Advertisement
ಬ್ರಿಟಿಷ್ ಅಧಿಕಾರಿ ರಾಂಡ್‌ನನ್ನು ವಧಿಸಿದ ಚಾಪೇಕರ್ ಸಹೋದರರನ್ನು ಇಡೀ ದೇಶದ ಜನ ಕೊಲೆಗಡುಕರು ಅಂತ ಕರೆದಾಗ ಇನ್ನೂ ಹದಿಹರೆಯದ ಆದಿಯಲ್ಲಿದ್ದ ಬಾಲಕ ಅದು ಕೊಲೆಯಲ್ಲ, ಸಂಹಾರ. ಚಾಪೇಕರ್ ಸಹೋದ ರರು ಮಾಡಿದ್ದು ರಾಕ್ಷಸನ ಸಂಹಾರ. ಅಂದಾಗ ಬ್ರಿಟಿಷ್ ಅಧಿಕಾರಿಗಳೇ ದಂಗಾಗಿದ್ದರು. ಆ ಪುಟ್ಟ ಬಾಲಕನ ಧೈರ್ಯ ಕಂಡು ಭಾರತೀಯರು ಮೂಕವಿಸ್ಮಿತರಾಗಿದ್ದರು. ಇವತ್ತು “ಧೈರ್ಯ’ ಅಂದಾಗ ಸಾವರ್ಕರ್ ನೆನಪಾಗುತ್ತಾರೆ.
Related Articles
Advertisement
ದೇಶಾದ್ಯಂತ ಇರುವ ಬ್ರಿಟಿಷರ ಮೂರ್ತಿಗಳನ್ನು ಧ್ವಂಸ ಮಾಡಬೇಕು ಅನ್ನುವ ಸಾಮಾನ್ಯ ಗುರಿ ಯಿಟ್ಟು ಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್‌ರಿಗೆ ರಾಸ್ ಬಿಹಾರಿ ಬೋಸ್‌ರ ಸಂಪರ್ಕ ಸಾಧಿಸುವಂತೆ ವ್ಯವಸ್ಥೆ ಮಾಡಿ, ಜಪಾನಿಗೆ ಕಳುಹಿಸಿ INA ಗೆ ಪ್ರೇರಣೆ ನೀಡಿದ್ದು ಸಾವರ್ಕರ್. ಎರಡನೇ ಮಹಾಯುದ್ಧ ಸ್ಫೋಟವಾದಾಗ ಸಾವರ್ಕರ್ ಹೇಳುತ್ತಾರೆ ಎರಡನೇ ಮಹಾಯುದ್ಧ ಮುಗಿಯುವಷ್ಟರಲ್ಲಿ ಬ್ರಿಟಿಷ್ ಸರಕಾರ ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಅನಂತರ ಅವರು ಭಾರತದಲ್ಲಿ ಆಡಳಿತ ನಡೆಸು ವಷ್ಟು ಶಕ್ತಿಯನ್ನು ಹೊಂದಿರುವುದಿಲ್ಲ. ಹಾಗಾಗಿ ಅವರು ಖಂಡಿತವಾಗಿಯೂ ಭಾರತವನ್ನು ಬಿಟ್ಟು ಹೋಗುತ್ತಾರೆ. ಅಂತಹ ಸಮಯದಲ್ಲಿ ನಮ್ಮ ಸೈನಿಕ ಶಕ್ತಿ ಅತ್ಯಂತ ಸಮೃದ್ಧವಾಗಿ ಬಲಶಾಲಿ ಯಾಗಿರಬೇಕು. ದೇಶಾದ್ಯಂತ ಯುವಕರು ಸೈನ್ಯಕ್ಕೆ ಸೇರುವಂತೆ ಪ್ರೇರಣೆ ನೀಡಬೇಕು. ಇದು ತೀರಾ ಅನಿವಾರ್ಯ ಅಂದಾಗ ಹಲವು ನಾಯಕರು ಸಾವರ್ಕರ್ ಮಾತನ್ನು ಅಪಹಾಸ್ಯ ಮಾಡುತ್ತಾರೆ. ಇದರಿಂದ ವಿಚಲಿತರಾಗದ ಸಾವರ್ಕರ್ ದೇಶಾದ್ಯಂತ ಪ್ರವಾಸ ಮಾಡಿ, ಯುವ ಕರನ್ನು ಸಂಘಟಿಸಿ, ಸೈನ್ಯಕ್ಕೆ ಸೇರುವಂತೆ ಪ್ರೇರಣೆ ನೀಡುತ್ತಾರೆ. ಪರಿಣಾಮ ಸಾವಿರಾರು ಸಂಖ್ಯೆಯಲ್ಲಿ ಯುವಕರು ಸೈನ್ಯ ಸೇರುತ್ತಾರೆ. ಇತಿಹಾಸಕಾರರು ಹೇಳುತ್ತಾರೆ ಸಾವರ್ಕರರ ಆ ದೂರದೃಷ್ಟಿಯ ಕಾರಣದಿಂದ ಭಾರತ ಸ್ವಾತಂತ್ರ್ಯ ಸಿಕ್ಕ ಅನಂತರವೂ ಭಾರತವಾಗಿ ಉಳಿಯಿತು. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಸುಮ್ಮನೆ ಹೋಗಲಾರರು, ಮತ ಆಧಾರಿತ ದೇಶವೊಂದನ್ನು ಹುಟ್ಟುಹಾಕಿ ಹೋಗುತ್ತಾರೆಂಬ ಸಂಗತಿ ಸಾವರ್ಕರರಿಗೆ ಮೊದಲೇ ತಿಳಿದಿತ್ತೆ? ಎಂಥ ದೂರದೃಷ್ಟಿ ಸಾವರ್ಕರರದ್ದು !!
