Advertisement

“ಶೂಲ್‌’ on the way 

12:33 PM Oct 01, 2018 | |

ಒಂದು ಹೊಸ ಪ್ರಾಡಕ್ಟ್ ಪರಿಚಯಿಸುವುದಕ್ಕೂ ಮೊದಲು ಕಂಪನಿಗಳು “ಹವಾ’ ಎಬ್ಬಿಸುವ ರೂಢಿ ಆಟೋಮೊಬೈಲ್‌ ಮಾರುಕಟ್ಟೆಯಲ್ಲೂ ಇದೆ. ಕೆಲವು ಕಂಪನಿಗಳು ಇದೇ ನೆಲೆಯಲ್ಲಿ ಕೆಲವೊಮ್ಮೆ ಕಾನ್ಸೆಪ್ಟ್ ಕಾರುಗಳನ್ನು ಪರಿಚಯಿಸಿ ಪ್ರಚಾರ ಗಿಟ್ಟಿಸಿಕೊಳ್ಳುವುದೂ ಉಂಟು. ಇದು ಮೇಲ್ನೋಟಕ್ಕೆ ಪ್ರಚಾರದಂತೆ ಕಂಡರೂ, ಕಂಪನಿಗಳು ಇದೇ ಸೂಕ್ತಕಾಲವೆಂದು ಜನಾಭಿಪ್ರಾಯ ಸಂಗ್ರಹದಲ್ಲಿ ತೊಡಗುತ್ತದವೆ. ಮಾರುಕಟ್ಟೆಯ ಮುಂದಿನ ಅಭಿಯಾನಕ್ಕೆ ಬೇಕಾದ ಐಡಿಯಾಗಳಿಗಾಗಿ ಕೆಲಸ ಮಾಡುತ್ತಿರುತ್ತವೆ. ಕೆಲವೊಮ್ಮೆ, ಪ್ರತಿಷ್ಠಿತ ಕಂಪನಿಗಳು ಕೇವಲ ಪ್ರಚಾರಕ್ಕಾಗಿಯೇ ಹೊಸ ಉತ್ಪನ್ನಗಳ ಮಾದರಿಯನ್ನು ವಿನ್ಯಾಸಗೊಳಿಸುವುದೂ ಉಂಟು.

Advertisement

ಸಾಮಾನ್ಯವಾಗಿ, ಆಟೋಮೊಬೈಲ್‌ ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸುವ ಅಥವಾ ಹೊಸ ಮಾದರಿಯ ಕಾರೊಂದನ್ನು ಪರಿಚಯಿಸುವ ಸಂದರ್ಭದಲ್ಲಿ ಈ ಸ್ಟ್ರಾಟಜಿಗಳನ್ನು ಮಾಡಲಾಗುತ್ತದೆ. ಇದೀಗ, ಮುಂಬೈ ಮೂಲದ ಕಂಪನಿ ವಜಿರಾಣಿ ಆಟೋಮೋಟಿವ್‌ “ಶೂಲ್‌’ (Vazirani-Shul)  ಹೆಸರಿನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಟರ್ಬೈನ್‌ ಎಲೆಕ್ಟ್ರಿಕ್‌ ಹೈಪರ್‌ ಕಾರೊಂದನ್ನು ಪರಿಚಯಿಸಿದೆ. ಹಾಗೆಂದ ಮಾತ್ರಕ್ಕೆ, ನಾಳೆಯೇ ಮಾರುಕಟ್ಟೆಯಲ್ಲಿ ವಿಚಾರಿಸಿದರೆ ಈ ಬಗ್ಗೆ ಮಾಹಿತಿ ಸಿಗಲಿಕ್ಕಿಲ್ಲ. ಕಾರಣ, ಈ ಕಾರು ಇನ್ನೂ ಲಭ್ಯವಾಗುವ ಮಟ್ಟದಲ್ಲಿ ಉತ್ಪಾದನಾ ಕಾರ್ಯ ಆರಂಭವಾಗಿಲ್ಲ. ಸದ್ಯಕ್ಕೆ ಕಾನ್ಸೆಪ್ಟ್ ಮಾದರಿಯ ಕಾರನ್ನಷ್ಟೇ ಬಿಡುಗಡೆಗೊಳಿಸಿದೆ. ಆದರೆ, ಇದರ ಬೆಲೆ ಎಷ್ಟು ಎನ್ನುವುದನ್ನು ಕಂಪನಿ ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.

ಶೂಲ್‌’ ನ್ಯೂ ಸ್ಟೈಲ್‌
2012ರಲ್ಲಿ ಭಾರತದ್ದೇ ಇನ್ನೊಂದು ಕಂಪನಿ ಡಿಸಿ ಡಿಸೈನ್‌ ಇದೇ ರೀತಿ ಅವಾಂತಿ ಹೆಸರಿನ ನ್ಪೋರ್ಟ್ಸ್ ಸ್ಟೈಲ್‌ ಕಾನ್ಸೆಪ್ಟ್ ಕಾರೊಂದನ್ನು ಪರಿಚಯಿಸಿತ್ತು. ಅದನ್ನು ನೆನಪಿಸುವ ರೀತಿಯಲ್ಲಿ ಇದೀಗ ವಜಿರಾಣಿ ಕಂಪನಿ “ಶೂಲ್‌’ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ. ಶೂಲ್‌, ವಿಭಿನ್ನ ವಿನ್ಯಾಸದಿಂದ ಕೂಡಿದೆಯಾದರೂ, ಸೆಡಾನ್‌ ಸೆಗ್ಮೆಂಟ್ ಗೆ ಹೋಲಿಕೆಯ ಕ್ರೇಜಿಗಳ ಆಕರ್ಷಣೆಯ ಕಾರು. ಅವಾಂತಿ ಅಂದು ಭಾರತ ಮೂಲದ ಕಂಪನಿ ತಯಾರಿಸಿದ ಮೊದಲ ನ್ಪೋರ್ಟ್ಸ್ ಕಾರು ಎಂಬ್ಬ ಹೆಗ್ಗಳಿಕೆ ಗಳಿಸಿಕೊಂಡಿತ್ತು. “ಶೂಲ್‌’ ಇನ್ನೊಂದು ಹೆಜ್ಜೆ ಮುಂದಿದ್ದು, ದೇಶದ ಮೊದಲ ಎಲೆಕ್ಟ್ರಿಕ್‌ ಕಾನ್ಸೆಪ್ಟ್ ಕಾರು ಎಂಬ ಕೀರ್ತಿಗೆ ಪಾತ್ರವಾಗಿದೆ.


