Advertisement

“ವಾಸ್ತು’ಕನ್ನಡ ಅನುವಾದ ಪುಸ್ತಕ ಲೋಕಾರ್ಪಣೆ

12:39 AM Apr 18, 2019 | Sriram |

ಮಹಾನಗರ: ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತ “ವಾಸ್ತು’ ಕನ್ನಡ ಅನುವಾದ ಪುಸ್ತಕ ಲೋಕಾರ್ಪಣೆಯು ನಗರದ ವಿ.ವಿ. ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.

Advertisement

ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಭಾರ ಕುಲಪತಿ ಡಾ| ಕಿಶೋರಿ ನಾಯಕ್‌ ಅವರು ಪುಸ್ತಕ ಲೋಕಾರ್ಪಣೆಗೈದರು.

ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಹಂಪಿ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರೊಫೆಸರ್‌ ಪ್ರೊ| ಎ. ವಿ. ನಾವಡ, ವಾಸ್ತು ಕನ್ನಡ ಅನುವಾದಕಿ ಡಾ| ಗೀತಾ ಶೆಣೈ, ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ| ಉದಯ್‌ಕುಮಾರ ಎಂ.ಎ., ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲ ಫಾ| ಮೈಕಲ್‌ ಸಾಂತುಮಯರ್‌, ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಸಮಿತಿಯ ಸಂಯೋಜಕ ಡಾ| ಭೂಷಣ ಭಾವೆ, ಸದಸ್ಯ ಪಯ್ಯನೂರು ರಮೇಶ ಪೈ, ವಿಶ್ವ ವಿದ್ಯಾನಿಲಯದ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ರಾಮಕೃಷ್ಣ ಬಿ., ಹಿಂದಿ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ| ನಾಗರತ್ನ ರಾವ್‌, ಮಂಗಳೂರು ವಿಶ್ವ ವಿದ್ಯಾಲಯದ ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ| ಜಯವಂತ ನಾಯಕ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಕೊಂಕಣಿ ಸ್ನಾತಕೋತ್ತರ ಪದವಿ ಸಂಯೋಜಕ ಡಾ| ದೇವದಾಸ ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next