ವಿಜಯಪುರ: ನಗರದಲ್ಲಿ ಜರುಗಿದ ಲಿಂಗಾಯತ ರ್ಯಾಲಿಗೆ ಬಂದಿದ್ದ ಧಾರವಾಡ ಜಿಲ್ಲೆಯ ಪ್ರತಿನಿಧಿಗಳಿದ್ದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 11 ಜನರು ಗಾಯಗೊಂಡಿರುವ ಘಟನೆ ನಗರದ ಹೊರ ವಲಯದಲ್ಲಿ ಜರುಗಿದೆ.
ಲಿಂಗಾಯತ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಳ್ಳಿಕೇರಿ ಗ್ರಾಮದ ಪ್ರತಿನಿಧಿಗಳು, ರ್ಯಾಲಿ ಬಳಿಕ ಇಂಡಿ ತಾಲೂಕಿನ ಇಂಚಗೇರಿ ಗ್ರಾಮದ ಮಠಕ್ಕೆ ಹೊರಟಿದ್ದರು. ಈ ಹಂತದಲ್ಲಿ ನಗರದ ಹೊರ ವಲಯದಲ್ಲಿ ಸೋಲಾಪುರ ಬೈಪಾಸ್ ಬಳಿ
ಕ್ರೂಸ್‌ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಕಾರಣ 11 ಜನರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಎಲ್ಲಿರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಯಶವಂತ (30), ನಾಗರೆಡ್ಡಿ ಹೆಬ್ಬಸೂರ (38), ಸಿದ್ದಲಿಂಗಪ್ಪ ಸಿದ್ದಪ್ಪ ಶಿರೂರ (43), ಬಸವರೆಡ್ಡಿ ಹೇಮರೆಡ್ಡಿ ಹಿರಡ್ಡಿ (45), ಸಂಗಪ್ಪ ಅಂದಾನಪ್ಪ ದಿಂಡಿ (61), ಶಿವನಗೌಡ ನಿಂಗನಗೌಡ ಕುರಟ್ಟಿ (49), ಆಂದಾನಗೌಡ ಪರತಗೌಡ ಪಾಟೀಲ (35), ದೇವಪ್ಪ ಬಸಪ್ಪ ಸೊಂಡಿಹಾಳ (54), ಪರಮೇಶ ಮಾಹಾದೇವಪ್ಪ ಚಂದರಗಿ (35), ಗುರಪ್ಪ ಆನಂದಪ್ಪ ಚಂದರಗಿ (35), ಕರಕಪ್ಪ ಬಸಪ್ಪ ಚಂದರಗಿ (60), ಸಿದ್ದಲಿಂಗಪ್ಪ ಬಸಪ್ಪ ಗೋಕಾಕ (32) ಗಾಯಾಳುಗಳಂದು ಗುರುತಿಸಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಲೇ ಆಸ್ಪತ್ರೆಗೆ ಧಾವಿಸಿದ ಸಚಿವರಾದ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ, ಶಾಸಕರಾದ ಬಸವರಾಜ ಹೊರಟ್ಟಿ, ಬಿ.ಆರ್. ಪಾಟೀಲ ಆಳಂದ ಆವರು ಗಾಯಾಗಳುಗಳ ಯೋಗಕ್ಷೇಮ ವಿಚಾರಿಸಿದರು. ಗಾಯಾಳುಗಳು ಒಂದೆರಡು ದಿನಗಳಲ್ಲಿ ಗುಣಮುಖವಾಗಿ ಮನೆಗೆ ತೆರಳಲಿದ್ದಾರೆ ಎಂದು ವೈದ್ಯರು ವಿವರಿಸಿದ್ದಾರೆ.