Advertisement

ಉ.ಕ.ಕ್ಕೆ 50 ಸಾವಿರ ಕೋಟಿ ಪರಿಹಾರ ಬಿಡುಗಡೆಗೆ ಆಗ್ರಹ

06:30 PM Oct 25, 2020 | Suhan S |

ಯಾದಗಿರಿ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಎರಡು ಬಾರಿ ಆವರಿಸಿ ಹಲವಾರು ಗ್ರಾಮಗಳು ನೀರಿನಲ್ಲಿ ಮುಳುಗಿವೆ. ಜನರ ಬದುಕು ತೀರ ಸಂಕಷ್ಟದಲ್ಲಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಭಾಗಕ್ಕೆ ಏಕೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿ, ಕೂಡಲೇ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಈಶ್ಯಾನ್ಯ ಶಿಕ್ಷಕರ ಮತಕ್ಷೆತ್ರದ ಅಭ್ಯರ್ಥಿ ವಾಟಾಳ್‌ ನಾಗರಾಜ ಆಗ್ರಹಿಸಿದರು.

Advertisement

ಶನಿವಾರ ಮಧ್ಯಾಹ್ನ ನಗರದ ಗ್ರಾಮೀಣ ಬಸ್‌ ನಿಲ್ದಾಣದಲ್ಲಿ ನೆಲದ ಮೇಲೆ ಮಲಗುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ರಾಜ್ಯ ಮುಖ್ಯಮಂತ್ರಿ ಬಿಎಸ್‌ವೈ ವೈಮಾನಿಕ ಮೂಲಕ ಕಲ್ಯಾಣ ಕರ್ನಾಟಕದ ಪರಿಸ್ಥಿತಿ ವೀಕ್ಷಿಸಿದ್ದಾರೆ. ಅವರು ವಿಮಾನದಿಂದ ಇಳಿದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೆ ಜನರ ವಾಸ್ತವಿಕ ಪರಿಸ್ಥಿತಿ ಅರ್ಥವಾಗುತ್ತಿತ್ತು. ಸರ್ಕಾರ ಮೊದಲು ಪ್ರವಾಹ ಭೀತಿಯಿಂದ ತೊಂದರೆ ಎದುರುಸುತ್ತಿರುವ ಗ್ರಾಮಗಳನ್ನು ಸ್ಥಳಾಂತರಗೊಳಿಸಿ ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಇಲ್ಲಿರುವ ಪರಿಸ್ಥಿತಿ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಉದ್ಬವಿಸಿದರೇ ಪ್ರಧಾನಿಗಳು ಭೇಟಿ ನೀಡುತ್ತಿದ್ದರು. ಆದರೆ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಅವರ ಹಾಗೂ ಕೇಂದ್ರ ಸಚಿವರ ಕಾರ್ಯವೈಖರಿ ಖಂಡಿಸಿ ಪ್ರಧಾನಿ ಕಾರ್ಯಾಲಯದ ಮುಂದೆ ರಾಜ್ಯದ ಸಂಸದರು ಸತ್ಯಾಗ್ರಹ ಮಾಡಬೇಕಿತ್ತು ಎಂದು ಟೀಕಿಸಿದರು.

ಅ. 29ರಂದು ಹುಬ್ಬಳ್ಳಿಯಲ್ಲಿ ರಾಜ್ಯದ ಸಂಸದರು, ಕೇಂದ್ರ ಸಚಿವರ ಕಾರ್ಯವೈಖರಿ ಖಂಡಿಸಿ ಅವರ ಮಾನ ಹರಾಜ್‌ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ಶಾಲೆ ಆರಂಭಿಸಲು ಚಿಂತನೆ ನಡೆಸಿದೆ. ಶಿಕ್ಷಕರ ಸಮಸ್ಯೆಗಳಪರಿಹಾರಕ್ಕಾಗಿ ನಾನು ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ಸ್ಪ ರ್ಧಿಸಿದ್ದು ಪ್ರಾಮಾಣಿಕ ಸೇವೆಗಾಗಿ ನನ್ನನ್ನು ಬೆಂಬಲಿಸಬೇಕು  ಎಂದು ಮನವಿ ಮಾಡಿದರು.

ಮಹತ್ವಾಕಾಂಕ್ಷಿ  ಜಿಲ್ಲೆ ಯೋಜನೆಯಡಿ ಸೂಚ್ಯಂಕಗಳ ಏರಿಕೆಗೆ ಶ್ರಮಿಸಿ: ಡಿಸಿ :

Advertisement

ಯಾದಗಿರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಗಳ ಯೋಜನೆಯಡಿಆಯ್ಕೆಯಾಗಿರುವ ಯಾದಗಿರಿ  ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ನಿಗದಿ ಪಡಿಸಲಾಗಿರುವ ಮಾನದಂಡಗಳ ಏರಿಕೆಗೆ ಕ್ರಮವಹಿಸಿ,ಸೂಚ್ಯಂಕ ಮತ್ತಷ್ಟು ಉತ್ತಮಪಡಿಸುವಂತೆ ಜಿಲ್ಲಾಧಿ ಕಾರಿ ಡಾ| ರಾಗಪ್ರಿಯ ಆರ್‌. ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹತ್ವಾಕಾಂಕ್ಷಿ ಜಿಲ್ಲೆಯ ಸೂಚ್ಯಂಕಗಳ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು.ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ಸೂಚ್ಯಂಕಗಳನ್ನುಏರಿಕೆಗೆ ಮಹತ್ವಾಕಾಂಕ್ಷಿ ಜಿಲ್ಲೆಗಳ ಯೋಜನೆಯಡಿ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಕಾರಣ ಸಂಬಂಧಿಸಿದ ಇಲಾಖೆಗಳ ವ್ಯಾಪ್ತಿಯಡಿ

ಕೈಗೊಳ್ಳಬೇಕಾದ ಅಗತ್ಯ ಕಾರ್ಯ ಚಟುವಟಿಕೆ ಕೈಗೊಂಡು ನಿಗದಿ ಪಡಿಸಿದ ಮಾನದಂಡಗಳ ಸೂಚ್ಯಂಕಗಳಲ್ಲಿ ಪ್ರಗತಿ ಸಾಧಿ ಸಲು ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಶ್ರಮಿಸಬೇಕು ಎಂದು ಸೂಚಿಸಿದರು.

ಎಲ್ಲ ಶಾಲೆಗಳಲ್ಲಿಯೂ ಶೌಚಾಲಯ, ಕುಡಿಯುವ ನೀರು ಪೂರೈಕೆ ಮಾಡಬೇಕು. ವಿದ್ಯುತ್‌ ವ್ಯವಸ್ಥೆಯೊಂದಿಗೆ ಸೋಲಾರ್‌ ಸೌಲಭ್ಯವನ್ನು ಕಲ್ಪಿಸಿಕೊಡುವ ಮೂಲಕ ಸ್ಮಾರ್ಟ್‌ ಕ್ಲಾಸ್‌ಗಳ ನಿರ್ವಹಣೆಗೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next