ಬದಿಯಡ್ಕ: ಬದಿಯಡ್ಕ ನೂಜಿ ತರವಾಡಿನಲ್ಲಿ ಶ್ರೀ ವಯನಾಟ್ ಕುಲವನ್ ತೈಯ್ಯಂಕಟ್ಟು ಮಹೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು. ಬದಿಯಡ್ಕ ಶ್ರೀ ಕಿನ್ನಿಮಾಣಿ ಪೂಮಾಣಿ ಕ್ಷೇತ್ರದಿಂದ ಹಸಿರುವಾಣಿ ಹೊರೆ ಕಾಣಿಕೆಯು ಘೋಷಯಾತ್ರೆಯೊಂದಿಗೆ ಆಗಮಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೊರತ್ತಿ ದೈವ, ರಕ್ತ ಚಾಮುಂಡಿ ದೈವ, ವಿಷ್ಣುಮೂರ್ತಿ ದೈವ, ಪಡಿಞಾರ್ ಚಾಮುಂಡಿ ದೈವ, ಗುಳಿಗ ದೈವಗಳ ಕೋಲ ಜರಗಿತು. ತದನಂತರ ಕಾರ್ನವನ್ ದೈವದ ವೆಳ್ಳಾಟ, ಕೋರಚ್ಚನ್ ದೈವ, ಕಂಡನಾರ್ ದೈವ, ವಯನಾಟು ಕುಲವನ್ ದೈವದ ಆಗಮನ, ಚೂಟೊಪ್ಪಿಕಲ್, ಸಾಯಂಕಾಲ ವಿಷ್ಣುಮೂರ್ತಿ ದೈವದ ಕೋಲ ಜರಗಿತು. ಭಂಡಾರ ನಿರ್ಗಮನದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿದೆ. ಮರಪಿಳರ್ಕಲ್, ಕೈಮೀದ್ ಕಾರ್ಯಕ್ರಮದೊಂದಿಗೆ ನಾಲ್ಕು ದಿನಗಳ ಕಾರ್ಯಕ್ರಮವು ಸಮಾಪ್ತಿಗೊಂಡಿತು. ವ್ಯವಸ್ಥಿತವಾದ ಊಟೋಪಚಾರ, ಸ್ವತ್ಛ ಸುಂದರ ಪರಿಸರದಲ್ಲಿ ನಡೆದ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೈವದ ಅನುಗ್ರಹ, ಆಶೀರ್ವಾದ ಪಡೆದರು. ಸಾವಿರಾರು ಮಂದಿ ಭಾಗವಹಿಸಿ ಉತ್ಸವದ ಯಶಸ್ಸಿಗೆ ಕಾರಣರಾದರು.
ಚಿತ್ರಿಕರಣ ಮತ್ತು ವರದಿ : ಅಖೀಲೇಶ್ ನಗುಮುಗಂ ಕಾಸರಗೋಡು.