Advertisement
ಲ್ಲಿನ ವಿದ್ಯಾನಗರದ ಶ್ರೀ ಮರಾಠಾ ಭಾರತಿ ಮಠದ ಮರಾಠಾ ಭವನದಲ್ಲಿ ಹಮ್ಮಿಕೊಂಡಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿದಂಬರಲೀನ ಶ್ರೀ ಮಾರ್ತಾಂಡ ದೀಕ್ಷಿತರು ಬಡ್ಲಿ (ಅರವಿಂದಪ್ಪನವರು) ಅವರ ಜನ್ಮಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
Related Articles
Advertisement
ಸಂಸದ ಪ್ರಹ್ಲಾದ ಜೋಶಿ ಅವರು “ಮಾರ್ತಂಡೋ ಜ್ಞಾನಭಾಸ್ಕರಃ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಮಾರ್ತಂಡ ದೀಕ್ಷಿತರ ಜ್ಞಾನ, ತಪಸ್ಸು, ಅವರ ಜೀವನದ ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದರು. ಅಗಡಿಯ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ, ಬಾಬುಳಗಾಂವ್‌ನ ಕರ್ಕಿಹಳ್ಳಿಯ ಗುರುಚಿದಂಬರ ದೀಕ್ಷಿತರು, ಗುರ್ಲಹೊಸೂರನ ಪ್ರಸನ್ನ (ಬಾಹು) ದೀಕ್ಷಿತರು ಮಾತನಾಡಿ, ಮಾರ್ತಂಡ ದೀಕ್ಷಿತರು ನಿರಾಡಂಬರಿಗಳಾಗಿದ್ದರು.
ಕಲ್ಲಿನಂತಿದ್ದ ಶಿಷ್ಯವರ್ಗವನ್ನು ಮೂರ್ತಿಯನ್ನಾಗಿ ರೂಪಿಸಿ, ಸಮಾಜಮುಖೀ ಕಾರ್ಯ ಮಾಡಿದರು. ನಡೆದಾಡುವ ವಿಶ್ವವಿದ್ಯಾಲಯವಾಗಿದ್ದರು ಎಂದರು. ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ಇಂದು ಬ್ರಾಹ್ಮಣರ ಸಂಖ್ಯೆ ಕ್ಷೀಣಿಸುತ್ತಿದೆ. ಆದ್ದರಿಂದ ವಿಪ್ರರೆಲ್ಲ ಜಾಗೃತರಾಗಬೇಕು. ಸಂಘಟಿತರಾಗಬೇಕಿದೆ. ಪರಶುರಾಮನಂತೆ ಹೋರಾಟ ಮಾಡಬೇಕಿದೆ. ವಿಪ್ರರು ಯಾವುದೇ ಜಾತಿಯ ವಿರೋಧಿಗಳಲ್ಲ.
ಡಾ|ಅಂಬೇಡ್ಕರ್ ಅವರು ಸಂವಿಧಾನ ರಚಿಸಲು ವಿಪ್ರರೆ ಪ್ರಮುಖವಾಗಿ ಅವರಿಗೆ ಸಹಾಯ ಮಾಡಿದ್ದರು ಎಂದರು. ಬಡ್ಲಿ (ಪುಣೆ)ಯ ಅಶೋಕ ದೀಕ್ಷಿತರು, ಬಡ್ಲಿಯ ಗಂಗಾಧರ ದೀಕ್ಷಿತರು ಮೊದಲಾದವರಿದ್ದರು. ಶಂಕರಭಟ್ಟ ಜೋಶಿ ಸ್ವಾಗತಿಸಿದರು. ನರಸಿಂಹರಾವ್ ಸೋಮಲಾಪುರ ನಿರೂಪಿಸಿದರು.