Advertisement
ದೇಶದ ವಾಹನ ಮಾರಾಟ ಕ್ಷೇತ್ರದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಮಾರಾಟದ ಪಾಲೇ ಅತ್ಯಧಿಕ. ದೇಶದ ವಾಯುಮಾಲಿನ್ಯಕ್ಕೆ ಇವುಗಳ ಕಾಣಿಕೆಯೂ ಅಷ್ಟೇ ಅಧಿಕ! ಹಾಗಾಗಿ ಈ ಶ್ರೇಣಿಯಲ್ಲಿನ ವಾಹನಗಳನ್ನು ತೈಲಾಧಾರಿತ ಬದಲಿಗೆ ವಿದ್ಯುತ್ ಆಧಾರಿತವಾಗಿ ಪರಿವರ್ತಿಸಿದರೆ ವಾಯು ಮಾಲಿನ್ಯವನ್ನು ಗಣನೀಯವಾಗಿ ಇಳಿಸಬಹುದು ಎನ್ನುವುದು ಸರಕಾರದ ಲೆಕ್ಕಾಚಾರ. ಹಾಗಾಗಿ ವಿದ್ಯುತ್ ಚಾಲಿತ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಬೇಕಾದ ಚಾರ್ಜಿಂಗ್ ಪಾಯಿಂಟ್‌ಗಳನ್ನು ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಇವು ಸಾರ್ವಕಾಲಿಕ ಹವಾಮಾನಕ್ಕೆ ಒಗ್ಗು ವಂಥ ಯಂತ್ರಗಳಾಗಿರಲಿದ್ದು, ಯಾವುದೇ ಸ್ಥಳದಲ್ಲಿ 220 ವೋಲ್ಟೆàಜ್ ಹಾಗೂ 15 ಆ್ಯಂಪಿಯರ್ ವಿದ್ಯುತ್ ಇರುವ ಕಡೆ ಸುಲಭವಾಗಿ ಬಳಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಲೆ ಎಷ್ಟು?
ಸರಕಾರಿ, ಖಾಸಗಿ ಸಹ ಭಾಗಿತ್ವದಲ್ಲಿ ಚಾರ್ಜಿಂಗ್ ಪರಿಕರಗಳನ್ನು ತಯಾರಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ಇದರಡಿ ತಯಾರಾಗುವ ಪ್ರತೀ ಚಾರ್ಜರ್‌ನ ಕನಿಷ್ಠ ಬೆಲೆ 3,500 ರೂ. ಇರಲಿದೆ. ಸದ್ಯದ ಮಾರುಕಟ್ಟೆಯಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ, ತ್ರಿಚಕ್ರ ವಾಹನಗಳ ಚಾರ್ಜರ್ ಗಳ ಬೆಲೆ 15,000 ರೂ.ಗಳಿಂದ 20,000 ರೂ. ವರೆಗೆ ಇದೆ. ಇದೇ ತಂತ್ರಜ್ಞಾನವುಳ್ಳ ಸಣ್ಣ ಗಾತ್ರದ ಚಾರ್ಜರ್ ಗಳನ್ನು ತಯಾರಿ ಸಲು ಅನೇಕ ಕಂಪೆನಿಗಳು ಮುಂದೆ ಬಂದಿವೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಡಿಎಸ್‌ಟಿ) ಸಚಿವಾಲಯ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.