Advertisement

ಡಾ.ಹೆಗ್ಗಡೆಗೆ ಭಾರತ ರತ್ನಕ್ಕಾಗಿ ಪತ್ರ ಚಳವಳಿ

03:25 AM Jul 09, 2017 | |

ಕೊಪ್ಪಳ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ
ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಅವರಿಗೆ ದೇಶದ ಸರ್ವೋನ್ನತ ಪುರಸ್ಕಾರವಾದ “ಭಾರತರತ್ನ’ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಹೆಗ್ಗಡೆಯವರ ಅಭಿಮಾನಿ ಹನುಮಂತಪ್ಪ ಅಂಗಡಿ ಹೇಳಿದರು. 

Advertisement

ನಗರದ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದಕ್ಕಾಗಿ ಭಕ್ತರ ಮೂಲಕ ಒಂದು ಕೋಟಿ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಬರೆಯುವ ಚಳವಳಿ ಆರಂಭಿಸಲಾಗಿದೆ.

ಕೊಪ್ಪಳ ಜಿಲ್ಲೆಯಿಂದ ಹಲವು ಭಾಷೆಗಳಲ್ಲಿ 2000 ಪತ್ರ ಕಳುಹಿಸಲಾಗಿದೆ. ಇನ್ನೂ 3000 ಪತ್ರಗಳನ್ನು ಶೀಘ್ರದಲ್ಲೇ
ಕಳುಹಿಸಲಾಗುವುದು. ಉರ್ದು, ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಪತ್ರ ಚಳವಳಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಕಳುಹಿಸಲಾಗುತ್ತಿದೆ ಎಂದರು. ಡಾ. ವೀರೇಂದ್ರ  ಹೆಗ್ಗಡೆಯವರು ಧರ್ಮಸ್ಥಳ ಧರ್ಮಾಧಿಕಾರಿಯಾಗಿ ಈ ವರ್ಷ ಅ.24ಕ್ಕೆ 50 ವರ್ಷಗಳು ಪೂರ್ಣಗೊಳ್ಳಲಿವೆ.

ರಾಜ್ಯಾದ್ಯಂತ 80ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಜೊತೆಗೆ ಆಸ್ಪತ್ರೆಗಳನ್ನು ಆರಂಭಿಸಿದ್ದಾರೆ. ಸರ್ಕಾರದ ಪ್ರತಿ ಯೋಜನೆಗೂ ಸಹಕಾರ ನೀಡುವ ಜತೆಗೆ, ಮದ್ಯವರ್ಜನ ಹಾಗೂ ಸ್ವತ್ಛತೆಗೆ ಆದ್ಯತೆ ನೀಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next