Advertisement

ವೀರಶೈವ ಮಹಾಸಭಾದ ತಾಲೂಕು ಘಟಕ ರಚನೆ

09:31 PM Sep 24, 2019 | Team Udayavani |

ಹನೂರು: ನೂತನವಾಗಿ ಘೋಷಣೆಯಾದ ಹನೂರು ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ವೀರಶೈವ ಮಹಾಸಭಾದ ತಾಲೂ ಕು ಘಟಕವನ್ನು ರಚಿಸಲಾಗಿದ್ದು ಸಮಾಜವನ್ನು ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಅಖಿಲ ಬಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂ ಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.

Advertisement

ನಿವೇಶನ ಪಡೆಯಲು ಸಹಕಾರ ನೀಡಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಹನೂರು ತಾಲೂ ಕು ಘಟಕಕ್ಕೆ ಎಮಾಜದ ಪ್ರತಿಯೊಬ್ಬರೂ ಒಮ್ಮತದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಸಮಾಜವನ್ನು ಒಗ್ಗೂಡಿಸಿ ಕಟ್ಟುವ ಕೆಲಸ ಕೇವಲ ಮಹಾಸಭಾದ ಪದಾಧಿಕಾರಿಗಳ ಜವಾಬ್ದಾರಿಯಲ್ಲ. ಇದಕ್ಕೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ನೂತನ ಘಟಕಕ್ಕೆ ಒಂದು ನಿವೇಶನದ ಅವಶ್ಯಕತೆಯಿದ್ದು ಮೊದಲು ಒಂದು ನಿವೇಶನ ಪಡೆಯಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ಮಹಿಳೆಯರಿಗೆ ಆದ್ಯತೆ: ಯಾವುದೇ ಸಂದರ್ಭದಲ್ಲೂ ರಾಜಕೀಯವನ್ನು ಬದಿಗೊತ್ತಿ ಸಮಾಜದ ನಾವೆಲ್ಲಾ ಒಂದು ಎಂದು ಕಾರ್ಯನಿರ್ವಹಿಸಬೇಕು. ವೀರಶೈವ ಸಮಾಜ 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಆದ್ಯತೆ ನೀಡಿದ ಸಮಾಜವಾಗಿದೆ ಎಂದು ತಿಳಿಸಿದರು.

ಪ್ರತ್ಯೇಕ ಎಂಬ ಭಾವನೆಬೇಡ: ವೀರಶೈವ ಮಹಾಸಭಾದ ರಾಜ್ಯ ಕಾರ್ಯದರ್ಶಿ ಹೆಗ್ಗವಾಡಿಪುರ ಮಹದೇವಸ್ವಾಮಿ ಮಾತನಾಡಿ, ಯಾವುದೇ ಸಂದರ್ಭದಲ್ಲಿಯೂ ವೀರಶೈವ – ಲಿಂಗಾಯತ ಪ್ರತ್ಯೇಕ ಎಂಬ ಭಾವನೆಬೇಡ. ಈ ರೀತಿ ಒಡಕು ಉಂಟಾದಲ್ಲಿ ಅದು ನಮ್ಮ ಸಮಾಜಕ್ಕೆ ಹಿನ್ನಡೆಯಾಗುತ್ತದೆ ಎಂದು ತಿಳಿಸಿದರು.

ನೂತನ ಪದಾಧಿಕಾರಿಗಳ ಪದಗ್ರಹಣ: ಅಖಿಲ ಭಾತರ ವೀರಶೈವ ಮಹಾಸಭಾದ ನೂತನ ಹನೂರು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಕಣ್ಣೂರು ಬಸವರಾಜಪ್ಪ, ನೂತನ ಪದಾಧಿಕಾರಿಗಳಾದ ಚಿಂಚಳ್ಳಿ ಬಸವಣ್ಣ, ರಾಮಾಪುರ ನಾಗೇಂದ್ರಪ್ರಭು, ಅನಾಪುರ ಮಹದೇವಸ್ವಾಮಿ, ರಾಮಾಪುರ ಅಶ್ವಥ್‌, ಜಯಣ್ಣ, ರಾಜಪ್ಪ, ಪ್ರಭುಸ್ವಾಮಿ, ಜಗದೀಶ್‌, ಬಂಡಳ್ಳಿ ಶಿವಕುಮಾರ್‌, ನಾಗರಾಜು, ಪೆದ್ದಯ್ಯ, ರಾಜಪ್ಪ, ಜಗದೀಶ್‌, ಮಹದೇವಸ್ವಾಮಿ, ಶಿಲ್ಪಾ ಉಮೇಶ್‌, ಶೈಲಜಾ ಅವರಿಗೆ ಪ್ರಮಾಣಪತ್ರ , ನೆನಪಿನ ಕಾಣಿಕೆ ವಿತರಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

Advertisement

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಯಳಂದೂರು ತಾಲೂಕು ಅಧ್ಯಕ್ಷ ಪುಟ್ಟಸುಬ್ಬಪ್ಪ, ಜಿಪಂ ಸದಸ್ಯೆ ಲೇಖಾ ರವೀಂದ್ರ, ತಾಪಂ ಸದಸ್ಯ ಲೋಕೇಶ್‌ಕುಮಾರ್‌, ಹಾಪ್‌ಕಾಮ್ಸ್‌ ನಿರ್ದೇಶಕ ಉದ್ದನೂರು ಪ್ರಸಾದ್‌, ಮುಖಂಡರಾದ ನಾಗೇಂದ್ರಬಾಬು, ನಾಗನತ್ತ ಗುರುಮಲ್ಲಪ್ಪ, ಸದಾಶಿವಮೂರ್ತಿ, ಮೂರ್ತಿ, ವೃಷಭೇಂದ್ರ ಸ್ವಾಮಿ, ರಾಮಾಪುರ ಮಾದೇಶ್‌, ಮುರುಡೇಶ್ವರ ಸ್ವಾಮಿ, ರಾಜಶೇಖರ್‌ ಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next