Advertisement

Bantwalaಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ನ ವಾಸು,ಉಪಾಧ್ಯಕ್ಷರಾಗಿ ಎಸ್ಡಿಪಿಐನ ಮುನೀಶ್ಆಯ್ಕೆ

01:34 PM Aug 22, 2024 | Team Udayavani |

ಬಂಟ್ವಾಳ: ಇಲ್ಲಿನ ಪುರಸಭಾ ಅಧ್ಯಕ್ಷರಾಗಿ ವಾಸು ಪೂಜಾರಿ ಲೊರೆಟ್ಟೋ ಹಾಗೂ ಉಪಾಧ್ಯಕ್ಷರಾಗಿ ಎಸ್ಡಿಪಿಐನ ಮುನೀಶ್ ಆಲಿ ಆಯ್ಕೆಯಾಗಿದ್ದಾರೆ.

Advertisement

ಪುರಸಭಾ ಒಟ್ಟು 27 ಸ್ಥಾನಗಳ ಪೈಕಿ 1 ಸ್ಥಾನ ತೆರವಾಗಿದ್ದು, ಬಿಜೆಪಿಯ 11 ಸ್ಥಾನ, ಕಾಂಗ್ರೆಸ್ ನ 11 ಹಾಗೂ ಎಸ್ಡಿಪಿಐ ನ 4 ಸ್ಥಾನ ಹೊಂದಿತ್ತು. ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಚುನಾವಣೆಯಲ್ಲಿ ಪಾಲ್ಗೊಂಡಿದ್ದು, ಬಿಜೆಪಿ ಸ್ಥಾನ 13ಕ್ಕೆ ಏರಿತ್ತು.

ಕಾಂಗ್ರೆಸ್ ನ ವಾಸು ಪೂಜಾರಿ ಅವರಿಗೆ ಎಸ್ ಡಿಪಿಐ ಬೆಂಬಲಿಸಿದ್ದು, ಉಪಾಧ್ಯಕ್ಷ ಸ್ಥಾನದ ಎಸ್ ಡಿಪಿಐನ ಮುನೀಶ್ ಆಲಿಗೆ ಕಾಂಗ್ರೆಸ್ ಬೆಂಬಲ ನೀಡಿದೆ.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಎ.ಗೋವಿಂದ ಪ್ರಭು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಸ್ಪರ್ಧಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next