Advertisement

ವೆಂಕಟರಮಣಸ್ವಾಮಿ ದೇವಾಲಯ ಲೋಕಾರ್ಪಣೆ

12:22 PM Nov 12, 2021 | Team Udayavani |

ನಾಗಮಂಗಲ: ದೇವಸ್ಥಾನಗಳು ಮನುಷ್ಯರಿಗೆ ಸದಾ ನೆಮ್ಮದಿ ಕೊಡುವ ಧಾರ್ಮಿಕ ತಾಣಗಳು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮಿ ಅಭಿಪ್ರಾಯಪಟ್ಟರು. ತಾಲೂಕಿನ ಹೆಚ್‌.ಎನ್‌.ಕಾವಲ್‌ನ ಬೆಟ್ಟದಗುಡಿ ಗಿಡದ ಜಾತ್ರೆಯಲ್ಲಿ ಜೀಣೊìದ್ಧಾರಗೊಂಡಿರುವ ವಿಜಯನಗರದ ಅರಸರ ಕಾಲದ ವೆಂಕಟರಮಣಸ್ವಾಮಿ ಪುರಾತನ ದೇವಸ್ಥಾನ ಲೋಕಾರ್ಪಣೆ ಅವರು ಮಾತನಾಡಿದರು.

Advertisement

ಭಕ್ತರಿಗೆ ಅನುಕೂಲ: ದೇವಸ್ಥಾನ ಕಟ್ಟುವುದು ಮುಖ್ಯವಲ್ಲ, ಅದನ್ನು ನಿರ್ವಹಣೆ ಮಾಡುವುದು ಮುಖ್ಯ. ಚಿಕ್ಕ ತಿರುಪತಿ ಎಂದೇ ಹೆಸರು ಗಳಿಸಿರುವ ಈ ಸ್ಥಳದಲ್ಲಿ ಹತ್ತಾರು ದಶಕಗಳಿಂದ ನಿರ್ವಹಣೆಯಿಲ್ಲದೇ ಕಾಡಿನಲ್ಲಿ ಅವಿತುಹೋಗಿದ್ದ ವಿಜಯನಗರದ ಅರಸರ ಕಾಲದ ವೆಂಕಟರ ಮಣಸ್ವಾಮಿ ಪುರಾತನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವುದು ಈ ಪ್ರದೇಶದ ಭಕ್ತರಿಗೆ ಅನುಕೂಲವಾಗಿದೆ.

ಇದನ್ನೂ ಓದಿ:- ಶ್ರೀ ಮಹದೇಶ್ವರ ಸ್ವಾಮಿ ರಥೋತ್ಸವ

ತಿರುಪತಿಗೆ ಹೋಗಲಾಗದವರು ಇದೇ ತಿರುಪತಿ ಎಂದು ಭಾವಿಸಿ ಗಿಡದ ಜಾತ್ರೆಯ ಸಮಯದಲ್ಲಿ ಇಲ್ಲಿಗೆ ಬಂದು ಹರಕೆ ತೀರಿಸುವುದು ವಾಡಿಕೆಯಾಗಿದೆ ಎಂದರು. ಪ್ರಕೃತಿ ಸೌಂದರ್ಯ ನಿರ್ಮಿಸಿ: ವೆಂಕಟರಮಣ ದೇವಸ್ಥಾನವು ಪ್ರಕೃತಿ ಸೌಂದರ್ಯದ ಮಡಿಲಲ್ಲಿ ರುವುದರಿಂದ ದೇವಸ್ಥಾನದ ಸುತ್ತಮುತ್ತ ಪ್ರಕೃತಿ ಸೌಂದರ್ಯ ನಿರ್ಮಿಸಬೇಕು. ದೇವಸ್ಥಾನವಿರುವ ಬೆಟ್ಟದ ತುಂಬೆಲ್ಲ ಸಾವಿರಾರು ಗಿಡ ಮರಗಳನ್ನು ಬೆಳೆಸಿ ವನಸ್ವರೂಪ ನೀಡಬೇಕು.

ಇಂತಹ ಮಹತ್ಕಾರ್ಯಕ್ಕೆ ದೇವಸ್ಥಾನದ ಸಮಿತಿಯೊಂದಿಗೆ ಶ್ರೀಮಠವೂ ಕೈಜೋಡಿಸಿ ದೇವಸ್ಥಾನದ ಅಭಿವೃದ್ಧಿ ಯಲ್ಲಿ ಪಾಲ್ಗೊಳ್ಳಲಿದೆ. ಸಮಿತಿ ಸದಸ್ಯರು ಶ್ರದ್ಧಾಭಕ್ತಿ ಯಿಂದ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದಾಗ ಮಾತ್ರ ಇವೆಲ್ಲವು ಸಾಧ್ಯ ಎಂದು ಹೇಳಿದರು. ವೇ.ಬ್ರ.ಡಾ.ಭಾನುಪ್ರಕಾಶ್‌ಶರ್ಮಾ ಅವರ ನೇತೃತ್ವದ ಪುರೋಹಿತರ ತಂಡ ಮೂರುದಿನಗಳ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

Advertisement

ಅರ್ಚಕ ರಾದ ಸುಧಾಕರ್‌ ಧೀಕ್ಷಿತ್‌, ದೀಪು ದೇವತಾ ಕಾರ್ಯದಲ್ಲಿ ಭಾಗಿಯಗಿದ್ದರು. ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನ ಸಮಿತಿಯ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಉದಯಕಿರಣ್‌, ರಾಮಣ್ಣ, ಅನ್ನದಾನಿ, ತಮ್ಮಯ್ಯಪ್ಪ ಸೇರಿದಂತೆ ನೂರಾರು ಭಕ್ತರಿಂದ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.

 ಮಹಾ ಕುಂಭಾಭಿಷೇಕ

ದೇವಸ್ಥಾನದ ಲೋಕಾರ್ಪಣೆ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಗುರುವಾರ ಬೆಳಗ್ಗೆ ಕುಂಭಾಭೀಷೇಕ, ಚತುರ್ವೇದ ಪಾರಾಯಣ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿದವು. ನಿರ್ಮಲಾನಂದನಾಥ ಸ್ವಾಮೀಜಿ ಅವರು ಪೂರ್ಣಾಹುತಿ ಅರ್ಪಿಸಿದರು. ಸುಂದರವಾಗಿ ನಿರ್ಮಿಸಿರುವ ವೆಂಕಟರಮಣಸ್ವಾಮಿ ಮೂರ್ತಿಗೆ ಹಾಲಭಿಷೇಕ ನೆರವೇರಿಸಿ ಪೂಜಾ ಕೈಂಕರ್ಯ ನೆರವೇರಿಸಿದರು. ಮಹಾ ಕುಂಬಾಭಿಷೇಕ ನೆರವೇರಿಸುವ ಮೂಲಕ ದೇವಸ್ಥಾನ ಲೋಕಾರ್ಪಣೆ ಮಾಡಿದರು. ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.