ಪತಿ ಸಬ್ಲಾಡಿ ಮಂಜಯ್ಯ ಶೆಟ್ಟಿ ಉದ್ಯಮಿಯಾಗಿದ್ದರೂ ವಸಂತಿ ಶೆಟ್ಟಿಯವರು ತಾವೇ ಸ್ವತಃ ಆಸಕ್ತಿಯಿಂದ ಪ್ರತ್ಯೇಕ ಉದ್ಯಮ ಆರಂಭಿಸಿ, ಉನ್ನತ ಸ್ಥಾನಕ್ಕೇರಿರುವುದು ವಿಶೇಷ.
Advertisement
15 ವರ್ಷಕ್ಕೂ ಹೆಚ್ಚು ಕಾಲದಿಂದ ಹುಣ್ಸೆಮಕ್ಕಿಯಲ್ಲಿ “ಕೋಸ್ಟಲ್ ಮಸಾಲ’ ಹೆಸರಲ್ಲಿ ಬೇರೆ ಬೇರೆ ತರಹದ ಸಾಂಬಾರ್ ಮಸಾಲ, ಹಪ್ಪಳ, ಸಂಡಿಗೆ, ಮಂಗಳೂರು ರೊಟ್ಟಿ, ಸ್ನ್ಯಾಕ್ಸ್ ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ. ದುರ್ಗಾ ಹೋಮ್ ಇಂಡಸ್ಟ್ರೀಸ್ ಎನ್ನುವ ಕಾರ್ಖಾನೆ ನಡೆಸುತ್ತಿರುವ ಇವರು 15ಕ್ಕೂ ಹೆಚ್ಚು ಮಂದಿಗೆ ಕೆಲಸ ನೀಡಿದ್ದಾರೆ. ಅವರಿಗೆ ಪಿಎಫ್, ಇಎಸ್‌ಐ ಸೌಲಭ್ಯಗಳನ್ನೂ ನೀಡುತ್ತಾರೆ.
ಹೊರ ದೇಶದಲ್ಲಿ ಕೆಲಸ ಮಾಡುವ ಇಲ್ಲಿನವರು ಇವರ ಉತ್ಪನ್ನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಮುಂಬಯಿಯ ಹೊಟೇಲ್‌ಗಳಲ್ಲಿಯೂ ಕೋಸ್ಟಲ್ ಮಸಾಲಕ್ಕೆ ಬೇಡಿಕೆಯಿದೆ. ಕುಂದಾಪುರದಿಂದ ಸುರತ್ಕಲ್ ವರೆಗೆ, ಭಟ್ಕಳ, ತೀರ್ಥಹಳ್ಳಿಗಳಿಂದಲೂ ಬೇಡಿಕೆಯಿದೆ. ಹೈನುಗಾರಿಕೆಯಲ್ಲಿ ಪ್ರಶಸ್ತಿ
ಉದ್ಯಮದೊಂದಿಗೆ ಕೃಷಿಯೂ ಇವರ ಆಸಕ್ತಿಯ ಕ್ಷೇತ್ರವಾಗಿದ್ದು, ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಹೈನುಗಾರಿಕೆಯಲ್ಲಿಯೂ ಯಶ ಕಂಡಿದ್ದು, 4 ವರ್ಷಗಳಿಂದ ಕರಾವಳಿ ಜಿಲ್ಲೆಯಲ್ಲಿ ಹೈನುಗಾರಿಕೆಯಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಖಾಯಂ.
Related Articles
ಆರ್ಥಿಕ ಅಡಚಣೆಯಿರುವ ಅನೇಕ ಬಡ ಮಕ್ಕಳಿಗೆ ಪ್ರತಿ ವರ್ಷ ಬಸ್ ಪಾಸ್ ಹಣವನ್ನು ಇವರೇ ಭರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅನೇಕ ಸಮಾಜಮುಖೀ ಚಿಂತನೆಯಿರುವ ಸಂಘ- ಸಂಸ್ಥೆಗಳಿಗೆ ನೆರವು ಕೂಡ ನೀಡುತ್ತಿದ್ದಾರೆ.
Advertisement
ಸಮ್ಮಾನವಸಂತಿ ಶೆಟ್ಟಿ ಅವರ ಉದ್ಯಮ ಕ್ಷೇತ್ರದಲ್ಲಿನ ಯಶೋಗಾಥೆಗೆ ಕೋಟ ಪಡುಕರೆಯ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ವೇಳೆ ಸಮ್ಮಾನಿಸಲಾಗಿತ್ತು. ಊರಲ್ಲಿ ನಡೆದ ಗಣೇಶೋತ್ಸವದಲ್ಲೂ ಇವರನ್ನು ಗೌರವಿಸಲಾಗಿತ್ತು. ಯಶಸ್ಸು ಸಾಧ್ಯ
ಏನಾದರೂ ಸಾಧಿಸಬೇಕು ಎನ್ನುವ ಛಲ, ಇನ್ನೊಬ್ಬರಿಗೆ ಒಳ್ಳೆಯದು ಮಾಡಬೇಕೆನ್ನುವ ಹಂಬಲ, ಮನೆಯವರ ಸಹಕಾರವಿದ್ದರೆ ಮಹಿಳೆಯೂ ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಗಳಿಸಲು ಸಾಧ.
-ವಸಂತಿ ಶೆಟ್ಟಿ ,ಉದ್ಯಮಿ - ಪ್ರಶಾಂತ್ ಪಾದೆ