ಹೊಸದಿಲ್ಲಿ: “ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ, ಒಂದೊಳ್ಳೆ ಐಟಿ ಕೆಲಸ ಸಿಕ್ಕಿಬಿಟ್ಟರೆ ಸಾಕು, ಲೈಫ್ ಸೆಟಲ್’ ಹೀಗೆ ಭಾವಿಸುವವರು ಹಲವರಿದ್ದಾರೆ. ಆದರೆ ಹರಿಯಾಣ ಮೂಲದ ಈ ಇಬ್ಬರು ಎಂಜಿನಿಯರ್‌ಗಳಿಗೆ ಕೈ ತುಂಬ ಸಂಬಳ ತಂದುಕೊಡುತ್ತಿದ್ದ ಐಟಿ ಕೆಲಸ ಬೋರ್ ಆಯಿತಂತೆ. ಅದಕ್ಕೆಂದೇ “ಇಂಜಿನಿಯರ್ಸ್ ವೆಜ್ ಬಿರಿಯಾನಿ’ ಅಂಗಡಿ ತೆರೆದು, ಎಲ್ಲರ ಗಮನ ಸೆಳೆದಿದ್ದಾರೆ.
ಸೋನಿಪತ್‌ನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರೋಹಿತ್ ಸೈನಿ ಮತ್ತು ವಿಶಾಲ್ ಭಾರದ್ವಾಜ್‌ಗೆ ಆ ಕೆಲಸದಲ್ಲಿ ತೃಪ್ತಿ ಇರಲಿಲ್ಲವಂತೆ. ಮೊದ ಲಿನಿಂದಲೂ ಅಡುಗೆ ಮಾಡುವತ್ತ ಹೆಚ್ಚು ಒಲವಿದ್ದ ರೋಹಿತ್, ಬಿರಿಯಾನಿ ಅಂಗಡಿ ತೆರೆಯುವ ಉಪಾಯ ಮಾಡಿದ್ದಾರೆ. ಅದಕ್ಕೆ ವಿಶಾಲ್ ಕೂಡ ಜತೆಯಾಗಿದ್ದಾರೆ.
ಈ ಇಬ್ಬರು ಸೇರಿಕೊಂಡು ಸೋನಿಪತ್ ರೆಸ್ಟೋರೆಂಟ್‌ಗಳಲ್ಲಿ ದುಬಾರಿ ಬೆಲೆಗೆ ಲಭ್ಯವಿರುವ ವಿಶೇಷ ಬಿರಿ ಯಾನಿಯನ್ನು ರಸ್ತೆ ಬದಿಯ ಅಂಗಡಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾರಂಭಿಸಿದ್ದಾರೆ. ಅದಷ್ಟೇ ಅಲ್ಲದೆ ಈ ಹಿಂದೆಯೇ ರೋಹಿತ್ ಆರಂಭಿಸಿದ್ದ “ಕುಕ್ಕಿಂಗ್ ವಿತ್ ರೋಹಿತ್’ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಲವು ರೆಸಿಪಿಗಳ ವೀಡಿಯೋಗಳನ್ನೂ ಹಂಚಿಕೊಳ್ಳಲಾರಂಭಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಪದಾಧಿಕಾರಿ ಬೆಂಕಿ;ಪ್ರಮುಖ ನಾಯಕರ ಜತೆ ಚರ್ಚಿಸದೇ ಪಟ್ಟಿ ಒಯ್ದರೇ ಡಿಕೆಶಿ ?
“ಎಂಜಿನಿಯರ್ಸ್ ವೆಜ್ ಬಿರಿಯಾನಿ’ ಹೆಸರಿನಲ್ಲೇ ನಡೆಯುತ್ತಿರುವ ಬಿರಿಯಾನಿ ಅಂಗಡಿಯಲ್ಲಿ ಅಚಾರಿ ಬಿರಿಯಾನಿ ಮತ್ತು ಗ್ರೇವಿ ಚಾಪ್ ಬಿರಿಯಾನಿ ಮಾರಾಟ ಮಾಡಲಾಗುತ್ತಿದೆ. ಅರ್ಧ ತಟ್ಟೆ ಅಚಾರಿ ಬಿರಿಯಾನಿಗೆ 30 ರೂ. ಹಾಗೂ ಪೂರ್ತಿ ತಟ್ಟೆ ಅಚಾರಿ ಬಿರಿಯಾನಿಗೆ 50 ರೂ. ನಿಗದಿ ಮಾಡಲಾಗಿದೆ. ಸೋನಿಪತ್‌ನ ವಿಶೇಷವಾಗಿರುವ ಗ್ರೇವಿ ಚಾಪ್ ಬಿರಿಯಾನಿಗೆ 70 ರೂ. ಇದೆ.
ಲಾಭವಿಲ್ಲ, ನೆಮ್ಮದಿಯಿದೆ: ಎಂಜಿನಿಯರ್ ಕೆಲಸ ಮಾಡುವಾಗ ಪ್ರತೀ ತಿಂಗಳು ಬ್ಯಾಂಕ್ ಖಾತೆಗೆ ಹಣ ಬಂದು ಬೀಳುತ್ತಿತ್ತು. ಆದರೆ ಇದರಲ್ಲಿ ಹಾಗಿಲ್ಲ. ಈಗಿನ್ನೂ ಆರಂಭವಾಗಿರುವ ನಮ್ಮ ಅಂಗಡಿಯಿಂದ ಲಾಭ, ನಷ್ಟ ಎರಡೂ ಆಗುತ್ತಿಲ್ಲ. ಆದರೆ ನಾವು ಐಟಿ ಕೆಲಸ ಮಾಡು ವುದಕ್ಕಿಂತ ಈಗ ನೆಮ್ಮದಿಯಾಗಿದ್ದೇವೆ ಎನ್ನುತ್ತಾರೆ ಈ ಎಂಜಿನಿಯರ್ ಜೋಡಿ.