Advertisement
ಶಾಸಕ ಕೆ.ಮಹದೇವ್‌ಗೆ ಸಾಮಾನ್ಯ ಜ್ಞಾನವಿಲ್ಲ: ಕಳೆದ ಮೂರು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಅವರನ್ನು ತಾಲೂಕಿನ ಮುತ್ತಿನ ಮುಳುಸೋಗೆ ಗ್ರಾಮಕ್ಕೆ ಕರೆತಂದು 300 ಕೋಟಿ ರೂ. ವೆಚ್ಚದಲ್ಲಿ 150 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿ ಕೆಲಸ ಪ್ರಾರಂಭಿಸಲು ಗುತ್ತಿಗೆದಾರನಿಗೆ ಶೇ.10 ಹಣ ನೀಡಿ ಕೆಲಸ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದರ ಫಲವಾಗಿ ಇಂದು ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿವೆ. ಇದರ ಬಗ್ಗೆ ಸಾಮಾನ್ಯ ಜ್ಞಾನವಿಲ್ಲದ ಕ್ಷೇತ್ರದ ಶಾಸಕ ಕೆ.ಮಹದೇವ್ ತಾಲೂಕಾದ್ಯಂತ ಸಾರ್ವಜನಿಕರ ಮುಂದೆ ಹೋಗಿ ಕೆರೆ ತುಂಬಿಸುವ ಕಾರ್ಯಕ್ಕೆ ಸಿದ್ಧರಾಮಯ್ಯ ಹಣ ನೀಡಲಿಲ್ಲ, ಕುಮಾರಸ್ವಾಮಿ ಕೈ ಕಾಲಿಡಿದು ನಾನು ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಛೇಡಿಸಿದರು.
Related Articles
Advertisement
ಚುನಾವಣೆಗೆ ಸಿದ್ಧರಾಗಿ: ಕೆಲವೇ ದಿನಗಳಲ್ಲಿ 11 ಸಹಕಾರ ಸಂಘ ಹಾಗೂ ಪಿಎಲ್‌ಡಿ ಬ್ಯಾಂಕ್ ಸೇರಿದಂತೆ ಹಲವು ಚುನಾವಣೆಗಳು ಬರುತ್ತಿರುವುದರಿಂದ ಕಾರ್ಯಕರ್ತರು ಸನ್ನದ್ಧರಾಗುವಂತೆ ಸೂಚಿಸಿದರು.
ಮಹದೇವ್ ಸುಳ್ಳು ಹೇಳುವುದ ನಿಲ್ಲಿಸಲಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಪುಟಿದೇಳಲಿದೆ ಇದಕ್ಕೆ ಹುಣಸೂರು ಚುನಾವಣೆಯಲ್ಲಿ ಗಳಿಸಿದ ಅಭೂತ ಪೂರ್ವ ಗೆಲುವೇ ಸಾಕ್ಷಿ, ಬಿಜೆಪಿ ಸರ್ಕಾರ ತಮ್ಮ ವಿಫಲತೆಗಳ ವಿರುದ್ಧ ಹೋರಾಟ ನಡೆಸುವ ಚಳವಳಿಗಾರರನ್ನು ಜೈಲಿಗಟ್ಟುವ ಕೆಲಸದಲ್ಲಿ ನಿರತವಾಗಿದೆ. ತಂಬಾಕು ನಿಷೇಧದ ಬಗ್ಗೆ ಸಂಸದ ಪ್ರತಾಪ್ ಸಿಂಹ ಒಂದು ಹೇಳಿಕೆ ನೀಡಿದರೆ ಅವರದೆ ಪಕ್ಷದ ಡಾ.ಹರ್ಷವರ್ಧನ್ ತದ್ವಿರುದ್ಧ ಹೇಳಿಕೆ ನೀಡುತ್ತಾರೆ ಇನ್ನು ಶಾಸಕ ಕೆ.ಮಹದೇವ್ ತಾವು ಸರ್ಕಾರದಿಂದ ತಂದಿರುವ ಅನುದಾನ ಮತ್ತು ತಾಲೂಕಿನಲ್ಲಿ ಮಾಡಿರುವ ಕಾಮಗಾರಿ ಕೆಲಸಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಅದನ್ನು ಬಿಟ್ಟು ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದರು.
ಮುಖಂಡರಾದ ಬಿ.ಎಸ್.ರಾಮಚಂದ್ರ, ಸೀಗೂರು ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ, ಸದಸ್ಯರಾದ ಶಿವಮ್ಮ, ಶ್ರೀನಿವಾವ್, ಪುರಸಭಾ ಸದಸ್ಯರಾದ ಅಬ್ದುಲ್ ಅರ್ಷದ್, ಶ್ಯಾಮ…, ಮಂಜುನಾಥ್, ರವಿ, ಮುಖಂಡರಾದ ಚಂದ್ರಶೇಖರ್, ರಾಜಯ್ಯ, ಮೋಹನ್ ಕುಮಾರ್, ಡಿ.ಎ.ಜವರಪ್ಪ, ಪಿ.ಮಹದೇವ್, ಹೊಲದಪ್ಪ, ಲಕ್ಷ್ಮಣೇಗೌಡ, ತೆಲುಗಿನಕುಪ್ಪೆ ನಾಗಣ್ಣ, ವಿಷಕಂಠಯ್ಯ, ಜಯಲಕ್ಷ್ಮಮ್ಮ ಇತರರು ಇದ್ದರು.
ಬಹಿರಂಗ ಚರ್ಚೆಗೆ ಸವಾಲ್: ರಾಜ್ಯದಲ್ಲಿಯೇ ಅತಿ ಹೆಚ್ಚು ಸುಳ್ಳು ಹೇಳುವ ಶಾಸಕ ಎಂದರೆ, ಅದು ಪಿರಿಯಾಪಟ್ಟಣದ ಶಾಸಕ ಕೆ.ಮಹದೇವ್, ಇವರು ಮತ್ತು ಇವರ ಮಗ ಸೇರಿಕೊಂಡು ಪಕ್ಷದ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುವುದರಲ್ಲಿ ನಿರತರಾಗಿದ್ದಾರೆ. ನಾನು ಬಿಡುಗಡೆ ಮಾಡಿಸಿದ ಕೆಲಸಗಳಿಗೆ ಎರೆಡೆರಡು ಬಾರಿ ಗುದ್ದಲಿಪೂಜೆ ಮಾಡಿಸುತ್ತಿದ್ದಾರೆ, ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ ಹಾಗೂ ನನ್ನ ಅವಧಿಯಲ್ಲಿ ನಾನು ಏನು ತಂದಿದ್ದೇನೆ ಎಂಬುದರ ಬಗ್ಗೆ ಚರ್ಚೆಗೆ ಬರಲಿ ಎಂದು ಮಾಜಿ ಸಚಿವ ಕೆ.ವೆಂಕಟೇಶ್ ಸವಾಲ್ ಎಸೆದರು.