ಬಿರಿಯಾನಿ, ಫ್ರೈಡ್ ರೈಸ್ ಹೀಗೆ ಈ ಪಟ್ಟಿ ಬೆಳೆಯುತ್ತದೆ. ಹೀಗೆ ರೈಸ್ ಐಟಮ್ ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವುದು ಫ್ರೈಡ್ ರೈಸ್. ಹಾಗಾದರೆ ಇನ್ನೇಕೆ ತಡ ಸ್ವಾಧಿಷ್ಟಕರವಾಗಿ ಫ್ರೈಡ್ ರೈಸ್ ಅನ್ನು ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ಮಾಡಿಕೊಂಡು ಸ್ವಾಧಿಷ್ಟವಾಗಿ ಸವಿಯಿರಿ…
Advertisement
ಬೇಕಾಗುವ ಸಾಮಗ್ರಿಗಳು: ಸೋನಾ ಮಸೂರಿ ಅಕ್ಕಿ 2 ಕಪ್ , ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಅಣಬೆ, ಕ್ಯಾಬೇಜ್ ಒಟ್ಟಿಗೆ 1 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 1/2 ಕಪ್, ಗ್ರೀನ್ ಚಿಲ್ಲಿ ಸಾಸ್ 1 ದೊಡ್ಡ ಚಮಚ, ಸೋಯಾ ಸಾಸ್ 2 ದೊಡ್ಡ ಚಮಚ, ವಿನೇಗರ್ 1/2 ಚಮಚ, ಸಣ್ಣಗೆ ಹೆಚ್ಚಿದ ಈರುಳ್ಳಿ ಹೂವಿನ ಹಸುರು ಭಾಗ 2 3 ಚಮಚ, 1ಸಣ್ಣಗೆ ಹೆಚ್ಚಿದ ದೊಣ್ಣೆ ಮೆಣಸು, 4 ದೊಡ್ಡ ಚಮಚ ಎಣ್ಣೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ,ಕಾಳು ಮೆಣಸಿನ ಪುಡಿ 1/2 ಚಮಚ,ರುಚಿಗೆ ಉಪ್ಪು.
2 ಕಪ್ ಅಕ್ಕಿಗೆ 4ಕಪ್ ನೀರು ಹಾಕಿ ಅನ್ನ ಮಾಡಿ ರೆಡಿ ಇಡಿ. ಆಮೇಲೆ ದೊಡ್ಡ ಕಡಾಯಿಗೆ 4 ದೊಡ್ಡ ಚಮಚ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ , ದೊಣ್ಣೆ ಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿ ಆದನಂತರ ದೊಡ್ಡ ಉರಿಯಲ್ಲಿ ಹೆಚ್ಚಿರುವ ಎಲ್ಲಾ ತರಕಾರಿಗಳನ್ನು ಹಾಕಿ 2 ನಿಮಿಷಗಳ ಕಾಲ ಸರಿಯಾಗಿ ಮಗುಚಬೇಕು. ಫ್ರೈ ಆದ ನಂತರ ಸಣ್ಣಗೆ ಉರಿ ಮಾಡಿ ಸೋಯಾ ಸಾಸ್, ಗ್ರೀನ್ ಚಿಲ್ಲಿ ಸಾಸ್ , ವಿನೇಗರ್ ಹಾಕಬೇಕು. ಆ ಮೇಲೆ ಅನ್ನವನ್ನು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ ಈರುಳ್ಳಿ ಹೂವಿನ ಚೂರು ಹಾಕಿರಿ. ನಂತರ ಬೆಂಕಿಯನ್ನು ಆರಿಸಿ ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಸೇರಿಸಿ ಬಡಿಸಿ..ಸೋಯಾ ಸಾಸ್‌ನಲ್ಲಿ ಉಪ್ಪಿರುತ್ತದೆ ಸ್ವಲ್ಪ ರುಚಿ ನೋಡಿ ಬೇಕಿದ್ದರೆ ಉಪ್ಪು ಸೇರಿಸಿ . ಸಿಂಪಲ್ ವೆಜ್ ಫ್ರೈಡ್ ರೈಸ್ ರೆಡಿ.