Advertisement

ಧರ್ಮ, ಪರಂಪರೆಯನ್ನು ಸಂರಕ್ಷಿಸೋಣ: ಡಾ|ವೀಣಾ ಬನ್ನಂಜೆ

12:33 AM Jan 18, 2023 | Team Udayavani |

ಮಂಗಳೂರು: ಗುತ್ತು, ಚಾವಡಿ ಸಹಿತ ನಮ್ಮ ಧರ್ಮ ಪರಂಪರೆಯನ್ನು ಗೌರವಿಸುತ್ತ ಅದರ ಸಂರಕ್ಷಣೆಯ ನೆಲೆಯಲ್ಲಿ ಸರ್ವರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಗುರುಪುರ ಗೋಳಿದಡಿಗುತ್ತಿನ ಧರ್ಮಕಾರ್ಯ ಅದ್ವಿತೀಯ ಎಂದು ಆಧ್ಯಾತ್ಮಿಕ ಚಿಂತಕರಾದ ಡಾ| ವೀಣಾ ಬನ್ನಂಜೆ ಅಭಿಪ್ರಾಯಪಟ್ಟರು.

Advertisement

ಗುರುಪುರ ಗೋಳಿದಡಿ ಗುತ್ತಿನ 12 ನೇ ವರ್ಷದ ಪರ್ವೋತ್ಸವ, ಗಡಿಪಟ್ಟ ಸ್ವೀಕಾರದ 12ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಜ. 19ರ ವರೆಗೆ ಗೋಳಿದಡಿಗುತ್ತು ಮನೆಯಲ್ಲಿ ಆಯೋಜಿಸಲಾಗಿರುವ “ಗುತ್ತುದ ವರ್ಸೊದ ಪರ್ಬೊ’ ಕಾರ್ಯಕ್ರಮದ ಮೊದಲ ದಿನವಾದ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಯಾವ ರಾಜಕೀಯದಿಂದಲೂ ಧರ್ಮ ಉದ್ಧಾರವಾಗುವುದಿಲ್ಲ. ಬದಲಾಗಿ ಧರ್ಮದಿಂದ ಮಾತ್ರ ರಾಜಕೀಯ ಉದ್ಧಾರವಾಗಬಹುದು. ಯಾಕೆಂದರೆ ರಾಜಕೀಯದಲ್ಲಿ ಫಲಾಪೇಕ್ಷೆ ಇದ್ದರೆ, ಧರ್ಮವು ಸಾತ್ವಿಕ ಗುಣ ಹೊಂದಿರುತ್ತದೆ. ಯಾವ ರಾಜಕೀಯದ ಬೆಂಬಲವಿಲ್ಲದೆ, ಓಲೈಕೆಯಿಲ್ಲದೆ ಧರ್ಮ ಸಂಸ್ಥಾಪನೆಯಲ್ಲಿ ನಾವು ತೊಡಗಬೇಕು ಎಂದರು.

ಶ್ಲಾಘನೀಯ ಕಾರ್ಯ
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ವೇದ, ಆರೋಗ್ಯ ವಿಭಾಗದ ಸಲಹೆಗಾರರಾದ ಡಾ| ಡಿ.ವಿ. ಕುಮಾರಸ್ವಾಮಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾರಂಪರಿಕವಾದ ಹಲವು ವಿಶೇಷತೆಗಳಿವೆ. ಇದರ ಪುನರುಜ್ಜೀವನ ಕಾರ್ಯವು ವರ್ಧಮಾನ ದುರ್ಗಾಪ್ರಸಾದ್‌ ಶೆಟ್ಟಿ ಅವರ ಮೂಲಕ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ತಿಂಗಳೆಬೀಡು ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಉದ್ಘಾಟಿಸಿದರು. ಗುಜರಾತ್‌ನ ರುದ್ರಂ ಡೈನಾಮಿಕ್ಸ್‌ನ ನಿರ್ದೇಶಕ ಕಾವೂರುಗುತ್ತು ಕೋನಾರ್ಕ್‌ ರೈ, ಕಾರಮೊಗರುಗುತ್ತು ಕೆ. ಭಾಗ್ಯರಾಜ ಆಳ್ವ, ಗುರುಪುರ ಗೋಳಿದಡಿ ಗುತ್ತಿನ ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು.

Advertisement

ಗಡಿಕಾರರಾದ ವಸಂತ ಕುಮಾರ್‌, ರಘುರಾಮ ಮುದ್ಯ ಪೂವಣಿ, ಸದಾಶಿವ ಶೆಟ್ಟಿ ಯಾನೆ ಜಯ ಶೆಟ್ಟಿ, ಬಂಕಿ ನಾಯ್ಕರು, ರತ್ನಾಕರ ಶೆಟ್ಟಿ, ಗುಣಕರ ಆಳ್ವ ಯಾನೆ ರಾಮ ರೈ, ನಿತಿನ್‌ ಹೆಗ್ಡೆ ಯಾನೆ ತಿಮ್ಮ ಕಾವ, ಸದಾಶಿವ ಹೆಗ್ಡೆ, ವೇಣುಗೋಪಾಲ ಅರಸರು, ಗುರುಪ್ರಸಾದ್‌ ಮಾಡ, ಜಗದೀಶ ಶೆಟ್ಟಿ ಯಾನೆ ಇಂರ್ದಾಳ ಕೊರಗ ಶೆಟ್ಟಿ, ದೊಡ್ಡಣ್ಣ ಶೆಟ್ಟಿ ಹಾಜರಿದ್ದರು.
ಅಕ್ಷತಾ ನವೀನ್‌ ಶೆಟ್ಟಿ ಅವರು ಸ್ವಾಗತಿಸಿದರು. ದೀಪಾ ನವೀನ್‌ ಶೆಟ್ಟಿ ಅವರು ಪ್ರಸ್ತಾವನೈದರು. ನವೀನ್‌ ಶೆಟ್ಟಿ ಎಡೆ¾ಮಾರ್‌ ಅವರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next