Advertisement

ವಾಹನ ಉತ್ಪಾದಕರಿಂದ ಗ್ರಾಹಕರಿಗೆ ಬಂಪರ್‌ ಆಫ‌ರ್‌ ಘೋಷಣೆ

10:02 AM Dec 16, 2019 | Hari Prasad |

ಹೊಸದಿಲ್ಲಿ: ಕೆಲ ದಿನಗಳಿಂದ ಹೆಸರಾಂತ ವಾಹನ ಉತ್ಪಾದನಾ ಕಂಪನಿಗಳು ದರ ಹೆಚ್ಚಳ ಕುರಿತು ಘೋಷಣೆ ಮಾಡಿದ್ದವು. ಆದರೆ ಇದೀಗ ವರ್ಷಾತ್ಯಂಕ್ಕೆ ಆಕರ್ಷಕ ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿದೆ.

Advertisement

ಕಳೆದ 11 ತಿಂಗಳಿನಿಂದಲೂ ಮಾರುಕಟ್ಟೆ ಕುಸಿತ ಮತ್ತು ವ್ಯಾಪಾರದಲ್ಲಿ ಏರಿಳಿತಗಳನ್ನು ಕಂಡಿದ್ದ  ಆಟೋಮೊಬೈಲ್‌ ಕಂಪನಿಗಳು ವರ್ಷಾಂತ್ಯಕ್ಕೆ  ಭರ್ಜರಿ ಕೊಡುಗೆ ಹಾಗೂ ವಿಶೇಷ ರಿಯಾಯಿತಿಗಳ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ.

ಗ್ರಾಹಕರು ಮುಂದಿನ ವರ್ಷದ ನಿಗದಿತ ಶುಲ್ಕಗಳಿಗೆ ಬದಲಾಗಿ ಈ ವರ್ಷದ ನೋಂದಣಿ ದರದೊಂದಿಗೆ ವಾಹನವನ್ನು ಖರೀದಿಸಬಹುದಾಗಿದೆ. ಜತೆಗೆ 2020ರ ಏಪ್ರಿಲ್‌ 1ರಿಂದ ಜಾರಿಗೆ ಬರುವ ಬಿಎಸ್‌-6 ಮಾದರಿ ವಾಹನಗಳು ಮಾರುಕಟ್ಟೆಗೆ ಬರುವುದರಿಂದ ಬಾಕಿ ಉಳಿದಿರುವ ಬಿಎಸ್‌-4 ವೃತ್ತಿಯ ವಾಹನಗಳನ್ನು ಮಾರಾಟ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ರಿಯಾಯಿತಿ ಎಷ್ಟು?

ಮಾರುತಿ ಸುಜುಕಿ
ಕಾರು       —     ರಿಯಾಯಿತಿ (ರೂ)

Advertisement

ಆಲ್ಟೋ       –       800   60,000

ಬಲೆನೋ     –       45,000

ಎಸ್‌-ಕ್ರಾಸ್‌  –       1.13 ಲಕ್ಷ

ಸಿಯಝ್ (ಪೆಟ್ರೋಲ್)       –       75,000

ಲಗ್ನಿಸ್‌ (ಪೆಟ್ರೋಲ್)         –       65,000

ಹ್ಯುಂಡೈ ಇಂಡಿಯಾ
ಕಾರು        —         ರಿಯಾಯಿತಿ (ರೂ)

ಸ್ಯಾಂಟ್ರೊ    –       55,000

ವರ್ನಾ                –       60,000

ಕ್ರೆಟಾ          –       95,000

ಎಲಾಂಟ್ರಾ   –       2 ಲಕ್ಷ

ಗ್ರ್ಯಾಂಡ್‌ ಜಿ 10       –       20,000

ವೋಕ್ಸ್ ವ್ಯಾಗನ್‌
ಕಾರು         –       ರಿಯಾಯಿತಿ (ರೂ)

ಪೊಲೊ       –       1.5 ಲಕ್ಷ

ಹೋಂಡಾ ಕಾರುಗಳು
ಕಾರು         –       ರಿಯಾಯಿತಿ (ರೂ)

ಅಮೇಜ್‌      –       42,000

ಜಾಝ್        –       50,000

ಡಬ್ಲ್ಯೂಆರ್‌-ವಿ       –       45,000

ಸಿಟಿ ಸೆಡಾನ್‌         –       62,000

ಹೋಂಡಾ ಸಿವಿಕ್‌    –       2.5 ಲಕ್ಷ

ಟಾಟಾ ಮೋಟರ್ಸ್‌
ಕಾರು         –       ರಿಯಾಯಿತಿ (ರೂ)

ಟಿಯಾಗೊ    –       75,000

ಹೆಕ್ಸಾ         –       1.65 ಲಕ್ಷ

ನೆಕ್ಸಾನ್‌      –       1.07 ಲಕ್ಷ

Advertisement

Udayavani is now on Telegram. Click here to join our channel and stay updated with the latest news.

Next