Advertisement

ಹೊಟ್ಟೆಯಲ್ಲಿತ್ತು 9.20 ಕೋಟಿ ರೂ. ಮೌಲ್ಯದ 91 ಕೊಕೇನ್‌ ಕ್ಯಾಪ್ಸುಲ್!

08:16 AM Feb 18, 2024 | Team Udayavani |

ಬೆಂಗಳೂರು: ಹೊಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಕೊಕೇನ್‌ ಕ್ಯಾಪ್ಸುಲ್ ಗ‌ಳನ್ನು ಸಾಗಿಸುತ್ತಿದ್ದ 40 ವರ್ಷದ ಬ್ರೆಜಿಲ್‌ ಪ್ರಜೆಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ಆತನ ಹೊಟ್ಟೆಯಲ್ಲಿದ್ದ 9.20 ಕೋ. ರೂ. ಮೌಲ್ಯದ 91 ಕೊಕೇನ್‌ ಕ್ಯಾಪ್ಸುಲ್ ಗ‌ಳನ್ನು ಹೊರತೆಗೆಯಲಾಗಿದೆ.

Advertisement

ಫೆ.9ರಂದು ಮುಂಜಾನೆ ಬ್ರೆಜಿಲ್‌ನಿಂದ ದುಬಾೖ ಮಾರ್ಗವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಬಂದಿಳಿದ ವಿಮಾನದಲ್ಲಿದ್ದ ಈತನನ್ನು ಅನುಮಾನದಲ್ಲಿ ವಶಕ್ಕೆ ಪಡೆಯಲಾಯಿತು. ಆತನ ದೇಹದಲ್ಲಿ ಸ್ವಲ್ಪ ಬದಲಾವಣೆಯಾಗಿದ್ದು, ತುಂಬಾ ಆಯಾಸ ಗೊಂಡಿದ್ದ. ಬಳಿಕ ಆಸ್ಪತ್ರೆಗೆ ಕರೆದೊಯ್ದು ಪರಿಶೀಲಿಸಿದಾಗ ಕ್ಯಾಪ್ಸುಲ್ ಪತ್ತೆಯಾಗಿತ್ತು. ಅದನ್ನು ಹೊರ ತೆಗೆಯಲು ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲಾಗಿತ್ತು. ಎರಡು ದಿನಗಳ ಹಿಂದೆ ಆತನ ದೇಹದಲ್ಲಿದ್ದ 920 ಗ್ರಾಂ ತೂಕದ 91 ಕೊಕೇನ್‌ ಕ್ಯಾಪ್ಸುಲ್ ಗ‌ಳನ್ನು ಹೊರ ತೆಗೆಯಲಾಗಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಕೇಸ್‌ ದಾಖಲಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next