ಯುವ ‘ವೀರರಾಣಿ ಅಬ್ಬಕ್ಕ ಉತ್ಸವ – 2018’ಕ್ಕೆ ಸೋಮೇಶ್ವರ ಗ್ರಾಮ ಸಂಪೂರ್ಣ ಸಿದ್ಧಗೊಂಡಿದ್ದು, ಫೆ. 3, 4ರಂದು ವಿಜೃಂಭಣೆಯಿಂದ ನಡೆಯಲಿದೆ.
Advertisement
ರಾ.ಹೆ. 66ರ ಬಳಿ ಇರುವ ವೇದಿಕೆಗೆ ಚಪ್ಪರ ನಿರ್ಮಾಣ ಕಾರ್ಯ ಶುಕ್ರವಾರ ಸಂಜೆ ವೇಳೆ ಮುಗಿದಿದೆ. ತಲಪಾಡಿ ಕಡೆಯಿಂದ ಕೆ.ಸಿ.ರೋಡ್ ಬಳಿ, ತೊಕ್ಕೊಟ್ಟು ಅಂಬಿಕಾ ರಸ್ತೆ ಸೇರಿದಂತೆ ಸುಮಾರು 7 ಕಡೆ ಸ್ವಾಗತ ಕಮಾನುಗಳನ್ನು ಹಾಕಲಾಗಿದೆ.
ಜಾನಪದ ದಿಬ್ಬಣ, ಮಹಿಳಾ ವಿಚಾರ ಗೋಷ್ಠಿ, ಬ್ಯಾರಿ ಭಾಷಾ ಕಾರ್ಯಕ್ರಮ, ಹಾಸ್ಯರಂಜನೆ, ಕೊಂಕಣಿ ಸಾಂಸ್ಕೃತಿಕ ವೈವಿಧ್ಯ, ಬಹುಭಾಷಾ ಕವಿಗೋಷ್ಠಿ, ತುಳು ವೈಭವ, ಮಹಿಳಾ ಯಕ್ಷಗಾನ, ಯಕ್ಷರೂಪಕ, ಭರತ ನಾಟ್ಯ ಕಾರ್ಯಕ್ರಮಗಳೊಂದಿಗೆ ಕೊಳ್ನಾಡು ಮಂಚಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ವಿಶೇಷವಾಗಿ ಮಣ್ಣಿನ ಮಗಳು ಅಬ್ಬಕ್ಕ ನಾಟಕ ಗಮನ ಸೆಳೆಯಲಿದೆ.
Related Articles
ವೀರ ರಾಣಿ ಅಬ್ಬಕ್ಕ ಉತ್ಸವಕ್ಕೆ ಈ ಬಾರಿ 2,500 ಆಸನ ವ್ಯವಸ್ಥೆ ಮಾಡಲಾಗಿದೆ. ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಉತ್ಸವದ ಸ್ಥಳೀಯ ಉಸ್ತುವಾರಿ ವಹಿಸಿಕೊಂಡಿರುವ ಪದಾಧಿಕಾರಿಗಳು ತಿಳಿಸಿದ್ದಾರೆ.
Advertisement