Advertisement
ಸಭೆಯಲ್ಲಿ ಪೊಲೀಸ್ ಉಪನಿರೀಕ್ಷಕ ಚಂದ್ರಶೇಖರ ಕೆ. ಅವರು ಮಾಹಿತಿ ನೀಡಿ, ಹಬ್ಬದ ಮೆರವಣಿಗೆ ಹಾಗೂ ವಿಗ್ರಹದ ವಿಸರ್ಜನೆ ವೇಳೆಯಲ್ಲಿ ಸಾಕಷ್ಟು ಬೆಳಕಿನ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಹಬ್ಬಗಳನ್ನು ಸರ್ವ ಧರ್ಮೀಯರು ಶಾಂತಿ, ಸೌಹಾರ್ದದಿಂದ ಆಚರಿಸುವಂತಾಗಲಿ ಎಂದರು.
ಮೈಕ್, ಸೌಂಡ್ಸ್, ಮೆರವಣಿಗೆಗಳಿಗೆ ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕು. ರಾತ್ರಿ 10 ಗಂಟೆಯೊಳಗೆ ಮೆರವಣಿಗೆಗಳನ್ನು ಮುಗಿಸಬೇಕು. ಯಾವುದೇ ಅಹಿತಕರ ಹಾಗೂ ಅಶಾಂತಿಗೆ ಕಾರಣವಾಗುವ ರೀತಿಯಲ್ಲಿ ನಡೆದುಕೊಳ್ಳದೆ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕೆಂದು ಅವರು ವಿನಂತಿಸಿದರು. ಕ್ರೀಡಾಕೂಟಗಳಲ್ಲಿ ಪ್ರಥಮ ಚಿಕಿತ್ಸೆ ವ್ಯವಸ್ಥೆ ಕೈಗೊಳ್ಳಬೇಕು. ಮಳೆಗಾಲ ಸಮಯದಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಮಂದಿರ, ದೇವಸ್ಥಾನಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿಕೊಳ್ಳಬೇಕು. ಜತೆಗೆ ಬ್ಯಾಂಕ್, ಫೆ„ನಾನ್ಸ್, ಸೊಸೆ„ಟಿಗಳಿಗೆ ಸೆ„ರನ್ ಅಳವಡಿಕೆ ಕಡ್ಡಾಯ ಎಂದರು. ಪೊಲೀಸ್ ಸಿಬಂದಿ ವಿಜಯ್ ಸಭೆಯನ್ನು ನಿರ್ವಹಿಸಿದರು.