ಶಿಡ್ಲಘಟ್ಟ: ತಾಲೂಕಿನ ಪ್ರಸಿದ್ಧ ತಲಕಾಯಲ ಬೆಟ್ಟದಲ್ಲಿ ಭೂನೀಳಾ ಸಮೇತ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ತಹಶೀಲ್ದಾರ್ ಡಿ.ಎಸ್.ರಾಜೀವ್ ಅವರು ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸ್ವಾಮಿಯ ಉತ್ಸವಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ಅಲಂಕೃತ ರಥದಲ್ಲಿ ಇರಿಸಿ ದೇವಾಲಯ ಸಮಿತಿ ಪದಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳು ರಥೋತ್ಸವ ದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು.
ತಲಕಾಯಲ ಬೆಟ್ಟ ಗ್ರಾಪಂ ವತಿಯಿಂದ ದನಗಳ ಜಾತ್ರೆ ಪ್ರಯುಕ್ತ ನೀರು ಹಾಗೂ ಸ್ಥಳಾವಕಾಶ ಒದಗಿಸಿದ್ದು, ಜಾತ್ರೆಗೆ ಕಳೆಕಟ್ಟಿತ್ತು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಗಳಿಂದಲೂ ದನಗಳ ವ್ಯಾಪಾರಸ್ಥರು ಭಾಗವಹಿಸಿದ್ದರು. ದೇವಾಲಯದ ಸುತ್ತಮುತ್ತ ರಥದ ಮೆರವಣಿಗೆ ನಡೆಯಿತು. ಶಾಸಕ ವಿ.ಮುನಿ ಯಪ್ಪ, ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ಎಂ.ರಾಜಣ್ಣ, ಚಿಕ್ಕಬಳ್ಳಾ ಪುರ ಎಪಿಎಂಸಿ ಅಧ್ಯಕ್ಷ ನಾರಾಯಣ ಸ್ವಾಮಿ, ಕಾಂಗ್ರೆಸ್ ಯುವ ಮುಖಂಡ ಥಣಿಸಂದ್ರ ರವಿ, ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ, ದೇವಾಲಯ ಸಮಿತಿ ಅಧ್ಯಕ್ಷ ಅಶ್ವತ್ಥನಾರಾಯಣ, ತಿಮ್ಮನಾಯಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆನಂದ್, ಶ್ರೀರಂಗಪ್ಪ, ಶಿವಣ್ಣ, ಪ್ರಧಾನ ಅರ್ಚಕರಾದ ರಾಮಾಂಜನೇಯ ಭಟ್ಟಾಚಾರ್ಯ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎನ್.ಮುನಿಯಪ್ಪ, ಆರಾಧನಾ ಸಮಿತಿ ಮಾಜಿ ಸದಸ್ಯ ದ್ಯಾವಪ್ಪ, ತಲಕಾಯಲಬೆಟ್ಟ ಗ್ರಾಪಂ ಅಧ್ಯಕ್ಷರಾಗಿ ಶುಭಾವತಿ, ಉಪಾಧ್ಯಕ್ಷ ಅಶ್ವತ್ಥ ನಾರಾಯಣರೆಡ್ಡಿ, ತಿಮ್ಮನಾಯಕನಹಳ್ಳಿ ಅರುಣ್ ಕುಮಾವರ್, ಪಿಡಿಒ ಕನಕಮ್ಮ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣರೆಡ್ಡಿ ಇದ್ದರು.
ಮೇಲೂರಲ್ಲಿ ನವ ದೇವತೆಗಳ ಉತ್ಸವ :
ಶಿಡ್ಲಘಟ್ಟ: ತಾಲೂಕಿನ ಮೇಲೂರು ಗ್ರಾಮದ ಪ್ರಸಿದ್ಧ ಗಂಗಾದೇವಿ, ಉಮಾ ಮಹೇಶ್ವರ, ಚನ್ನಕೇಶವ, ಸುಗ್ಗಲಮ್ಮದೇವಿ, ಚೌಡೇಶ್ವರಿದೇವಿ, ಮುನೇಶ್ವರಸ್ವಾಮಿ, ಸಪ್ಪಲಮ್ಮ ದೇವಿ ಹಾಗೂ ನಗರ ದೇವತೆ ಅಣ್ಣಮ್ಮ, ಗಡ್ಡದನಾಯಕನಹಳ್ಳಿಯ ದುರ್ಗಾ ಮಹೇಶ್ವರಿ ದೇವಿ ನವ ದೇವತೆಗಳ ಉತ್ಸವ ಮಹೋತ್ಸವವನ್ನು ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಏರ್ಪಡಿಸಲಾಗಿತ್ತು. ನವದೇವತೆಗಳ ರಥಗಳಿಗೆ ಬಿ.ಎನ್.ಸಚಿನ್ ಅವರು ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟವು. ಭಕ್ತರಿಗೆ ಅನ್ನ ಸಂತರ್ಪಣೆ ಆಯೋಜನೆ ಮಾಡಲಾಗಿತ್ತು. ಮೇಲೂರು ಗ್ರಾಮದ ಡಾ.ರಾಜ್ ಕುಮಾರ್ ಅಭಿಮಾನಿಗಳು ಮತ್ತು ರೈತ ಯುವಕ ಸಂಘ, ಸ್ಥಳೀಯರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.