Advertisement

ತರಕಾರಿ ಸಾಗಾಣಿಕೆ ವಾಹನ ಬೈಕಿಗೆ ಢಿಕ್ಕಿ: ಇಬ್ಬರು ಸಾವು

11:09 AM Mar 31, 2022 | Team Udayavani |

ಸೊರಬ: ತರಕಾರಿ ಸಾಗಾಣಿಕೆ ವಾಹನ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕರ್ಜಿಕೊಪ್ಪ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

Advertisement

ಶಿಕಾರಿಪುರ ತಾಲೂಕಿನ ಕರ್ನಲ್ಲಿ ಗ್ರಾಮದ ರುದ್ರಗೌಡ ಮಲ್ಲೇಶಗೌಡ(50) ಹಾಗೂ ಭರಮಗೌಡ ಚಂದ್ರಪ್ಪ ( 35) ಮೃತ ದುರ್ದೈವಿಗಳು.

ಶಿರಾಳಕೊಪ್ಪ ಮಾರ್ಗವಾಗಿ ಸಾಗರದೆಡೆಗೆ ತೆರಳಿತ್ತಿದ್ದ ತರಕಾರಿ ಸಾಗಾಣಿಕೆ ವಾಹನ ಎದುರಿಗೆ ಬರದುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಸಿನಿಮೀಯ ಮಾದರಿ ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ಎಳೆಯೊಯ್ದ ಪೋಷಕರು

ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next