ಸ್ವದೇಶಿ ಚಿಂತನೆಯ ಪ್ರಬಲ ಪ್ರತಿಪಾದಕ :
ವಾರವಿಡೀ ಪುಣೆಯ ಉದ್ದಕ್ಕೂ ಓಡಾಡಿ ವಿದೇಶಿ ವಸ್ತುಗಳನ್ನು ಸಂಗ್ರಹ ಮಾಡಿ ಶನಿವಾರ ದಂದು “ವಾಡಾ’ದ ಹತ್ತಿರ ತಿಲಕರ ಸಮ್ಮುಖದಲ್ಲಿ ಆ ವಿದೇಶಿ ವಸ್ತುಗಳಿಗೆ ಬೆಂಕಿ ಹಚ್ಚುವುದು, ಅಭಿನವ ಭಾರತ ಹೆಸರಿನ ಸಾವರ್ಕರ್ ಗುಂಪಿನ ಕೆಲಸ. “ಸುಡುವುದಕ್ಕಿಂತ ಬಡವರಿಗೆ ಹಂಚುವುದು ಒಳ್ಳೆಯ ದಲ್ಲವೇ? ಅಂದಿದ್ದರಂತೆ ಗಾಂಧೀಜಿ. ವಿದೇಶಿ ವಸ್ತುಗಳನ್ನು ಸುಡಬೇಕು ಎನ್ನುವುದು ನಮ್ಮ ಸಂಕಲ್ಪ ಅದನ್ನು ಹಂಚಬೇಕೆ!! ಅನ್ನುವುದು ಸಾವರ್ಕರ್ ವಾದ. ಗಾಂಧೀಜಿ ಸ್ವದೇಶಿ ವ್ರತ ಸ್ವೀಕಾರ ಮಾಡು ವುದಕ್ಕಿಂತ 15 ವರ್ಷಗಳ ಮೊದಲೇ ಸಾವರ್ಕರ್ ಸ್ವದೇಶಿ ಚಿಂತನೆಯನ್ನು ದೇಶದಲ್ಲಿ ಬಿತ್ತಿದ್ದರು.
ಅಸಾಮಾನ್ಯ ಕವಿ :
ಅಂಡಮಾನಿನಲ್ಲಿ ಪೆನ್ನು, ಪೇಪರ್ ಬಳಕೆಗೆ ಅವಕಾಶ ಸಿಗದಿದ್ದಾಗ ಮೊಳೆಯಿಂದ ಕಲ್ಲಿನ ಗೋಡೆಯಲ್ಲಿ ಹತ್ತು ಸಾವಿರ ಸಾಲುಗಳ ಕಾವ್ಯಗಳನ್ನು ರಚಿಸಿ ಬರೆಯುತ್ತಾರೆ ಸಾವರ್ಕರ್!! ಕಮಲ, ಗೋಮಾಂತಕ, ಸಾಗರ್, ವಿಶ್ವಾಸ್ ಮುಂತಾದ ಕಾವ್ಯ- ನಾಟಕಗಳ ರಚನೆಯನ್ನು ಮಾಡುತ್ತಾರೆ ಮೊಳೆಯಿಂದ.. ಮತ್ತು ಅಷ್ಟನ್ನೂ ನೆನಪಿಟ್ಟುಕೊಂಡು ಜೈಲಿನಿಂದ ಬಿಡುಗಡೆಯಾಗಿ ಬಂದ ಅನಂತರ ಮತ್ತೆ ಬರೆದು ಸಮಾಜಕ್ಕೆ ಆ ಮಹಾನ್ ಕಾವ್ಯ ಸಾಹಿತ್ಯಗಳನ್ನು ಕೊಟ್ಟ ಜಗತ್ತಿನ ಅದ್ಭುತ ಕವಿ ಸಾವರ್ಕರ್.
