Advertisement
ರವೆಯಿಂದ ವಿವಿಧ ಬಗೆಯ ತರಕಾರಿಗಳನ್ನು ಸೇರಿಸಿ ರುಚಿರುಚಿಯಾದ ಟೋಸ್ಟ್ ತಯಾರಿಸಬಹುದು.ರವೆಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲಿÏಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿರುವುದರಿಂದ ಆರೋಗ್ಯಕರವಾದ ಟೋಸ್ಟ್ ಅನ್ನು ಸುಲಭವಾಗಿ ಮಾಡಬಹುದು. ಫ್ರೆಂಚ್ ಶೈಲಿಯ ಈ ರೋಸ್ಟ್ ಅನ್ನು ಕಾಫಿ, ಟೀ ಯೊಂದಿಗೆ ಸವಿಯಲು ಹಿತವಾಗಿರುತ್ತದೆ. ಒಮ್ಮೆ ಸವಿದರೆ ಮತ್ತೆಮತ್ತೆ ತಿನ್ನಬೇಕು ಎನ್ನುವ ಬಯಕೆಯನ್ನು ಕೆರಳಿಸುವ ಈ ತಿಂಡಿ ಅತಿಥಿಗಳಿಗೂ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.
ಬ್ರೆಡ್ ಸ್ಲೆಸ್- 8- 10, ಸೂಜಿ ರವೆ- 150 ಗ್ರಾಂ, ಮೊಸರು- 100 ಗ್ರಾಂ, ನೀರು- ಅಗತ್ಯಕ್ಕೆ ತಕ್ಕಷ್ಟು, ಕಪ್ಪು ಕಾಳುಮೆಣಸು- ಅರ್ಧ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಸಕ್ಕರೆ- 1 ಚಮಚ, ದೊಡ್ಡ ಗಾತ್ರದ ಈರುಳ್ಳಿ- 1 ಹೆಚ್ಚಿರುವುದು, ದೊಡ್ಡ ಗಾತ್ರದ ಟೊಮೊಟೊ- 1 ಹೆಚ್ಚಿರುವುದು, ಹಸಿಮೆಣಸು – ಸ್ವಲ್ಪ, ಕ್ಯಾಪ್ಸಿಕಂ- ಅರ್ಧ ಕಪ್, ಕೊತ್ತಂಬರಿ ಸೊಪ್ಪು- ಅಗತ್ಯಕ್ಕೆ ತಕ್ಕಷ್ಟು, ಬೆಣ್ಣೆ ಅಥವಾ ತುಪ್ಪ ಅಗತ್ಯಕ್ಕೆ ತಕ್ಕಷ್ಟು ತೆಗೆದಿಟ್ಟಿರಿ. ವಿಧಾನ: ಒಂದು ಬೌಲ್‌ನಲ್ಲಿ ಮೊಸರು, ಕರಿಮೆಣಸು, ಸೂಜಿ ರವೆ, ಉಪ್ಪು, ಸಕ್ಕರೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿ 10 ನಿಮಿಷಗಳ ಕಾಲ ಮಿಶ್ರಗೊಳ್ಳಲು ಬಿಡಿ. ಹೆಚ್ಚಿಕೊಂಡ ಈರುಳ್ಳಿ, ಟೊಮೇಟೋ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಇದಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಈ ಮಿಶ್ರಣವನ್ನು ಬ್ರೆಡ್ ಸ್ಲೆ„ಸ್ ಮೇಲೆ ಹಾಕಿ ಪ್ಯಾನ್‌ನಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಹಾಕಿ ಬ್ರೆಡ್ ಸ್ಲೆ„ಸ್ ಅನ್ನು ಎರಡೂ ಬದಿಯಲ್ಲೂ ಹೊಂಬಣ್ಣ ಬರುವವರೆಗೆ ರೋಸ್ಟ್ ಮಾಡಿಕೊಳ್ಳಿ. ಅನಂತರ ತ್ರಿಭುಜಾಕೃತಿಯಲ್ಲಿ ಕತ್ತರಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.
Related Articles
Advertisement