ಚಿಕ್ಕಮಗಳೂರು: ನಗರದ ಎಂ.ಜಿ. ರಸ್ತೆಯಲ್ಲಿ ವಾಹನ ನಿಲುಗಡೆಗೆ ಮುಂದಿನದಿನಗಳಲ್ಲಿ ಶುಲ್ಕ ಅನ್ವಯವಾಗಲಿದೆ.ಸುಲಲಿತ ಸಂಚಾರ, ವಾಹನ ದಟ್ಟಣೆನಿಯಂತ್ರಿಸುವ ನಿಟ್ಟಿನಲ್ಲಿ ನಗರಸಭೆಈ ನಿರ್ಧಾರ ಕೈಗೊಂಡಿದ್ದು, ಟೆಂಡರ್‌ಪ್ರಕ್ರಿಯೆ ಪೂರ್ಣಗೊಂಡಿದೆ.
ನಿರ್ಮಲಭಾರತಿ ಟ್ರಸ್ಟ್ ಟೆಂಡರ್ ಪಡೆದುಕೊಂಡಿದೆಎಂದು ನಗರಸಭೆ ಪೌರಾಯುಕ್ತ ಬಿ.ಸಿಬಸವರಾಜ್ ತಿಳಿಸಿದರು.ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಎಂ.ಜಿ.ರಸ್ತೆಯವಾಹನ ನಿಲುಗಡೆ ಹಕ್ಕಿನ ಬಹಿರಂಗಹರಾಜು ಬುಧವಾರ ನಡೆದಿದ್ದು,ಭಾಗಿಯಾಗಿದ್ದ 9 ಟೆಂಡರ್‌ದಾರರಪೈಕಿ ನಿರ್ಮಲ ಭಾರತಿ ಟ್ರಸ್ಟ್ 16 ಲಕ್ಷಕ್ಕೆಟೆಂಡರ್ ವಹಿಸಿಕೊಂಡಿದೆ.
ಮುಂದಿನದಿನಗಳಲ್ಲಿ ಎಂ.ಜಿ. ರಸ್ತೆಯಲ್ಲಿ ವಾಹನನಿಲುಗಡೆಗೆ ಶುಲ್ಕ ಅನ್ವಯವಾಗಲಿದ್ದುಸಾರ್ವಜನಿಕರು ಸಹಕರಿಸುವಂತೆಹೇಳಿದರು.ದ್ವಿಚಕ್ರ ವಾಹನ ಹೊರತುಪಡಿಸಿನಾಲ್ಕು ಚಕ್ರದ ವಾಹನ, ಕಾರು,ಖಾಸಗಿ ವಾಹನಗಳಿಗೆ ಪ್ರತಿ ಗಂಟೆಗೆ10 ರೂ. ನಿಗ ಪಡಿಸಲಾಗಿದೆ. 1,500ರೂ. ಮಾಸಿಕ ಪಾಸ್ ವಿತರಿಸಲಾವುದು2ಗಂಟೆಗೂ ಹೆಚ್ಚು ಕಾಲ ವಾಹನನಿಲುಗಡೆ ಮಾಡಿದ್ದಲ್ಲಿ ಹೆಚ್ಚುವರಿಯಾಗಿ5ರೂ. ನೀಡಬೇಕಾಗುತ್ತದೆ.
ಈನಿಯಮ ಸರ್ಕಾರಿ, ಶಾಲಾ ಬಸ್‌ಗಳಿಗೆ ಅನ್ವಯವಾಗುವುದಿಲ್ಲ. ನಗರದಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರುಸಹಕರಿಸುವಂತೆ ತಿಳಿಸಿದರು.ಇದರಿಂದ ಅನಗತ್ಯ ವಾಹನ ನಿಲುಗಡೆಕಡಿಮೆಯಾಗುತ್ತದೆ. ಮುಂದಿನ ದಿನಗಳಲ್ಲಿ ಐಜಿ ರಸ್ತೆ, ಮಾರ್ಕೆಟ್ ರಸ್ತೆ,ವಿಜಯಪುರ ಸೇರಿದಂತೆ ಮುಖ್ಯರಸ್ತೆಗಳಲ್ಲಿ ಶುಲ್ಕ ನಿಯಮ ವಿಧಿಸಲಾಗುವುದು. ಎಂಜಿ ರಸ್ತೆಯಲ್ಲಿ ಪೊಲೀಸ್‌ಸಹಕಾರದೊಂದಿಗೆ ವಾಹನ ನಿಲುಗಡೆಮಾರ್ಗಸೂಚಿಗಳನ್ನು ಹಾಕಲಾಗುತ್ತಿದ್ದು,ನ.1ರಿಂದ ನಿಯಮ ಜಾರಿಗೆ ಬರಲಿದೆಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷಸಿ.ಆನಂದ್ ಮಾತನಾಡಿ, ನಗರದಲ್ಲಿವಾಹನಗಳ ದಟ್ಟಣೆ ಕಡಿಮೆ ಮಾಡಲುಈ ನಿಯಮ ನಿಜಕ್ಕೂ ಒಳ್ಳೆಯದು.ಟೆಂಡರ್‌ದಾರರು ಆರಂಭದ ದಿನಗಳಲ್ಲಿವಾಹನಗಳ ಪಾರ್ಕಿಂಗ್ ಶುಲ್ಕವಸೂಲಾತಿ ಮಾಡುವಾಗ ವಾಹನಸವಾರರ ಮನವೊಲಿಸುವ ಮೂಲಕಶುಲ್ಕ ವಸೂಲಿ ಮಾಡಬೇಕು.
ಅನಗತ್ಯವಾಗ್ವಾದಗಳಿಗೆ ಎಡೆ ಮಾಡಿಕೊಡದಂತೆಕೇಳಿಕೊಂಡರು. ನಗರ ಆಶ್ರಯ ಸಮಿತಿಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ,ಜಿಲ್ಲೆಯು ಪ್ರವಾಸಿ ತಾಣವಾಗಿರುವಕಾರಣ ಹೆಚ್ಚು ಸಂಖ್ಯೆಯಲ್ಲಿಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.ಕೆಲವೊಂದು ಲಾಡ್ಜ್ಗಳಲ್ಲಿ ವಾಹನನಿಲುಗಡೆಗೆ ಸ್ಥಳವಿಲ್ಲದೇ ನಗರಸಭೆಯಫುಟ್‌ಪಾತ್‌ನಲ್ಲಿಯೇ ವಾಹನ ನಿಲುಗಡೆಮಾಡುತ್ತಾರೆ. ಇದರಿಂದ ಸುಲಲಿತಸಂಚಾರಕ್ಕೆ ತೊಂದರೆಯಾಗುತ್ತಿದೆ.ಇದೀಗ ಶುಲ್ಕ ವಸೂಲಾತಿ ನಿಯಮಅನ್ವಯವಾಗುವುದರಿಂದ ಅನಗತ್ಯವಾಹನ ನಿಲುಗಡೆ ಕಡಿಮೆಯಾಗಲಿದೆಎಂದು ತಿಳಿಸಿದರು.