗ ತಕ್ಷಣ ಒಂದು ಕಿ.ಮೀ. ದೂರದ ಕರಿಮಣೇಲು ಬಳಿ ತೆರಳಿದ ಕೆಲವು ಯುವಕರು ದೋಂಟಿಯ ಸಹಾಯದಿಂದ ಮೃತದೇಹವನ್ನು ಬದಿಗೆ ಎಳೆಯಲು ಪ್ರಯತ್ನಪಟ್ಟಿದ್ದರೂ ನೀರಿನ ಪ್ರಮಾಣ ಅತೀ ಹೆಚ್ಚಾಗಿದಿದ್ದರಿಂದ ಅದೂ ಸಾಧ್ಯವಾಗಲಿಲ್ಲ. ನೀರಿನ ರಭಸಕ್ಕೆ  ಕೊಚ್ಚಿಕೊಂಡು ಹೋಗಿರುವ  ಮೃತ ದೇಹ ಇರುವ್ಯೆಲು ಡ್ಯಾಮ್‌ ಬಳಿ ಪತ್ತೆಯಾಗಿದ್ದು, ಸ್ಥಳೀಯರು ಹೊರಕ್ಕೆ ತೆಗೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next