Advertisement

ವೇಣೂರು: ಯುವತಿ ನಾಪತ್ತೆ

09:36 AM Jul 14, 2019 | Team Udayavani |

ವೇಣೂರು: ಮಂಗಳೂರಿಗೆ ಉದ್ಯೋಗಕ್ಕೆಂದು ತೆರಳಿದ್ದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಪಂಡಿಂಜೆ ನಿವಾಸಿ ನಾಗೇಶ್‌ ಎಂ.ಕೆ. ಅವರ ಪುತ್ರಿ ಕೀರ್ತನಾ (19) ನಾಪತ್ತೆಯಾದವಳು. ಮೇ 13ರಂದು ಮಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗ ಲಭಿಸಿದೆ ಎಂದು ಹೋದವಳು ಬಳಿಕ ಒಂದು ತಿಂಗಳ ಕಾಲ ಮನೆಯನ್ರೊಂದಿಗೆ ಸಂಪರ್ಕದಲ್ಲಿದ್ದಳು. ಆ ಬಳಿಕ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಮನೆಯವರ ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.

ಅಪರಿಚಿತ ಮಹಿಳೆಯೊಬ್ಬರು ನಾಗೇಶ್‌ಗೆ ದೂರವಾಣಿ ಕರೆ ಮಾಡಿ ನಿಮ್ಮ ಪುತ್ರಿ ಮದುವೆಯಾಗಿ ಚಿಕ್ಕಮಗಳೂರಿನಲ್ಲಿ ಇರುವುದಾಗಿ ತಿಳಿಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

ಪಿಯುಸಿ ವಿದ್ಯಾಭ್ಯಾಸ ಮಾಡಿರುವ ಕೀರ್ತನಾ ಗೋಧಿ ಮೈ ಬಣ್ಣ ಹೊಂದಿದ್ದಾಳೆ. ಕನ್ನಡ, ತುಳು ಬಲ್ಲವಳಾಗಿದ್ದಾಳೆ. ಇವಳ ಮಾಹಿತಿ ದೊರೆತಲ್ಲಿ ವೇಣೂರು ಪೊಲೀಸ್‌ ಠಾಣೆ (9480805372)ಗೆ ಮಾಹಿತಿ ನೀಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next