Advertisement
ಅಂದಹಾಗೆ ಇಲ್ಲಿರುವವರೆಲ್ಲ ತರಕಾರಿ ವ್ಯಾಪಾರಿಗಳಲ್ಲ. ಶಾಸಕ ಹರತಾಳು ಹಾಲಪ್ಪ ಅವರ ಸೂಚನೆಯಂತೆ ಅವರ ಕಾಲೇಜಿನ ದಿನಗಳ ಒಂದಿಷ್ಟು ಸ್ನೇಹಿತರೆಲ್ಲ ಸೇರಿ ನೇರ ರೈತರಿಂದ ಬೆಳೆಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಸಿಗುವ ತರಕಾರಿಗಳ ಬೆಲೆಯೂ ಬೇರೆ ಕಡೆಗಿಂತ ಕಡಿಮೆ ಎಂಬುದು ಗಮನಾರ್ಹ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರ ವ್ಯಾಪಾರ ಮಾಡಿ ನಂತರ ಲಾಕ್‌ಡೌನ್ ಮೊರೆಹೋಗುತ್ತಾರೆ. ವೃತ್ತಿಪರ ತರಕಾರಿ ವ್ಯಾಪಾರಿಗಳೂ ಹಳ್ಳಿಗರ ಪಾತ್ರ ತೊಟ್ಟು ಮಾರಾಟಕ್ಕಿಳಿದಿದ್ದಾರೆ. ಅಂತೂ ಬಸ್ ನಿಲ್ದಾಣ ಮಾತ್ರ ಈ ಕಾರಣಕ್ಕಾದರೂ ಗಿಜಿಗುಡುವಂತಾಗಿದೆ. Advertisement
ಬಸ್ ನಿಲ್ದಾಣ ಈಗ ತರಕಾರಿ ಮಾರುಕಟ್ಟೆ
04:44 PM Apr 17, 2020 | Naveen |