Advertisement

ಅಶಕ್ತ ಮತದಾರರಿಗೆ ವಾಹನ ವ್ಯವಸ್ಥೆ: ಸಿಇಒ ಸಿಂಧೂ

01:00 AM Mar 13, 2019 | Team Udayavani |

ಉಡುಪಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಂಗವಿಕಲರು, ಹಿರಿಯ ನಾಗರಿಕರು ಸೇರಿದಂತೆ ಅಶಕ್ತ ಮತದಾರರನ್ನು ಮತದಾನ ಕೇಂದ್ರಗಳಿಗೆ ಕರೆತರಲು ವಾಹನ ವ್ಯವಸ್ಥೆ ಮಾಡಲಾಗುವುದು. ಬೂತ್‌ಗಳಲ್ಲಿ ವೀಲ್‌ ಚೇರ್‌, ಭೂತಗನ್ನಡಿಗಳನ್ನು ಒದಗಿಸಲಾಗುವುದು ಎಂದು ಜಿ.ಪಂ. ಸಿಇಒ, “ಸ್ವೀಪ್‌’ ಸಮಿತಿ ಅಧ್ಯಕ್ಷೆ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ. 

Advertisement

ಮಂಗಳವಾರ ಜಿಲ್ಲಾಡಳಿತ ಹಾಗೂ ಸ್ವೀಪ್‌ ಸಮಿತಿ ವತಿಯಿಂದ ಜಿ.ಪಂ.ನ ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚುನಾವಣಾ ಅವಧಿಯಲ್ಲಿ ಸಾಲು ಸಾಲು ರಜೆಗಳು ಇರುವ ಕಾರಣ ಮತದಾರರು ತಪ್ಪಿಹೋಗುವ ಸಾಧ್ಯತೆಗಳಿವೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅಂಗವಿಕಲರಿಗೆ ಆದ್ಯತೆ 
ಮತದಾನದ ಜಾಗೃತಿ ಕಾರ್ಯಕ್ರಮಗಳು ಪಾರದರ್ಶಕವಾಗಿರಬೇಕು. ವಿಆರ್‌ಡಬ್ಲೂ$Âಗಳು(ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು) ತಮ್ಮ ಪಂಚಾಯತ್‌ ವ್ಯಾಪ್ತಿಯ ಅಂಗವಿಕಲರಿಗೆ ಇವಿಎಂ ಮತಯಂತ್ರದ ಅಣಕು ಮತದಾನ ಕಾರ್ಯಕ್ರಮ ನಡೆಸಿ ಪ್ರತಿಜ್ಞಾವಿಧಿ ಬೋಧಿಸಬೇಕು. ವಿಆರ್‌ಡಬ್ಲೂ$Âಗಳಿರುವ 80 ಪಂಚಾಯತ್‌ಗಳಲ್ಲಿ ಯಾವುದೇ ಮತದಾರರು ಬಾಕಿ ಉಳಿಯಬಾರದು. ವಿಆರ್‌ಡಬ್ಲೂ$Âಗಳಿಗೆ ತಮ್ಮ ವ್ಯಾಪ್ತಿಯ ಅಂಗವಿಕಲರ ಜವಾಬ್ದಾರಿ ಇದ್ದು, ಅವರು ಮತದಾರಿಗೆ ಮತ ಚಲಾಯಿಸಲು ಇರುವ ವ್ಯವಸ್ಥೆಗಳ ಬಗ್ಗೆ ತಿಳಿಸಿ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಜಿಪಂ ಸಿಇಒ ಹೇಳಿದರು.

ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌ ರಾವ್‌, ನಗರ ಸಭೆಯ ಆಯುಕ್ತ ಆನಂದ ಕಲ್ಲೋಳಿಕರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next