Advertisement

ಕಂಬಳ ಸಂಸ್ಕೃತಿ-ಸಂಸ್ಕಾರದ ಬಿಂಬ: ಪದ್ಮಪ್ರಸಾದ 

05:50 AM Mar 17, 2019 | Team Udayavani |

ವೇಣೂರು: ಕಂಬಳ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುತ್ತದೆ. ಕಂಬಳವನ್ನು ಉಳಿಸಿ-ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಆವಶ್ಯಕತೆ ಇದೆ. ಯುವ ಸಮುದಾಯ ಕಂಬಳದ ಬಗ್ಗೆ ಮಾಹಿತಿಯ ಜತೆ ಆಸಕ್ತಿ ಬೆಳೆಸಿ ಕಂಬಳವನ್ನು ಮುಂದುವರಿಸಬೇಕು ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲರು ಹೇಳಿದರು.

Advertisement

ಇತಿಹಾಸ ಪ್ರಸಿದ್ಧ ವೇಣೂರು ಪೆರ್ಮುಡ ಹೊನಲು ಬೆಳಕಿನ 26ನೇ ವರ್ಷದ ಸೂರ್ಯ- ಚಂದ್ರ ಜೋಡುಕರೆ ಬಯಲು ಕಂಬಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವೇಣೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂಡದಬೆಟ್ಟು ಜುಮಾ ಮಸೀದಿಯ ಧರ್ಮ ಗುರು ಕೆ.ಎಂ. ಹನೀಫ್‌ ಸಖಾಫಿ ಬಂಗೇರ್‌ಕಟ್ಟೆ ಮಾತನಾಡಿ, ಕಂಬಳ ಕ್ರೀಡೆಯ ರಸ ಆಸಕ್ತರಿಗೆ ಅಮೃತವಿದ್ದಂತೆ. ಇದಕ್ಕೆ ಯಾವುದೇ ಕಾನೂನು ಬರಲಿ, ಅದನ್ನು ಸಮರ್ಥವಾಗಿ ನಿಭಾಯಿಸಿ ಕಂಬಳ ನಿರ್ವಹಿಸಲು ನಮ್ಮ ಜನತೆ ಸಿದ್ಧರಿದ್ದಾರೆ. ಕಂಬಳಾಭಿಮಾನಿಗಳ ತಾಳ್ಮೆಯನ್ನು ಕೆಲವರು ಪರೀಕ್ಷಿಸುತ್ತಿರುವುದು ಖೇದಕರ ಎಂದರು.

ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ರಾಜೀವ ಶೆಟ್ಟಿ ಎಡ್ತೂರು ಮಾತನಾಡಿ, ಕಂಬಳವು ತುಳುನಾಡಿನ ಆರಾಧನ ಕ್ರೀಡೆ. ಆದರೆ ಪೇಟಾದವರು ಅದನ್ನು ನಿರ್ಬಂಧಿಸಲು ಹೊರಟ್ಟಿದ್ದು, ಪದೇಪದೇ ಕಾನೂನು ಸಮರ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂಸೆರಹಿತ ಕಂಬಳಕ್ಕೆ ಯಾವುದೇ ತೊಂದರೆ ಆಗಲು ಬಿಡುವುದಿಲ್ಲ ಎಂದರು.

ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ ಆನಂದ, ವೇಣೂರು ನಮನ ಕ್ಲೀನಿಕ್‌ನ ಡಾ| ಶಾಂತಿಪ್ರಸಾದ್‌, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್‌ ಕುಮಾರ್‌ ಮಿತ್ತಮಾರ್‌, ಕುಕ್ಕೇಡಿ-ನಿಟ್ಟಡೆ ಬಿಲ್ಲವ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಭಾಸ್ಕರ ಬಲ್ಯಾಯ, ವಿಮಲಚಂದ್ರ ಕೋಟ್ಯಾನ್‌, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸೋಮಯ ಹನೈನಡೆ, ಅಳದಂಗಡಿ ತಾ.ಪಂ. ಸದಸ್ಯೆ ವಿನುಷಾ ಪ್ರಕಾಶ್‌, ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ನವೀನ್‌ ಪಚ್ಚೇರಿ, ಆರಂಬೋಡಿ ಗ್ರಾ.ಪಂ. ಸದಸ್ಯೆ ಭವಿತಾ ದೇವಾಡಿಗ, ವೇಣೂರು ಪದ್ಮಾಂಬ ಸಮೂಹ ಸಂಸ್ಥೆಯ ಜಿನರಾಜ ಜೈನ್‌, ಜೆಫ್ರಿ  ಫೆರ್ನಾಂಡಿಸ್‌, ಪದ್ಮನಾಭ ಬರಮೇಲು, ಮಹಾವೀರ ಜೈನ್‌ ಕಜೆ, ತೀರ್ಪುಗಾರರಾದ ವಿಜಯಕುಮಾರ್‌ ಮುಳಿಕ್ಕಾರು, ಸಮಿತಿಯ ಗೌರವ ಸಲಹೆಗಾರ ವಲೇರಿಯನ್‌ ಲೋಬೋ, ಉಪಾಧ್ಯಕ್ಷರಾದ ಕರುಣಾಕರ ಸಾಲ್ಯಾನ್‌, ಗೋಪಾಲ ಪೂಜಾರಿ, ಕೋಶಾಧ್ಯಕ್ಷ ಅಶೋಕ್‌ ಪಾಣೂರು, ಕಾರ್ಯದರ್ಶಿ ಭರತ್‌ರಾಜ್‌ ಪಾಪುದಡ್ಕ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಂಬಳ ಸಮಿತಿ ಸದಸ್ಯರು ಸಹಕರಿಸಿದರು.

Advertisement

ಕಂಬಳ ಸಮಿತಿ ಅಧ್ಯಕ್ಷ ನಿತೀಶ್‌ ಎಚ್‌. ಸ್ವಾಗತಿಸಿ, ಪ್ರಸ್ತಾವಿಸಿದರು. ಅನೂಪ್‌ ಜೆ. ಪಾಯಸ್‌ ನಿರ್ವಹಿಸಿ, ಸಮಿತಿಯ ಗೌರವ ಸಲಹೆಗಾರ ಶೇಖರ ಕುಕ್ಕೇಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next