Advertisement

ಗಮನ ಸೆಳೆದ ಬನಶಂಕರಿ ದೇವಿಯ ತರಕಾರಿ ಪೂಜೆ

08:36 AM Feb 27, 2021 | Team Udayavani |

ಬನಹಟ್ಟಿ: ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಹಳೆಯ ನೀರಿನ ಟ್ಯಾಂಕ್ ಹತ್ತಿರ ಇರುವ ಬನಶಂಕರಿ ದೇವಸ್ಥಾನದ ಜಾತ್ರೆಯ ನಿಮಿತ್ತವಾಗಿ ಬನಶಂಕರಿ ದೇವಿಗೆ ಶುಕ್ರವಾರ 108 ತರಕಾರಿ ಮತ್ತು ವಿವಿಧ ರೀತಿಯ ಹಣ್ಣು ಹಂಪಲುಗಳಿಂದ ಶೃಂಗಾರದ ಪೂಜೆಯನ್ನು ಕೈಗೊಳ್ಳಲಾಯಿತು.

Advertisement

ತರಕಾರಿಗಳಿಂದ ಮಾಡಲಾದ ಶೃಂಗಾರದ ಪೂಜೆ ಭಕ್ತರ ಗಮನ ಸೆಳೆಯಿತು. ಅರ್ಚಕರಾದ ಬಸಪ್ಪ ಮಂಡಿ ಹಾಗೂ ಸಂಗಪ್ಪ ಕೊಳ್ಳಿ, ಬಸು ನುಚ್ಚಿ, ರಾಜು ಶೀಲವಂತ, ಕಾಡು ಬಬಲಾದಿ ಮಧ್ಯ ರಾತ್ರಿಯಿಂದ ತರಕಾರಿ ಶೃಂಗಾರವನ್ನು ಕೈಗೊಂಡರು.

ಇದನ್ನೂ ಓದಿ:ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಅಷ್ಟಮದ ರಾಹು ನಾನಾ ರೀತಿಯ ಕಿರಿಕಿರಿಗೆ ಕಾರಣನಾದಾನು.

ಈ ಸಂದರ್ಭದಲ್ಲಿ ಚಿಕ್ಕಪ್ಪ ಮುಗತಿ, ಕಾಡಪ್ಪ ಪಾಟೀಲ, ಈಶ್ವರಪ್ಪ ಕೆರೂರ, ಕಾಡಪ್ಪ ಸಜ್ಜಿ, ಶೇಖರ ಶೀಲವಂತ, ಶಿವಪ್ಪ ಮನವಾಡೆ ಸೇರಿದಂತೆ ಅನೇಕರು ಇದ್ದರು.

Advertisement

ಇಂದು ರಾತ್ರಿ 8ಕ್ಕೆ ಜಾತ್ರೆಯ ನಿಮಿತ್ತವಾಗಿ ರಥೋತ್ಸವ ನಡೆಯಲಿದೆ. ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ, ಕುಂಭ ಮೇಳ, ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next