Advertisement

ವೇದಾ ಕೃಷ್ಣಮೂರ್ತಿ-ಅರ್ಜುನ್‌ ಹೊಯ್ಸಳ; ಪ್ರಕೃತಿ ಮಡಿಲಲ್ಲಿ ಕ್ರಿಕೆಟಿಗರ ನಿಶ್ಚಿತಾರ್ಥ

10:52 PM Sep 11, 2022 | Team Udayavani |

ಚಿಕ್ಕಮಗಳೂರು: ಕರ್ನಾಟಕದ ಕ್ರಿಕೆಟಿಗರಾದ ವೇದಾ ಕೃಷ್ಣಮೂರ್ತಿ ಮತ್ತು ಅರ್ಜುನ್‌ ಹೊಯ್ಸಳ ಪ್ರಕೃತಿಯ ಮಡಿಲಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Advertisement

ರವಿವಾರ ಇಬ್ಬರೂ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಉಂಗುರ ಬದಲಾಯಿಸಿಕೊಳ್ಳುತ್ತಿರುವ ಚಿತ್ರಗಳನ್ನು ಪ್ರಕಟಿಸಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.

29 ವರ್ಷದ ವೇದಾ ಕೃಷ್ಣಮೂರ್ತಿ ಚಿಕ್ಕಮಗಳೂರಿನ ವರಾಗಿದ್ದು, 18ರ ಹರೆಯದಲ್ಲೇ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವೇದಾ ಮಧ್ಯಮ ಕ್ರಮಾಂಕದ ಬ್ಯಾಟರ್‌ ಹಾಗೂ ಅತ್ಯುತ್ತಮ ಫೀಲ್ಡರ್‌ ಆಗಿದ್ದು, 48 ಏಕದಿನ ಹಾಗೂ 76 ಟಿ20 ಪಂದ್ಯಗಳನ್ನಾಡಿದ್ದಾರೆ. ಒಟ್ಟು 10 ಅರ್ಧ ಶತಕ ಹೊಡೆದಿದ್ದಾರೆ.

2020ರ ಟಿ20 ವಿಶ್ವಕಪ್‌ ವೇಳೆ ಆಸ್ಟ್ರೇಲಿಯ ವಿರುದ್ಧ ಕೊನೆಯ ಸಲ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು.

32 ವರ್ಷದ ಅರ್ಜುನ್‌ ಹೊಯ್ಸಳ ಎಡಗೈ ಓಪನರ್‌ ಆಗಿದ್ದು, 2016ರಲ್ಲಿ ಮೊದಲ ಬಾರಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಕೆಪಿಎಲ್‌ನಲ್ಲಿ ಬೆಳಗಾವಿ ಪ್ಯಾಂಥರ್ ಪರ ಆಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next