Advertisement
ಇಂಥ ಟೇಸ್ವೀ ಚೀನೀ ಅಡುಗೆಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.ಹಾಗಾದರೆ ಇನ್ನೇಕೆ ತಡ ಸ್ವಾಧಿಷ್ಟಕರವಾಗಿ ವೆಜಿಟೆಬಲ್ ಸ್ಪ್ರಿಂಗ್ ರೋಲ್ಸ್ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ಮಾಡಿಕೊಂಡು ಸ್ವಾಧಿಷ್ಟವಾಗಿ ಸವಿಯಿರಿ.
ಮೈದಾ 1/4ಕಪ್, ಕಾನ್‌ಫ್ಲೋರ್ 1 ಕಪ್, ಕಾಳು ಮೆಣಸಿನ ಪುಡಿ ಸ್ವಲ್ಪ, ನೀರು ಕಪ್, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಮೈದಾ, ಕಾನ್‌ಫ್ಲೋರ್, ಉಪ್ಪು, ಕಾಳು ಮೆಣಸಿನ ಪುಡಿ ಸೇರಿಸಿ ಜರಡಿ ಚೆನ್ನಾಗಿ ಬೆರೆಸಿಕೊಳ್ಳಿ.ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿರಿ.ನಂತರ ದೋಸೆ ಕಾವಲಿ ಬಿಸಿ ಮಾಡಿ.ಒಂದು ಸೌಟು ಕಲಸಿಟ್ಟ ಹಿಟ್ಟು ಹಾಕಿ ತೆಳ್ಳಗೆ ಹರಡಬೇಕು.ಹೀಗೆ ಉಳಿದ ಹಿಟ್ಟಿನಿಂದ ತೆಳ್ಳಗಿನ ದೋಸೆಗಳನ್ನು ತಯಾರಿಸಿ ತೆಗೆದಿಡಿ.
Related Articles
ಈರುಳ್ಳಿ, ಕ್ಯಾರೆಟ್, ಕ್ಯಾಬೇಜ್ ತೆಳ್ಳಗೆ ಉದ್ದಕ್ಕೆ ಹೆಚ್ಚಿದ್ದು 1 ಕಪ್, ಈರುಳ್ಳಿ ಹೂ 1/4 ಕಪ್, ಮೊಳಕೆ ಬರಿಸಿದ ಹೆಸ್ರು 1/2 ಕಪ್, ಸೋಯಾ ಸಾಸ್ 2ಚಮಚ, ಬೆಳ್ಳುಳ್ಳಿ 2 ಚಮಚ, ಎಣ್ಣೆ 1 ಚಮಚ,ರುಚಿಗೆ ತಕ್ಕಷ್ಟು ಉಪ್ಪು.
Advertisement
ತಯಾರಿಸುವ ವಿಧಾನಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ , ಬೆಳ್ಳುಳ್ಳಿ ಸೇರಿಸಿ ಕೈಯಾಡಿಸಿ. ಸೋಯಾ ಸಾಸ್ ಸೇರಿಸಿ ಕ್ಯಾರೆಟ್, ಕ್ಯಾಬೇಜ್, ಹೆಸ್ರು, ಈರುಳ್ಳಿ ಹೂ, ಸೇರಿಸಿ. ಉಪ್ಪು ಹಾಕಿ ಅರ್ಧ ನಿಮಿಷ ಬೇಯಿಸಿರಿ. ಸ್ಟ್ರಿಂಗ್ ರೋಲ್ಸ್ ತಯಾರಿಸುವ ವಿಧಾನ
ತಯಾರಿಸಿಟ್ಟ ದೋಸೆಯನ್ನು ಅಗಲದ ತಟ್ಟೆಯ ಮೇಲೆ ಹರಡಿ. ದೋಸೆಯ ಕೆಳಭಾಗದಲ್ಲಿ ತರಕಾರಿ ಹೂರಣವಿಟ್ಟು ಕೆಳಗಿನ ಭಾಗವನ್ನು ಮಿಶ್ರಣ ಮುಚ್ಚುವಂತೆ ಮಡಚಿ. ಅನಂತರ ಎಡ-ಬಲಭಾಗದ ದೋಸೆಯನ್ನು ಮಡಚಿ. ಈಗ ಇಡೀ ದೋಸೆಯನ್ನು ಸುರುಳಿ ಸುತ್ತಿ. ಹೀಗೆ ಮಿಕ್ಕ ದೋಸೆ ಮತ್ತು ತರಕಾರಿ ಮಿಶ್ರಣದಿಂದ ಸ್ಪ್ರಿಂಗ್ ರೋಲ್ಸ್ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸ್ಪ್ರಿಂಗ್ ರೋಲ್ಸ್ ಗಳನ್ನು ಗರಿ – ಗರಿಯಾಗಿ ಕರಿದು ತೆಗೆಯಿರಿ. ಸಾಸ್‌ನೊಂದಿಗೆ ರುಚಿಕರವಾದ ವೆಜಿಟೆಬಲ್ ಸ್ಪ್ರಿಂಗ್ ರೋಲ್ಸ್ ಸವಿಯಿರಿ.