Advertisement
ವಾಹನ ನೋಂದಣಿ ಸೇವೆಗಳು (ವಾಹನ್) ಮತ್ತು ಚಾಲನಾ ಪರವಾನಗಿ ವ್ಯವಹಾರಗಳನ್ನು ಏಕೀಕರಿಸಿ ರಾಷ್ಟ್ರದಾದ್ಯಂತ ಕೇಂದ್ರ ಸರಕಾರವು “ಸಾರಥಿ ಯೋಜನೆ’ಯನ್ನು ಕಾರ್ಯಗತಗೊಳಿಸಿದೆ. ವಾಹನ್ ಸಾರಥಿ ಯೋಜನೆಯು ಪೂರ್ಣರೂಪದಲ್ಲಿ ಅನುಷ್ಠಾನಕ್ಕೆ ಬರುವುದರೊಂದಿಗೆ ಏಜೆಂಟ್‌ಗಳ ಸಹಾಯವಿಲ್ಲದೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ನಿರ್ದಿಷ್ಟ ಸಮಯದೊಳಗೆ ವಹಿಸಿಕೊಡಲಾದ ಕೆಲಸವನ್ನು ಮಾಡಲು ಅಧಿಕಾರಿಗಳು ಹೊಣೆಗಾರ ರಾಗಿರುವರು. ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲ್ ಆಗಿ ಸಂರಕ್ಷಿಸಿಡಲು ಸಾಧ್ಯವಾಗುವ ಡಿಜಿಟಲ್ ಲಾಕರ್ ವ್ಯವಸ್ಥೆಯ ಪ್ರಯೋಜನವೂ ಸಂಪೂರ್ಣವಾಗಿ ದೊರಕಲಿದೆ. ಈ ಯೋಜನೆಯನ್ನು ರಾಜ್ಯದ 14 ಜಿಲ್ಲೆಗಳಲ್ಲೂ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದ್ದು, ವಾಹನ ಮಾರಾಟ ಮಾಡುವಾಗ ಮಾಲಕರ ಹಕ್ಕನ್ನು ಬದಲಾಯಿಸುವುದರ ಜವಾಬ್ದಾರಿ ಕೂಡ ಇನ್ನು ಮುಂದೆ ಮಾರಾಟ ಮಾಡುವ ವ್ಯಕ್ತಿಯದ್ದಾಗಿರಲಿದೆ.
Related Articles
Advertisement
ಕ್ಯೂಆರ್ ಕೋಡ್, ಸರಕಾರಿ ಹಾಲೋಗ್ರಾಂ, ಮೈಕ್ರೋಲೈನ್, ಮೈಕ್ರೋಟೆಕ್ಸ್r, ಯುವಿ ಎಂಬ್ಲಿಂ, ಗೈಲ್ಲೋಚ್‌ಪ್ಯಾಟರ್ನ್ ಹೀಗೆ ಆರು ಸುರûಾ ವ್ಯವಸ್ಥೆಗಳು ನೂತನ ಕಾರ್ಡ್‌ನಲ್ಲಿ ಇರಲಿವೆ.
ಇವಲ್ಲದೆ ವ್ಯಕ್ತಿಯ ಕುರಿತಾದ ಮೂಲ ಮಾಹಿತಿಗಳನ್ನು ದಾಖಲಿಸಲು ಕೂಡ ನಿರ್ಧರಿಸಲಾಗಿದೆ.
ಕೇಂದ್ರೀಕೃತ ಸಾಫ್ಟ್‌ವೇರ್ ವ್ಯವಸ್ಥೆ ವಾಹನ್ ಸಾರಥಿ ಸಾಫ್ಟ್‌ವೇರ್‌ಗೆ ಮಾರ್ಪಾಡುಗೊಳ್ಳುವಾಗ ಹಲವಾರು ಕ್ಲರಿಕಲ್, ಆಫೀಸ್ ಸೂಪರ್‌ವೈಸರ್ ಹಂತದಲ್ಲಿರುವ ಅಧಿಕಾರಿಗಳಿಗೆ ಕೆಲಸವಿಲ್ಲ ದಂತಾಗಲಿದೆ. ಇವರನ್ನು ಬೇರೆ ವಲಯಕ್ಕೆ ನಿಯೋಜಿಸಲು ತೀರ್ಮಾನಿಸಲಾಗಿದ್ದು, ಇದರೊಂದಿಗೆ ಇಲಾಖೆಯ ಕಾರ್ಯದಕ್ಷತೆ ಯನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಮೋಟಾರು ವಾಹನ ಇಲಾಖೆಯು ಇನ್ನು ಮುಂದೆ ಕೇಂದ್ರೀಕೃತ ಸಾಫ್ಟ್ ವೇರ್ ಆದ ವಾಹನ್ ಸಾರಥಿಗೆ ಮಾರ್ಪಾಡುಗೊಳ್ಳುತ್ತಿದೆ. ಮೇ 1ರಿಂದ ಈ ಯೋಜನೆಯನ್ನು ಕೇರಳದಲ್ಲಿ ಜಾರಿಗೆ ತರಲಾಗಿದೆ. ಇನ್ನು ಮುಂದೆ ಎಲ್ಲ ಲೈಸನ್ಸ್ ಈ ಸಾಫ್ಟ್‌ವೇರ್ ಮೂಲಕ ಲಭಿಸಲಿದೆ. ಇದರಿಂದ ಕೇರಳದಲ್ಲಿ ಸಂಪೂರ್ಣವಾಗಿ ಸಾರಥಿ ಮಾದರಿಯ ಡ್ರೈವಿಂಗ್ ಲೈಸನ್ಸ್‌ಗಳು ದೊರಕಲಿವೆ.