ಸಾಮರಸ್ಯದ ಹರಿಕಾರ :
ಸಮಾಜದ ಒಡಕಿಗೆ ಬಹುಮುಖ್ಯ ಕಾರಣ ವಾಗಿದ್ದ ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ ಭಾವನೆ ಯನ್ನು ತೊಡೆದು ಹಾಕಲು ಸಾವರ್ಕರ್ ತಮ್ಮ ತನು-ಮನಗಳೆರಡನ್ನೂ ಮುಡಿಪಾಗಿಟ್ಟರು. “ಪತಿತ ಪಾವನ ಮಂದಿರ’ ವನ್ನು ನಿರ್ಮಿಸಿ ಆ ಮಂದಿರಕ್ಕೆ ಎಲ್ಲ ಜಾತಿಯ ಜನರು ಯಾವುದೇ ಅಳುಕಿಲ್ಲದೆ ಪ್ರವೇಶಿಸಿ ಭಗವಂತನ ದರ್ಶನ ಪಡೆಯುವ ಅವಕಾಶವನ್ನು ಕಲ್ಪಿಸಿದರು. ಆಸ್ಟ್ರಿ ಯಾದ ಹಿಡಿತದಿಂದ ಇಟಲಿಯನ್ನು ಪಾರು ಮಾಡಿ ಇಟಲಿಗೆ ಸ್ವಾತಂತ್ರ್ಯ ಕೊಡಿಸಿದ ಮಹಾಪುರುಷ “ಜೋಸೆಫ್ ಮ್ಯಾಝಿನಿ’ಯಿಂದ ಪ್ರೇರಿತರಾದ ಸಾವರ್ಕರ್, ಆತನನ್ನು ಉತ್ಕೃಷ್ಟ ಶಬ್ಧಗಳಲ್ಲಿ ವರ್ಣಿಸಿ ಗ್ರಂಥವೊಂದನ್ನು ಬರೆದರು.
ಮರಾಠಿಯ ಖ್ಯಾತ ಕವಿ ಗೋವಿಂದ್ ಹೇಳು ವಂತೆ ಸಾವರ್ಕರ್ ಅಂದರೆ ತೇಜಸ್ಸು, ತ್ಯಾಗ, ತಪಸ್ಸು, ತಣ್ತೀ, ತರ್ಕ, ತಾರುಣ್ಯ, ಬಾಣದಂತೆ ವೇಗ, ತಲವಾರಿನಂತೆ ಹರಿತ, ಸಹನೆ, ಉನ್ನತವಾದ ಯಾವುದೇ ಗುಣಗಳು ಕಣ್ಮುಂದೆ ಬಂದರೂ ಆ ಗುಣಗಳಿಗೆ ಹೋಲಿಕೆಯಾಗುವ ಏಕೈಕ ಹೆಸರು ವಿನಾಯಕ ದಾಮೋದರ ಸಾವರ್ಕರ್.
ಆತ್ಮವಿಶ್ವಾಸದ ಖಜಾನೆ :
ತಾನೀಗ ಬ್ರಿಟಿಷರ ಹಡಗಿನಲ್ಲಿ ಬಂಧಿ. ಅದು ಚಲಿಸುತ್ತಿದ್ದುದು ಫ್ರಾನ್ಸಿನ ಆಳ ಸಮುದ್ರದಲ್ಲಿ. ಇಂತಹ ಪರಿಸ್ಥಿತಿಯಲ್ಲೂ ಬ್ರಿಟಿಷರ ಹಡಗಿನ ಕಿರಿದಾದ ಕಿಂಡಿಯಿಂದ ತೂರಿ, ಆ ಭೋರ್ಗರೆಯುವ ಸಮುದ್ರದಲ್ಲಿ ಈಜಿ, ದಡ ಸೇರಿದ ಸಾವರ್ಕರ್.. ಆತ್ಮವಿಶ್ವಾಸಕ್ಕೆ ಮತ್ತೂಂದು ಹೆಸರು.
– ಪ್ರಕಾಶ್ ಮಲ್ಪೆ, ಉಡುಪಿ