Advertisement

ವಿಶ್ವಪ್ರಸಿದ್ಧ ಹಂಪಿಯಲ್ಲಿ ಪ್ರವಾಸಿ ವಾಹನ ಪ್ರಾಯೋಗಿಕ ಸಂಚಾರ

07:43 PM Mar 10, 2021 | Team Udayavani |

ಹೊಸಪೇಟೆ: ವಿಶ್ವಪ್ರಸಿದ್ಧ ಹಂಪಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸಂಚಾರ ಖಾಸಗಿ ಸಹಭಾಗಿತ್ವದಲ್ಲಿ ಬ್ಯಾಟರಿ ಚಾಲಿತ ವಾಹನಗಳು  ಪ್ರಾಯೋಗಿಕವಾಗಿ ಆರಂಭವಾಗಿದೆ ಎಂದು ಹೊಸಪೇಟೆ ಉಪವಿಭಾಗಾಧಿ  ಕಾರಿ ಹಾಗೂ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ಧರಾಮೇಶ್ವರ ಹೇಳಿದರು.

Advertisement

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು ಅನೇಕ ದಿನಗಳಿಂದ ಪ್ರಾಧಿಕಾರದಿಂದ ಆರಂಭಿಸಿದ್ದ ಬ್ಯಾಟರಿ ಚಾಲಿತ ವಾಹನಗಳು ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ತೊಂದರೆಯಾಗಿತ್ತು. ಹೀಗಾಗಿ ಖಾಸಗಿ ಸಹಭಾಗಿತ್ವದ ಮೊದಲ ಯೋಜನೆಯಾಗಿ ಬೆಂಗಳೂರಿನ ಪ್ರೀವ್ಯಾಲೆನ್ಸ್‌ ಗ್ರೀನ್‌ ಸಲ್ಯೂಶನ್ಸ್‌ ಪ್ರೈವೇಟ್‌ ಕಂಪನಿ ಸಹಕಾರದೊಂದಿಗೆ ಇಂದಿನಿಂದ ಮೂರುದಿನಗಳ ಕಾಲ ಪ್ರಾಯೋಗಿಕ ಸಂಚಾರ ನಂತರ ಇಲಾಖೆಯ ದರ ನಿಗದಿಯೊಂದಿಗೆ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಪ್ರವಾಸಿಗರಿಗೆ ಹೊರೆಯಾಗದಂತೆಯೇ ದರ ನಿಗದಿಯಾದರೂ ಸದ್ಯದ ದರಕ್ಕೆ ಸ್ವಲ್ಪ ಹೆಚ್ಚಳವಿರಲಿದೆ. ಇಲಾಖೆ 30:70 ಅನುಪಾತದಲ್ಲಿ ಹಂಚಿಕೆಯಾಗಲಿದೆ.

ಈ ಒಪ್ಪಂದದೊಂದಿಗೆ ಬ್ಯಾಟರಿ ಚಾಲಿತ ವಾಹನಗಳ ಸಂಚಾರ ಆರಂಭವಾಗಲಿದೆ. ಸದ್ಯ ರೈಲು ಮಾದರಿಯ ಒಂದು ಹಾಗೂ ಆಟೋ ಮಾದರಿಯ ಮುಕ್ತವಾಹನ ಸಂಚಾರ ಆರಂಭಿಸಲಿದ್ದು ಅದರ ಪರಿಣಾಮದ ಆಧಾರದಲ್ಲಿ ಮುಂದಿನ ದಿನ ಮತ್ತಷ್ಟು ವಿಸ್ತರಿಸಲಾಗುವುದು ಎಂದರು.

ಈ ಹಿಂದೆ ಇಲಾಖೆ ಖರೀದಿಸಿದ್ದ ಸದ್ಯ ಬಳಕೆಯಲ್ಲಿ ಇಲ್ಲದ 10 ವಾಹನಗಳನ್ನು ಮತ್ತೇ ಆರಂಭಿಸಲು ಸಹ ಗಂಭೀರ ಚಿಂತನೆ ನಡೆದಿದ್ದು ಹೊಸ ವಾಹನಗಳನ್ನು ಬೈ ಬ್ಯಾಕ್‌ ಪಡೆಯಲು ಚಿಂತಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next