ಅಧ್ಯಕ್ಷ ಮಡುರೊ ಪ್ರಾಣಾಪಾಯದಿಂದ ಅದೃಷ್ಟವಶಾತ್ ಪಾರು
Advertisement
ಕರಾಕಸ್: ಡ್ರೋನ್ ಮೂಲಕ ಬಾಂಬ್ ಸ್ಫೋಟಿಸಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಹತ್ಯೆಗೈಯ್ಯುವ ಸಂಚೊಂದು ವಿಫಲ ಗೊಂಡಿದ್ದು, ದೇಶದೆಲ್ಲೆಡೆ ಕಂಪನ ಸೃಷ್ಟಿಸಿದೆ. ಕರಾಕಸ್‌ನ ಕೇಂದ್ರ ಭಾಗದಲ್ಲಿ ಆಯೋಜಿಸಲಾಗಿದ್ದ ಸೇನೆಯ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ನಿಕೋಲಸ್, ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗ, ಸ್ಫೋಟಕ ಹೊತ್ತಿದ್ದ ಡ್ರೋನ್ ಒಂದು ಏಕಾಏಕಿ ಎಲ್ಲಿಂದಲೋ ಹಾರಿ ಬಂದು ವೇದಿಕೆ ಮುಂದೆ ಬಂದು ನಿಂತು ಸ್ಫೋಟಗೊಂಡಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಆದರೆ ಸುಮಾರು 12 ಮಂದಿ ಯೋಧರು ಗಾಯ ಗೊಂಡಿದ್ದಾರೆ. ಡ್ರೋನ್ ಸ್ಫೋಟಗೊಂಡ ಕೂಡಲೇ ಭದ್ರತಾ ಸಿಬ್ಬಂದಿಯು ಅಧ್ಯಕ್ಷರನ್ನು ಸ್ಯೂಟ್‌ಕೇಸ್ ಮಾದರಿಯ ರಕ್ಷಾಕವಚದ ಮೂಲಕ ರಕ್ಷಿಸಿದ ವೀಡಿಯೋ ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.