ಚುಂಕಿ ವಿನ್ಯಾಸ

ಶೂಲ್‌ ಕಾನ್ಸೆಪ್ಟ್ ಕಾರಿನ ವಿನ್ಯಾಸವನ್ನು ವಿಜಿರಾಣಿ ಆಟೋಮೋಟಿವ್‌ ಕಂಪನಿಯ ಸಂಸ್ಥಾಪಕ ಚುಂಕಿ ವಿಜಿರಾಣಿ ಅವರು ಜಾಗÌರ್‌ ಜತೆಗೂಡಿ ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಆರ್ಟ್‌ ಸೆಂಟರ್‌ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿರುವ ಚುಂಕಿ ವಿಜಿರಾಣಿ ತಮ್ಮದೇ ಕಂಪನಿಯ ಆಶ್ರಯದಲ್ಲಿ ಶೂಲ್‌ ಕಾರನ್ನು ವಿನ್ಯಾಸಗೊಳಿಸಿದ್ದು, 2021ಕ್ಕೆ ಮಾರುಕಟ್ಟೆಗೆ ಪರಿಚಯಿಸುವ ಗುರಿ ಹೊಂದಿದ್ದಾರೆ. ಲಂಡನ್‌ ಮತ್ತು ಕ್ಯಾಲಿಪೋರ್ನಿಯಾದ ಕೆಲ ವಿನ್ಯಾಸಕಾರರೂ ಚುಂಕಿ ಅವರಿಗೆ ಸಾಥ್‌ ನೀಡಿದ್ದಾರೆ. ಇತರೆ ಕಂಪನಿಗಳ ಜತೆ ಕೈಜೋಡಿಸಿಕೊಂಡು ಉತ್ಪಾದನೆಗೆ ಚಾಲನೆ ನೀಡುವ ನಿರೀಕ್ಷೆಯಲ್ಲಿದ್ದಾರೆ ಚುಂಕಿ ವಿಜಿರಾಣಿ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಇನ್ನೂ ಬೇರೆ ಬೇರೆ ಕಾರುಗಳನ್ನು ಪರಿಚಯಿಸುವ ಲೆಕ್ಕಾಚಾರದಲ್ಲಿಯೂ ಅವರಿದ್ದಾರೆ.

ಶೂಲ್‌ನ ಸಾಮರ್ಥ್ಯವೇನು?
ಶೂಲ್‌, ಕೇವಲ ಕಾರಲ್ಲ. ಯಾವುದೇ ರೇಸ್‌ ಟ್ರ್ಯಾಕ್‌ನ ಮೇಲೂ ಸಲೀಸಾಗಿ ಸ್ಪರ್ಧೆಗೆ ಸವಾಲೊಡ್ಡುವ ಕಾರನ್ನಾಗಿಯೇ ಇದನ್ನು ವಿನ್ಯಾಸಗೊಳಿಸಲಾಗಿದೆ. 1000 ಹಾರ್ಸ್‌ ಪವರ್‌ ಸಾಮರ್ಥ್ಯವನ್ನು ಹೊಂದಿರುವ ಶೂಲ್‌ 1600 ಕೆಜಿ ಭಾರ ಹೊಂದಿದೆ. ಕಾರ್ಬನ್‌ ಫೈಬರ್‌ ಕವಚವನ್ನು ಹೊಂದಿದ್ದು, ಚಾಸಿ ಕೂಡ ಸಾಕಷ್ಟು ಕಡಿಮೆ ಭಾರ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

Advertisement

ಹೆಸರಿನಲ್ಲೇ ಶಿವ ಸ್ಮರಣೆ!
ಹೌದು. ಕಂಪನಿ “ಶೂಲ್‌’ ಹೆಸರಿನ ಬಗ್ಗೆ ವಿವರಣೆ ನೀಡಿದ್ದು, ಹಿಂದೂ ದೇವತೆ ಶಿವನ ಪ್ರಮುಖ ಆಯುಧ ತ್ರಿಶೂಲದಿಂದ “ಶೂಲ್‌’ ಪದ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರಿನ ವಿನ್ಯಾಸ ಹಾಗೂ ಲ್ಯಾಂಪ್‌ ಅಳವಡಿಕೆಯಲ್ಲೂ ಅದೇ ಕಾನ್ಸೆಪ್ಟ್ನಲ್ಲಿಯೇ ವಿನ್ಯಾಸಗೊಳಿಸಿದ್ದು, ಇನ್ನೊಂದು ವಿಶೇಷ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next