ಮುಂಬಯಿ: ವಸಾಯಿ ರೋಡ್ ಪಶ್ಚಿಮದ ಗೌಡರ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದವರ ಬಾಲಾಜಿ ಸೇವಾ ಸಮಿತಿಯ ಶ್ರೀ ವೆಂಕಟರಮಣ ಭಜನ ಮಂಡಳಿಯವರ ಬಾಲಾಜಿ ಮಂದಿರದಲ್ಲಿ ಕಾರ್ತಿಕ ಹುಣ್ಣಿಮೆ ಮಹೋತ್ಸವವು ನ. 4ರಂದು ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ವೇದಮೂರ್ತಿ ಗಿರಿಧರ ಭಟ್ ಅವರ ಮಾರ್ಗದರ್ಶನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಇದೇ ಸಂದರ್ಭದಲ್ಲಿ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಂಡಳಿಯವರು ಕನ್ನಡ, ಕೊಂಕಣಿ, ಮರಾಠಿ ಮತ್ತು ಹಿಂದಿ ಭಜನೆಗಳನ್ನು ಹಾಡಿ ನೆರೆದ ಭಕ್ತಾದಿಗಳನ್ನು ರಂಜಿಸಿದರು.
ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ನಿಡ್ಡೋಡಿ ಪ್ರಕಾಶ್ ಪ್ರಭು, ತಬಲಾದಲ್ಲಿ ಮನೋಜ್ ಆಚಾರ್ಯ, ಪಖ್ವಾಜ್‌ನಲ್ಲಿ ರಾಜೇಶ್ ಪೈ ಮತ್ತು ಪ್ರಸಾದ್ ಪ್ರಭು ಸಹಕರಿಸಿದರು. ಮಂದಿರದ ಮತ್ತು ಪರಿಸರವನ್ನು ರಂಗೋಲಿ ಮತ್ತು ದೀಪ ಬೆಳಗಿಸಿ ಮಹಾಮಂಗಳಾರತಿ ನಡೆಯಿತು. ಭಕ್ತಾದಿಗಳು ವಿಶ್ವರೂಪ ದರ್ಶನದಲ್ಲಿ ಪಾಲ್ಗೊಂಡಿದ್ದರು. ಪಾಲ^ರ್ ಜಿಲ್ಲೆಯ ವಸಾಯಿ ಮಾಣಿಕ್‌ಪುರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಪಾಟೀಲ್ ಮತ್ತು ಥಾಣೆಯ ಭ್ರಷ್ಟಾಚಾರ ನಿಗ್ರಹ ದಳದ ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಮದನೆ ಪರಿವಾರದವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ವಾಲ್ಕೇಶ್ವರ ಮಠದ ಉಪೇಂದ್ರ ಆಚಾರ್ಯ, ನಲಸೋಪರ ಜಿಎಸ್‌ಬಿ ಸೇವಾ ಮಂಡಳಿ ಸಯಾನ್ ಇದರ ಸಂತೋಷ್ ಕುಡ್ವ, ಜಿಎಸ್‌ಬಿ ಮಂಡಳಿ ವಿರಾರ್ ರಾಮದಾಸ್ ಶ್ಯಾನ್‌ಭಾಗ್, ವಿಷ್ಣು ಶ್ಯಾನ್‌ಭಾಗ್, ಮೀರಾ-ಭಾಯಂದರ್ ಜಿಎಸ್‌ಬಿಯ ಕಿರಣ್ ಶಿರಾಳಿ, ಕರ್ನಾಟಕ ಸಂಘ ವಸಾಯಿ ಅಧ್ಯಕ್ಷ ಓ. ಪಿ. ಪೂಜಾರಿ, ಶಾಂತಿಧಾಮ ಸೇವಾ ಸಮಿತಿಯ ವಿಶ್ವಸ್ತ ಅಭಿಜಿತ್ ನರಸಿಂಹ ಪ್ರಭು, ಇತರ ಸಂಘ-ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರತೀ ಶನಿವಾರ ಜರಗರುವ ಭಜನೆಯ ಶಾಶ್ವತ ಸೇವಾ ದಾರರಿಗೆ, ವಿಶೇಷ ಸೇವಾದಾರರಿಗೆ ಮತ್ತು ಗಣ್ಯರಿಗೆ ಪ್ರಸಾದ ವಿತರಿಸಲಾಯಿತು. ಈ ಉತ್ಸವದ ಶಾಶ್ವತ ಸೇವಾದಾರರಾದ ಸಮಿತಿಯ ಉಪಾಧ್ಯಕ್ಷ ಹೊಸಮಠ ಮನೋಹರ ಶೆಣೈ ಮತ್ತು ಸಮಿತಿಯ ಜತೆ ಕಾರ್ಯದರ್ಶಿ ಮಂಜೇಶ್ವರ ವಿವೇಕಾನಂದ ಭಕ್ತ ಪರಿವಾರದಿಂದ ಅನ್ನಸಂತರ್ಪಣೆ ಜರಗಿತು.
ದೇವರ ಮಂಟಪಕ್ಕೆ ಅಲಂಕರಿಸಲು ಹೂವಿನ ಸೇವೆ ಉದ್ಯಮಿ ನಿಟ್ಟೆ ಜಯಾನಂದ ಶೆಣೈ ಮತ್ತು ಬಾಲಾಜಿ ಟೂರ್ ಮತ್ತು ಟ್ರಾವೆಲ್ಸ್‌ನ ಮಾಲಕ ರಮೇಶ್ ಪೈ ಪ್ರಾಯೋಜಿಸಿದ್ದರು. ಸಮಿತಿಯ ಅಧ್ಯಕ್ಷ ತಾರಾನಾಥ ಪೈ, ಗೌರವಾಧ್ಯಕ್ಷ ವಸಂತ್ ನಾಯಕ್, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಕೋಶಾಧಿಕಾರಿ ವೆಂಕಟ್ರಾಯ ಪ್ರಭು, ಸಂಚಾಲಕ ದೇವೇಂದ್ರ ಭಕ್ತ ಇತರ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿ ಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಸಮಿತಿಯ ಎಲ್ಲಾ ಸದಸ್ಯರ ಉಸ್ತುವಾರಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.ಮಹಿಳಾ ವಿಭಾಗದವರಿಂದ ಸಲ್ಲಿಸಿದ ಹೂವಿನ ರಂಗೋಲಿ, ಎಚ್. ವಿನಾಯಕ ಪೈ ನೇತೃತ್ವದಲ್ಲಿ ಅಲಂಕರಿಸಿದ ದೇವರ ಮಂಟಪ ನೆರೆದ ಭಕ್ತರನ್ನು ರಂಜಿಸಿತು. ಮಂದಿರದ ಮತ್ತು ಜೈ ಅಮ್ಮ ಅನ್ನಪೂರ್ಣೇಶ್ವರಿ ಸಭಾಗೃಹದ ಆವರಣದಲ್ಲಿ 3 ಅಗ್ನಿಶಾಮಕ ಯಂತ್ರ ಗಳನ್ನು ಮಹಿಳಾ ವಿಭಾಗದ ಉಪಾಧ್ಯಕ್ಷೆ ಸ್ಮಿತಾ ಶ್ರೀನಿವಾಸ ಪಡಿಯಾರ್ ಪರಿವಾರದವರು ಪ್ರಾಯೋಜಿಸಿದ್ದರು.