ಮೈಸೂರು: ಕಲ್ಯಾಣಗಿರಿಯ ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಹುಲಿಯಮ್ಮ ತಾಯಿ ದೇವಸ್ಥಾನದ ವತಿಯಿಂದ 71ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕುಸ್ತಿ ಪಟುಗಳಿಗೆ ಶ್ರೀ ವೀರಾಂಜನೇಯ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಕಲ್ಯಾಣಗಿರಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ, ಪೈಲ್ವಾನರಾದ ಶಂಕರಪ್ಪ, ಬಸವಯ್ಯ, ಬಸವರಾಜಪ್ಪ, ಮಹದೇವಣ್ಣ, ಮಾದಪ್ಪ, ಶಿವಲಿಂಗಣ್ಣ, ರಾಜಪ್ಪ, ಜವರಪ್ಪ, ಪುಟ್ಟಪ್ಪ, ಸೀನಣ್ಣ, ಜೂನಿಯರ್ ಮಹದೇವು, ಶ್ರೀನಿವಾಸ್, ಮಂಚಯ್ಯ, ಭೀಷ್ಮ, ಕೇದಾರನಾಥ, ಮಹದೇವು,
-ಬಸವರಾಜು, ಕೃಷ್ಣ, ಚಿಕ್ಕಮೂರ್ತಿ, ಗೋವಿಂದರಾಜು, ಪ್ರಬಾಕರ್, ದಿನೇಶ್, ವಿಜಯ್, ಕೃಷ್ಣ, ಗೋಪಿಕುಮಾರ್, ರಾಜನ್, ಬಸವರಾಜು, ಮಂಜು, ರವಿಕುಮಾರ್ ದೇವರಾಜು, ನಾಗರಾಜ್, ಚಂದ್ರಶೇಖರ್, ಬಸವಲಿಂಗ ಮತ್ತು ಶ್ರೀನಿವಾಸ್ ಸೇರಿದಂತೆ 34 ಮಂದಿಗೆ ಶ್ರೀ ವೀರಾಂಜನೇಯ ಶೌರ್ಯ ಪ್ರಶಸ್ತಿ ನೀಡಲಾಯಿತು.
ಇದಕ್ಕೂ ಮುನ್ನ ಸಮಾರಂಭ ಉದ್ಘಾಟಿಸಿದ ಬಿಜೆಪಿ ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಆರ್. ರಘು ಮಾತನಾಡಿ, ಸಾಂಪ್ರದಾಯಿಕ ಕ್ರೀಡೆ ಕುಸ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವವಿಖ್ಯಾತ ದಸರೆಯಲ್ಲಿ ಹಿರಿಯ ಕುಸ್ತಿಪಟಗಳನ್ನು ಗೌರವಿಸುವ ಕೆಲಸ ಆಗಬೇಕಿದೆ.
ಆ ಮೂಲಕ ಕುಸ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದ್ದು, ಇದಕ್ಕಾಗಿ ಇಂತಹ ಸಮಾರಂಭ ಹೆಚ್ಚಿನ ಪ್ರೇರಣೆಯಾಗಲಿದೆ ಎಂದರು. ದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯ ಸ್ಲಂ ಮೋರ್ಚಾ ಕಾರ್ಯದರ್ಶಿ ಗಿರಿಧರ್, ಸಮಾಜ ಸೇವಕ ಕೆ.ರಘುರಾಮ್, ಯಾಜಮಾನ್ ಶ್ರೀನಿವಾಸ್, ಶಿವಕುಮಾರ್, ವೆಂಕಟೇಶ್ ಮತ್ತಿತರರಿದ್ದರು.