Advertisement
ಶನಿವಾರ ದಿಂದಲೇ ಒಡಿಶಾ, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಧಾರಾಕಾರ ಮಳೆ ಆರಂಭವಾಗಿದ್ದು, ಇನ್ನೂ 5 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
Related Articles
Advertisement
ಮಹಾರಾಷ್ಟ್ರದಲ್ಲಿ 5 ದಿನ ಮಳೆಯಬ್ಬರ: ಮುಂಬಯಿ, ರಾಯಗಢ, ಥಾಣೆ, ರತ್ನಗಿರಿ, ಸಿಂಧುದುರ್ಗ ಸೇರಿ ದಂತೆ ಮಹಾರಾಷ್ಟ್ರದ ಹಲವೆಡೆ ಗುಡುಗು-ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆ ಆರಂಭ ವಾಗಿದೆ. ಮುಂದಿನ 5 ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರಾಖಂಡದ 5 ಜಿಲ್ಲೆಗಳಿಗೆ ಅಲರ್ಟ್: ಇತ್ತೀಚೆ ಗಷ್ಟೇ ಮೇಘಸ್ಫೋಟ, ಭೂಕುಸಿತದಂಥ ದುರಂತಗಳನ್ನು ಕಂಡಿದ್ದ ಉತ್ತರಾಖಂಡದಲ್ಲಿ ಈಗ ಮತ್ತೂಂದು ಸುತ್ತಿನ ಮಳೆ ಆರಂಭವಾಗಿದೆ. ಪಿತ್ತೋರ್‌ಗಢ, ಡೆಹ್ರಾಡೂನ್ ಸೇರಿ 5 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಗಂಗೋತ್ರಿ, ಯಮುನೋತ್ರಿ ಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಪರ್ಕ ಸ್ಥಗಿತಗೊಳಿಸಲಾ ಗಿದೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಅವರು ರವಿವಾರ ವೈಮಾನಿಕ ಸಮೀಕ್ಷೆಯನ್ನೂ ನಡೆಸಿದ್ದಾರೆ.
ನದಿ ದಾಟಿ ಬಂದು ಪರೀಕ್ಷೆ ಬರೆದಳು!
ಆಂಧ್ರಪ್ರದೇಶದ ವಿಜಯನಗರದ 21 ವರ್ಷದ ಯುವತಿ ಉಕ್ಕಿ ಹರಿಯುತ್ತಿದ್ದ ಚಂಪಾವದಿ ನದಿಯನ್ನು ದಾಟಿ ಬಂದು ಪರೀಕ್ಷೆ ಬರೆದಿದ್ದಾಳೆ. ಪರೀಕ್ಷಾ ಕೇಂದ್ರ ತಲುಪಬೇಕೆಂದರೆ ನದಿ ದಾಟಲೇಬೇಕಿತ್ತು. ಹೀಗಾಗಿ, ಕುಟುಂಬ ಸದಸ್ಯರೊಬ್ಬರ ಸಹಾಯದಿಂದ ನದಿ ದಾಟಿದ್ದಾಳೆ. ಈಜು ಬಾರದ ಹಿನ್ನೆಲೆಯಲ್ಲಿ ಸಹೋದರನೇ ಆಕೆಯನ್ನು ನದಿ ದಾಟಿಸಿದ್ದಾನೆ. ಇಬ್ಬರೂ ಕಷ್ಟಪಟ್ಟು ನದಿ ದಾಟುತ್ತಿರುವ ವೀಡಿಯೋ ವೈರಲ್ ಆಗಿದೆ.