Advertisement

Mangaluru: ಕರಾವಳಿ ಅಭಿವೃದ್ಧಿಗೆ ಪಕ್ಷಭೇದ ಮರೆತು ಶ್ರಮಿಸಬೇಕಿದೆ: ಚಂದ್ರಶೇಖರ್‌

01:16 AM Sep 15, 2024 | Team Udayavani |

ಮಂಗಳೂರು: ಕರಾವಳಿಯ ಅಭಿವೃದ್ಧಿಯ ದೃಷ್ಟಿಯಿಂದ ಜನತೆಗೆ ಏನು ಬೇಕೋ ಅದನ್ನು ನೀಡಲು ಪಕ್ಷಭೇದ ಮರೆತು ಶ್ರಮಿಸಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್‌ ಹೇಳಿದ್ದಾರೆ.

Advertisement

ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಗೆಲ್ಲಲು ವಿವಿಧ ರೀತಿಯಲ್ಲಿ ಕಸರತ್ತು ನಡೆಸಬಹುದು. ಆದರೆ ಗೆದ್ದ ಬಳಿಕ ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸಬೇಕು ಎಂದರು. 10 ವರ್ಷಗಳ ಬಿಜೆಪಿ ಅಧಿಕಾರ ಕಾಲದಲ್ಲಿ ಮಂಗಳೂರಿಗೆ ಹೇಳಿಕೊಳ್ಳುವ ಯೋಜನೆಗಳು ಬಂದಿಲ್ಲ. ಕರಾವಳಿ ಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅವ್ಯವಸ್ಥೆಯಲ್ಲಿದೆ. ಮಂಗಳೂರು ರೈಲ್ವೇ ವಿಭಾಗ ಮಾಡಲು ಮುಂದಾಗುತ್ತಿಲ್ಲ. ಉದ್ಯೋಗಗಳಲ್ಲಿ ಸ್ಥಳೀಯರಿಗೆ ಅವಕಾಶ ಸಿಗುತ್ತಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡದೆ ಜನಪರ ಕೆಲಸ ಮಾಡುವ ಅಗತ್ಯವಿದೆ ಎಂದರು.

ಅಭಿವೃದ್ಧಿ ರಾಜಕೀಯದಲ್ಲಿ ದಿ| ಅನಂತ್‌ ಕುಮಾರ್‌ ಮಾದರಿ ಕೇಂದ್ರದ ಮಾಜಿ ಸಚಿವ ದಿ| ಅನಂತ್‌ ಕುಮಾರ್‌ ಅವರು ಅಭಿವೃದ್ಧಿ ರಾಜಕೀಯದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಬೆಂಗಳೂರು ಅಭಿವೃದ್ಧಿಗೆ ಪಕ್ಷಭೇದ ಮರೆತು ಶ್ರಮಿಸಿದ್ದರು ಎಂದರು.

ಕರಾವಳಿ ಗೆಲ್ಲಲು ಶ್ರಮ: ವಸಂತಕುಮಾರ್‌
ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್‌ ಕುಮಾರ್‌ ಮಾತನಾಡಿ, ಕರಾವಳಿಯಲ್ಲಿ ನಮ್ಮದೇ ಕಾರ್ಯತಂತ್ರದ ಮೂಲಕ ಕಾರ್ಯಕರ್ತರು ಹಾಗೂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಗೆಲುವಿನ ಕಡೆಗೆ ಕೊಂಡೊಯ್ಯಲು ಮುಂದಾಗಿದ್ದೇವೆ ಎಂದರು.

ಸಹಬಾಳ್ವೆ, ಅಭಿವೃದ್ಧಿ ಅಗತ್ಯ: ಭಂಡಾರಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಕರಾವಳಿಯಲ್ಲಿ ಧರ್ಮದ ಆಧಾರದಲ್ಲಿ ನಡೆಯುವ ರಾಜಕೀಯವನ್ನು ಬದಿಗಿಟ್ಟು ಅಭಿವೃದ್ಧಿ ರಾಜಕೀಯ ನಡೆಯಬೇಕಿದೆ. ಶಿಕ್ಷಣ ಕಾಶಿಯಾಗಿರುವ ಮಂಗಳೂರಿಗೆ ಹೊರಗಿನಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಐಟಿ ಸಂಸ್ಥೆಗಳು ಕರಾವಳಿಯಲ್ಲಿ ಹೂಡಿಕೆಗೆ ಮುಂದಾಗು ತ್ತಿಲ್ಲ. ಧರ್ಮ ರಾಜಕಾರಣದ ಹೊರತಾಗಿ ಸಹಬಾಳ್ವೆ ಹಾಗೂ ಅಭಿವೃದ್ಧಿ ಅಗತ್ಯವಾಗಿದೆ ಎಂದರು.

Advertisement

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ವಿಜಯ ಮುಳುಗುಂದ, ಬಾಲರಾಜ್‌, ಸತ್ಯನಾರಾಯಣ, ಇನಾಯತ್‌ ಅಲಿ, ಎಂ.ಎಸ್‌. ಮುಹಮ್ಮದ್‌, ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next