Advertisement

Kannada Cinema; ‘ವಾತಾಪಿ’ ಪೋಸ್ಟರ್ ಬಿಡುಗಡೆ

05:15 PM Jan 18, 2024 | Team Udayavani |

“ಶ್ರೀಸೂರ್ಯ ಚಂದ್ರ ಕಂಬೈನ್ಸ್‌’, “ಚಂದನವನ ಛಾಯ ಚಲನಚಿತ್ರ’ ಮತ್ತು “ಸಿನಿ ಕಿರಣ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಶಿವ ಪೂರ್ಣ (ಲೋಕೇಶ್‌), ಜಿ. ಕೆ. ತಿರುಮಲೇಶ್‌ ಹಾಗೂ ಮುತ್ತುರಾಜ್‌ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ “ವಾತಾಪಿ’ ಸಿನಿಮಾದ ಟೈಟಲ್‌ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆಯಾಯಿತು.

Advertisement

ಮಾಜಿ ಮುಖ್ಯಮಂತ್ರಿ ಹೆಚ್‌. ಡಿ. ಕುಮಾರಸ್ವಾಮಿ “ವಾತಾಪಿ’ ಸಿನಿಮಾದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಈ ಹಿಂದೆ “ಕ್ಷಿಪ್ರ’ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸತೀಶ್‌ ಕೃಷ್ಣ “ವಾತಾಪಿ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್‌ -ಕಟ್‌ ಹೇಳುತ್ತಿದ್ದಾರೆ.

ಪುರಾಣ ಕಾಲದ ಕಥೆಯನ್ನು ಹೊಂದಿರುವ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯಲ್ಲಿ ಮೂಡಿಬರುತ್ತಿರುವ “ವಾತಾಪಿ’ ಸಿನಿಮಾದಲ್ಲಿ ರಾಜೀವ್‌ ರಾಥೋಡ್‌, ಪಲ್ಲವಿ ಪ್ರಕಾಶ್‌, ರಾಬರ್ಟ್‌, ಜಿ. ಕೆ. ತಿರುಮಲೇಶ್‌, ಕಸ್ತೂರಿ, ರಫೀಕ್‌, ಮಂಜೇಶ್‌ ಗೌಡ, ಚೈತ್ರಾ, ಭಾನು, ಶೃತಿ, ಬೇಬಿ ಆರಾಧ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್‌, ಚೈನಿಸ್‌ ಮತ್ತು ಜಪಾನೀಸ್‌ ಭಾಷೆಗಳಲ್ಲಿ “ವಾತಾಪಿ’ ಸಿನಿಮಾವನ್ನು ತೆರೆಗೆ ತರುವ ಯೋಜನೆ ಯಲ್ಲಿದೆ ಚಿತ್ರತಂಡ. ಸದ್ಯ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ವಾತಾಪಿ’ ಸಿನಿಮಾ ಫೆಬ್ರವರಿ ವೇಳೆಗೆ ಸೆಟ್ಟೇರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next