Advertisement

ವಸಾಯಿ ತಾಲೂಕು ಮೊಗವೀರ ಸಂಘ: ಗುರುಪೂರ್ಣಿಮೆ

12:31 PM Jul 31, 2018 | Team Udayavani |

ಮುಂಬಯಿ: ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಗುರುಪೂರ್ಣಿಮೆ ಆಚರಣೆಯು ಜು. 27 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಘದ ಕಚೇರಿಯಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಸದಸ್ಯರು ಹಾಗೂ ವಸಾಯಿ ಸ್ಥಳೀಯ ನಾಗರಿಕರು ಒಂದಾಗಿ ಶ್ರೀ ನಿತ್ಯಾನಂದ ಸ್ವಾಮೀಜಿಯವರ ಭಾವಚಿತ್ರವನ್ನು ವಿಶೇಷವಾಗಿ ಆಲಂಕರಿಸಿ ಗುರು ದೇವರ ಸ್ತುತಿಯೊಂದಿಗೆ ಸುಮಾರು ಮೂರು ತಾಸುಗಳ ಕಾಲ ಭಜನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Advertisement

ವಸಾಯಿ ತಾಲೂಕು ಮೊಗ ವೀರ ಸಂಘವು 2010 ರಲ್ಲಿ ಗುರು ಪೂರ್ಣಿಮೆಯ ದಿನದಂದು ಸ್ಥಾಪನೆ ಗೊಂಡಿದ್ದು, ಪ್ರತೀ ವರ್ಷ ಆ ದಿನವನ್ನು ಸರ್ವ ಸದಸ್ಯರು ಒಗ್ಗಟ್ಟಾಗಿ ಉತ್ಸಾಹದಿಂದ ಸಂಘದ ಸ್ಥಾಪನಾ ದಿನಾಚರಣೆಯನ್ನಾಗಿ ಆಚರಿಸುತ್ತಿ ದ್ದಾರೆ. ಕಳೆದ 8 ವರ್ಷಗಳಿಂದ ಶ್ರೀ ಗುರುಗಳ ಅನುಗ್ರಹದಿಂದ ಸಂಘದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗುತ್ತಿದ್ದು, ವಸಾಯಿ ಪರಿಸರದಲ್ಲಿ ಮೊಗವೀರ ಸಂಘಟನೆಯು ಹಲವಾರು ಸಮಾಜಮುಖೀ ಸೇವೆಯೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿ, ಭಜನ ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಸರ್ವತೋಮುಖ ಶ್ರೇಯಸ್ಸಿಗಾಗಿ ಪ್ರಾರ್ಥನೆಗೈಯಲಾಯಿತು.

ಆನಂತರ ಸಂಘದ ಸ್ಥಾಪಕಾಧ್ಯಕ್ಷ ಚಂದ್ರಶೇಖರ ಪುತ್ರನ್‌ ಅವರು ಮಾತನಾಡಿ,  ಮುಂದಿನ ದಿನ ಗಳಲ್ಲಿ ಸಂಘವು ವರ್ಷಂಪ್ರತಿ ಆಚರಿಸಿಕೊಂಡು ಬರುವಂತಹ ಆಟಿಡೊಂಜಿ ದಿನ ಕಾರ್ಯಕ್ರಮವು ಅರ್ಥವತ್ತಾಗಿ ನಡೆದುಕೊಂಡು ಬಂದಿದ್ದು, ಈ ಯಶಸ್ವಿ ಕಾರ್ಯಕ್ರಮವು ಆ. 5 ರಂದು ನಡೆಯಲಿದೆ. 

ಸರ್ವ ಸದಸ್ಯರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಜರಗಲಿರುವ ಈ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವಿರಲಿ ಎಂದರು.

ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.      

Advertisement

ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next